ಕೋಲಾರ

ಅನಾಥ ವೃದ್ಧನಿಗೆ ಬೇಕಿದೆ ಸಹಾಯ

Published On :

ಗುಡಿಬಂಡೆ: ಪಟ್ಟಣದ ಹೊರವಲಯದ ಕೆರೆಯ ಬಳಿಯಿರುವ ಈಶ್ವರನ ದೇವಾಲಯದ ಆವರಣದಲ್ಲಿ ವೃದ್ಧನೊಬ್ಬ ಕಳೆದ 5 ದಿನಗಳಿಂದ ನೀರು ಆಹಾರವಿಲ್ಲದೆ ಮಲಗಿದ್ದಾನೆ. ದೈಹಿಕವಾಗಿ ದುರ್ಬಲನಾಗಿರುವ ಆತ ತನ್ನ ಹೆಸರು ನರಸಿಂಹರೆಡ್ಡಿ, ನನ್ನ ಊರು ಪೈಯೂರು ಎಂಬುದನ್ನು ಬಹಳ ಕಷ್ಟಪಟ್ಟು ಹೇಳಿದ. ಸುಮಾರು 70 ವರ್ಷ ವಯಸ್ಸಿನ ಈ ವೃದ್ಧ ಏಳಲೂ ಆಗದ ಸ್ಥಿತಿಯಲ್ಲಿ ಹಾಸಿಗೆ ಹೊದಿಕೆ ಇಲ್ಲದೆ ನೆಲದ ಮೇಲೆ ನರಳುತ್ತಾ ಬಿದ್ದಿರುವ ದೃಶ್ಯ ಮನಕಲಕುವಂತಿದೆ. ವೃದ್ಧನ ದಯನೀಯ ಸ್ಥಿತಿ ಕಂಡು ಮರುಕಗೊಂಡ ದಾರಿಹೋಕರು ಈತನಿಗೆ ನೀಡುತ್ತಿರುವ ತಿಂಡಿಯೇ ಜೀವ ಉಳಿಸಿಕೊಳ್ಳಲು ನೆರವಾಗಿವೆ. ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಾಯ ಹಸ್ತ ಚಾಚುವ ಮೂಲಕ ಜೀವನದ ಮುಸ್ಸಂಜೆಯಲ್ಲಿರುವ ಈ ವೃದ್ಧನಿಗೆ ಪುನರ್ವತಿ ಕಲ್ಪಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.