ಕೋಲಾರ

ಎಚ್ಚೆತ್ತುಕೊಂಡ ಆಡಳಿತ: ನಾಮಫಲಕ ಬದಲು

Published On :

ಟೇಕಲ್: ಇತ್ತೀಚೆಗೆ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ಮಾಲೂರು ತಾಲೂಕಿನಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರೆಂಬುದು ಹಲವಾರು ನಾಡ ಕಚೇರಿಗಳ ಮುಂಭಾಗದಲ್ಲಿರುವ ಫ್ಲೆಕ್ಸ್ಬೋರ್ಡ್ಗಳಲ್ಲಿ  ಸಾರ್ವಜನಿಕರಲ್ಲಿ ಬಹುತೇಕ ಗೊಂದಲ ಮೂಡಿಸುತ್ತಿದೆ ಎಂಬುದು ಜನರಲ್ಲಿ  ಬಂದಿರುವ ಗೊಂದಲದ ಗೂಡು ಎಂಬ ಸುದ್ದಿ ಪ್ರಕಟಿಸಲಾಗಿತ್ತು. ಇದರ ಫಲಶೃತಿಯಾಗಿ ತಾಲೂಕು ಆಡಳಿತ ಈ ಬಗ್ಗೆ ಕ್ರಮ ಕೈಗೊಂಡಿದ್ದು ಫ್ಲೆಕ್ಸ್ಗಳಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಎಂದೆ ಬಿಂಬಿಸಲಾಗಿತ್ತು. ಆದರೆ ಇದೀಗ ಅದನ್ನು ತೆಗೆದು ನಾಮಫಲಕಗಳನ್ನು ಖಾಲಿ ಮಾಡಲಾಗಿದೆ. ಇನ್ನೂ ಕೆಲವು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೀರಭಾಗ್ಯ ಯೋಜನೆಯ ನಾಮಫಲಕಗಳನ್ನು ಹಾಕಲಾಗಿದ್ದು ಸುದ್ದಿ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದೆ. ಟೇಕಲ್, ಮಾಸ್ತಿ, ಕೆ.ಜಿ. ಹಳ್ಳಿ, ಬನಹಳ್ಳಿ, ದಿನ್ನಹಳ್ಳಿ ಇನ್ನೂ ಮುಂತಾದ ಕಡೆ ರಾಜ್ಯ ಆಡಳಿತ ಪಕ್ಷದ ಬರಹಗಳನ್ನು ನಾಮಫಲಕಗಳಲ್ಲಿ ಹಾಕಲು ಯೋಜನೆ ರೂಪಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.