ಕೋಲಾರ

ಪೊಲೀಸರಿಗೆ ಹೃದ್ರೋಗ ಉಚಿತ ಶಿಬಿರ

Published On :

ಪಟ್ಚಣದ ಪೊಲೀಸ್ ವಸತಿ ನಿಲಯದ ಬಳಿ ಪೊಲೀಸ್ ಸಿಬ್ಬಂದಿಗೆ ಟಮಕಾ ನಾರಾಯಣ ಹೃದಯಾಲಯದಿಂದ ನಡೆಸಲಾದ ಹೃದ್ರೋಗ  ಉಚತ ಶಿಬಿರವನ್ನು ಮುಳಬಾಗಲು ಡಿವೈಎಸ್ಪಿ ಟಿ. ಸಿದ್ದಪ್ಪ ಉದ್ಫಾಟಿಸಿದರು. ಪಟ್ಟಣದ ಠಾಣೆಯಲ್ಲಿ 65 ಮತ್ತು ನಂಗಲಿ ಠಾಣೆಯಲ್ಲಿ 40 ಮಂದಿ ಸಿಬ್ಬಂದಿ ಇದ್ದು ಏಲ್ಲರೂ ಶಿಬಿರದ ಅನುಕೂಲ ಪಡೆದರು.
ಲಾರಿ ಮಾಲೀಕರಿಗೆ ಸೂಚನೆ
ಮುಳಬಾಗಲು: ತಾಲೂಕಿನ ಹಲವಾರು ಗ್ರಾಮಗಳಿಂದ ಅಕ್ರಮವಾಗಿ ಮರಳನ್ನು ಲಾರಿಗಳಲ್ಲಿ ಸಾಗಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನಲೆಯಲ್ಲಿ ಜಿಲ್ಲಾ ಆಡಳಿತ ದೃಢ ನಿರ್ಧಾರ ತೆಗೆದುಕೊಂಡು ನೂರಾರು ಅಕ್ರಮ ಮರಳು ಲಾರಿಗಳನ್ನು ಮುಟ್ಚುಗೋಲು ಹಾಕಿಕೊಂಡು ಲಕ್ಷಾಂತರ ರುಪಾಯಿ ದಂಡ ವಸೂಲಿ ಮಾಡಿದೆ ಎಂದು ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ತಿಳಿಸಿದ್ದಾರೆ. ಇಷ್ಟು ಕ್ರಮ ತೆಗೆದುಕೊಂಡರು ಕೆಲವು ಲಾರಿಗಳು ಅಕ್ರಮ ಸಾಗಣೆಯಲ್ಲಿ ತೊಡಗಿದ್ದು ಅಂತಹವರ ವಿರುದ್ಧ ತಾಲೂಕು ಆಡಳಿತ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಠಾಣೆಗಳಲ್ಲಿ ಇದ್ದೂ ಇಲ್ಲದಂತಿರುವ ಫೋನ್
ಚಿಂತಾಮಣಿ: ಸಾರ್ವಜನಿಕರ ಪ್ರಾಣ-ಆಸ್ತಿಯನ್ನು ರಕ್ಷಿಸಲು ಆರಕ್ಷಕ ಠಾಣೆಗಳಿಗೆ ಕರೆ ಮಾಡಲು ದೂರವಾಣಿ ಸಂಪರ್ಕ ಇದ್ದು, ಇಲ್ಲವಂತಾಗಿದೆ ಎಂದು ನಾಗರೀಕರು ಆರೋಪಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ದೊಡ್ಡ ತಾಲೂಕು ಕೇಂದ್ರವಾದ ಚಿಂತಾಮಣಿ ವ್ಯಾಪ್ತಿಗೆ ಒಳಪಟುವ ಗ್ರಾಮಾಂತರ ಪೊಲೀಸ್ ಠಾಣೆ, ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ, ಬಟ್ಲಹಳ್ಳಿ ಪೊಲೀಸ್ ಠಾಣೆಗಳು ಪೊಲೀಸ್ ಇಲಾಖೆಯಲ್ಲಿಯೇ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಎಂದು ಗುರುತಿಸಲ್ಪಟ್ಟ ಠಾಣೆಗಳಾಗಿವೆ. ಸಾರ್ವಜನಿಕರ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಲು ಸರ್ಕಾರ ಪೊಲೀಸ್ ಇಲಾಖೆಗೆ ಕೋಟ್ಯಂತರ ರು. ಅನುದಾನವನ್ನು ಬಿಡುಗಡೆ ಮಾಡಿದ್ದರೂ ಸ್ಥಳೀಯ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೂರವಾಣಿ ಸಂಪರ್ಕಗಳು ಸ್ಥಗಿತಗೊಂಡಿವೆಯೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ನೊಂದ ಜನರು ಮತ್ತು ಅನ್ಯಾಯಕ್ಕೊಳಗಾದ ಮುಗ್ಧ ಜನರು ಆರಕ್ಷಕ ಠಾಣೆಗಳಾದ ಚಿಂತಾಮಣಿ ಗ್ರಾಮಾಂತರ ಠಾಣೆ, ಬಟ್ಲಹಳ್ಳಿ, ಕೆಂಚಾರ್ಲಹಳ್ಳಿ ಠಾಣೆಗಳಲ್ಲಿ ದೂರವಾಣಿ ಸಂಪರ್ಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ನಾಗರೀಕರಿಗೆ ತುಂಬಾ ತೊಂದರೆಯಾಗಿದೆ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಬಿಸಿ ಮುಟ್ಟಿಸಿ ದೂರವಾಣಿ ಸಂಪರ್ಕಗಳನ್ನು ಸರಿಪಡಿಸದಿದ್ದಲ್ಲಿ ಜನರು ನೆಮ್ಮದಿಯಿಂದ ಇರಲು ಸಾಧ್ಯವೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.