ಮಹಿಳೆ ಕೊಲೆ ಪ್ರಕರಣ: ನಾಲ್ವರ ಬಂಧನ
ಗುಡಿಬಂಡೆ: ಅರಣ್ಯದಲ್ಲಿ ಮಹಿಳೆಯೊಬ್ಬಳನ್ನು ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಡಿಬಂಡೆ ಪೊಲೀಸರು ಇನ್ನೂ ನಾಲ್ವರನ್ನು ಬಂಧಿಸಿದ್ದಾರೆ. ವಿರೇಂದ್ರ, ಸಿಕಂದರ್, ನಾಸಿರ್ ಮತ್ತು ಲಿಂಗಾರೆಡ್ಡಿ ಬಂಧಿತರು.
ಪ್ರಕರಣದ ಹಿನ್ನೆಲೆ: ನ.9 ರಂದು ಚಿಕ್ಕಬಳ್ಳಾಪುರ ತಾಲೂಕಿನ ಕಾಚೂರು ಗ್ರಾಮದ ನಿವಾಸಿ ನಾಗರಜಪ್ಪನ ಪತ್ನಿ ನಾಗರತ್ನಮ್ಮ (40) ಎಂಬಾಕೆಯ ಕೊಲೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿತ್ತು.
ಕೊಲೆಯಾದ ನಾಗರತ್ನಮ್ಮನ ಗಂಡ ನಾಗರಜಪ್ಪನಿಗೆ 2 ಹೆಂಡತಿಯರಿದ್ದು, ಮೊದಲನೆ ಹೆಂಡತಿ ಲಕ್ಷ್ಮಮ್ಮನ ಮಕ್ಕಳಿಗೂ ಹಾಗೂ ಎರಡನೇ ಹೆಂಡತಿಯಾದ ನಾಗರತ್ನಮ್ಮನವರ ಕುಟುಂಬಕ್ಕೂ ಜಮೀನು ವಿಚಾರದಲ್ಲಿ ವೈಷಮ್ಯವಿತ್ತೆಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಮೊದಲನೆ ಹೆಂಡತಿ ಮಕ್ಕಳಾದ ಬಿರೇಶ್ ಮತ್ತು ರಾಜೇಶ್ ಎಂಬುವವರು ಮೇಲ್ಕಂಡ ಆರೋಪಿಗಳಲ್ಲಿ ಒಬ್ಬನಾದ ವಿರೇಂದ್ರನ ಮೂಲಕ ಲಿಂಗಾರೆಡ್ಡಿ ಎಂಬುವರನ್ನು ಸಂಪರ್ಕಿಸಿ ಕೊಲೆ ಮಾಡಲು ಸುಪಾರಿ ನೀಡಿದ್ದರು ಹಾಗೂ ಕೃತ್ಯಕ್ಕೆ ನೆರವಾಗಲು ತಮ್ಮ ಬಳಿಯಿದ್ದ ಮಾರುತಿ ವ್ಯಾನ್ ನೀಡಿ ನಾಗರತ್ನಮ್ಮಳ ಚಲನ ವಲನಗಳ ಮೇಲೆ ನಿಗಾ ಹಿಡಿಸಿದ್ದರು ಎನ್ನಲಾಗಿದೆ.
ನ.9 ರ ಶುಕ್ರವಾರ ತನ್ನ ಮೊಮ್ಮಗನ ಜೊತೆ ದೇವಸ್ಥಾನಕ್ಕೆ ತೆರಳಿದ್ದ ನಾಗರತ್ನಮ್ಮಳನ್ನು ಹಿಂಬಾಲಿಸಿ ಸಮಯ ಸಾಧಿಸಿ ಅರಣ್ಯ ಪ್ರದೇಶದಲ್ಲಿ ಆಕೆಯ ಕೊಲೆ ಮಾಡಿದ್ದರು. ಈ ಪ್ರಕರಣವನ್ನು ಎಸ್ಪಿ ಶಿವಪ್ರಸಾದ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ದೇವಯ್ಯ ನೇತೃತ್ವದಲ್ಲಿ ಗುಡಿಬಂಡೆ ಸರ್ಕಲ್ ಇನ್ಸಪೆಕ್ಟರ್ ಶಿವಕುಮಾರ್, ಸಬ್ ಇನ್ಸಪೆಕ್ಟರ್ ನರಸಿಂಹಮೂರ್ತಿ ಹಾಗೂ ಸಿಬ್ಬಂದಿ ಅಶ್ವತ್ಥ, ಮುರಳಿ, ಶ್ರೀನಾಥ್, ಶ್ರೀಪತಿ ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

