ಕೋಲಾರದಲ್ಲಿ ಕರೆಂಟ್ ಕಾಟ
ಕೋಲಾರ: ಬೇಸಿಗೆ ಆರಂಭಕ್ಕೆ ಮುನ್ನವೇ ಕೋಲಾರ ಜಿಲ್ಲೆಯ ಗ್ರಾಹಕರಿಗೆ ಬೆಸ್ಕಾಂ ಅವೈಜ್ಞಾನಿಕ ಲೋಡ್ ಶೆಡ್ಡಿಂಗ್ ಮೂಲಕ ಕಿರಿಕಿರಿಯನ್ನುಂಟು ಮಾಡಿದೆ.
ಕಳೆದ ಐದಾರು ವರ್ಷಗಳಿಂದ ಗ್ರಾಹಕರು ಲೋಡ್ ಶೆಡ್ಡಿಂಗ್ ವೇಳೆ ನಿಗದಿ ಮಾಡುವಂತೆ ಮಾಡಿ ಸರ್ಕಾರಕ್ಕೆ ಮನವಿ ಪತ್ರಗಳನ್ನು ನೀಡಿದರು, ಪ್ರತಿಭಟನೆಗಳು ನಡೆಸಿದರೂ ತಲೆ ಕೆಡಿಸಿಕೊಳ್ಳದ ಬೆಸ್ಕಾಂ ಅಧಿಕಾರಿಗಳು ಲೋಡ್ ಶೆಡ್ಡಿಂಗ್ ತಮ್ಮ ವ್ಯಾಪ್ತಿಗೆ ಬರಲ್ಲ. ಕೆಪಿಟಿಸಿಎಲ್ ಸೂಚನೆಯಂತೆ ನಾವು ನಡೆದುಕೊಳ್ಳಬೇಕಾಗಿದೆ ಎಂದು ಕೈಚೆಲ್ಲಿ ಕುಳಿತಿರುವುದರಿಂದ ಕರೆಂಟ್ ಕಟ್ಟಾಗಿ ಪರದಾಡುವಂತಾಗಿದೆ.ಕೋಲಾರಕ್ಕೆ ದಿನಕ್ಕೆ 150 ಮೆಗಾ ವ್ಯಾಟ್ ವಿದ್ಯುತ್ ಅವಶ್ಯಕವಾಗಿದ್ದು, ಈಗ ಸಿಗುತ್ತಿರುವುದು ಕೇವಲ 30 ರಿಂದ 40 ಮೆಗಾ ವ್ಯಾಟ್ ಮಾತ್ರವಾಗಿರುವುದರಿಂದ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಕೆ ಮಾಡಲಾಗುತ್ತಿಲ್ಲವೆಂದು ಬೆಸ್ಕಾಂ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕೋಲಾರದಲ್ಲಿ ಸಂಜೆ ಹೊತ್ತು ವಿದ್ಯುತ್ ತೆಗೆಯುತ್ತಿರುವುದರಿಂದ ಹೆಣ್ಣು ಮಕ್ಕಳು ಧೈರ್ಯವಾಗಿ ಓಡಾಡಲು ಕಷ್ಟವಾಗುತ್ತಿದೆ. ಸರಗಳ್ಳತನ ನಡೆದಿರುವ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ವಿದ್ಯುತ್ ಇಲ್ಲದೆ ಮನೆಗಳಿಂದ ಹೊರ ಬರುವುದಕ್ಕೆ ಹೆದರುತ್ತಿದ್ದಾರೆ.ಕೋಲಾರ ಜಿಲ್ಲೆಗೆ ಕನಿಷ್ಠ 100 ಮೆಗಾ ವ್ಯಾಟ್ ವಿದ್ಯುತ್ ನೀಡಿ ಎಂದು ಜನಪ್ರತಿನಿಧಿಗಳು ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ತರಬೇಕು. ಲೋಡ್ ಶೆಡ್ಡಿಂಗ್ ವೇಳೆ ನಿಗದಿ ಮಾಡಿಸಬೇಕು.ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ, ರೈತರ ಹೊಲಗಳಿಗೆ ನೀರು ಹಾಯಿಸುವುದಕ್ಕೆ ಮತ್ತು ಕೈಗಾರಿಕೆಗಳಿಗೆ ಅಡ್ಡಿಯಾಗದ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡಿಸಲು ಜನಪ್ರತಿನಿಧಿಗಳು ಗಮನ ನೀಡಬೇಕೆಂದು ಜನತೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

