ಕೋಲಾರ

ಕರಾಟೆಯಲ್ಲಿ ಚಿನ್ನದ ಪದಕ

Published On :

ಗೌರಿಬಿದನೂರು: ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿಯ ಎಂ. ದರ್ಶನ್ ಇತ್ತೀಚೆಗೆ ಮಲೇಶಿಯಾದಲ್ಲಿ ನಡೆದ 5ನೇ ಗೋಜುಕ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆದಿದ್ದಾನೆ. ಡಿ.ಪಾಳ್ಯ ಸಮೀಪದ ಗೊಲ್ಲರ ಕಾಲೋನಿಯ ಶಿಕ್ಷಕ ಮರಿಯಪ್ಪ ಮತ್ತು ಸಿ.ಆರ್. ಪುಷ್ಪಲತ ದಂಪತಿಗಳ ಮಗನಾದ ಎಂ. ದರ್ಶನ್, ಹಿಂದೆಯೂ ಹಲವಾರು ಕರಾಟೆ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾರೆ. ಇವರನ್ನು ಶಾಲೆಯ ಮುಖ್ಯೋಪಾದ್ಯಾಯರು ಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಗೌರಿಬದನೂರು: ಬೆಂಗಳೂರಿನ ಬಿ. ಲಕ್ಷ್ಮೀಪತಯ್ಯ ಪುಟ್ಟನಂಜಮ್ಮ ಟ್ರಸ್ಟ್ನಿಂದ ಹಿಂದೂಸಾದರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ. 10 ನೇ ತರಗತಿ ಮೇಲ್ಪಟ್ಟು ವ್ಯಾಸಂಗ ಮಾಡುವ ಹಿಂದೂ ಸಾದರ ಜನಾಂಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಗಳು ಪಟ್ಟಣದ ಇಡಗೂರು ರಸ್ತೆಯ ಸಮತಾ ಶಾಲೆಯಲ್ಲಿ ಪಡೆಯಬಹುದು ಎಂದು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ವಿ. ನಂಜುಂಡೇಗೌಡ ಹಾಗೂ ನಿಲಯಪಾಲಕ ರಾಮಯ್ಯ ತಿಳಿಸಿದ್ದಾರೆ.
ನೇತ್ರ ಚಿಕಿತ್ಸಾ ಶಿಬಿರ
ಗೌರಿಬಿದನೂರು: ಗ್ರಾಮೀಣ ಜನರಿಗೆ ನೇತ್ರ ಚಿಕಿತ್ಸಾ ಶಿಬಿರಗಳು ಹೆಚ್ಚು ಉಪ ಯುಕ್ತವಾಗಿವೆ ಎಂದು ಇ. ಶ್ರೀನಿವಾಸಯ್ಯ ತಿಳಿಸಿದರು. ಪಟ್ಟಣದ ಎಂಎಸ್ಎಸ್ ಶಾಲೆಯ ಆವರಣದಲ್ಲಿ ಶ್ರೀಮತಿ ಗೌರಮ್ಮ ಮತ್ತು ಅಶ್ವತ್ತಪ್ಪ ಇವರ ನೆನಪಿಗಾಗಿ, ಕನ್ನಡ ಸೇನೆ ತಾಲೂಕು ಘಟಕ, ಶಂಕರ್ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ಅಂಧತ್ವ ನಿರ್ಮೂಲನೆ ಹಾಗೂ ಕಣ್ಣಿನ ಇತರೆ ಸಮಸ್ಯೆಗಳನ್ನು ನಿವಾರಿಸಲು ಶಿಬಿರ ನಡುಸಲಾಗುತ್ತಿದೆ ಎಂದರು. ಸಂಕಲ್ಪ ಪ್ರಿಂಟರ್ಸ್ ಮಾಲೀಕ ವೀರಣ್ಣ, ಹೊಸೂರು ರಾಮಕೃಷ್ಣಪ, ಎಂ.ಎನ್. ರಾಧಾಕೃಷ್ಣ ಮಾತನಾಡಿದರು. ಶಿಬಿರದಲ್ಲಿ 125 ಮಂದಿಗೆ ಪರೀಕ್ಷೆ ಮಾಡಿ 60 ಮಂದಿಯನ್ನು ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳಿಹಿಸಲಾಯಿತು. ಪಿ.ಎಸ್. ಸತ್ಯಪ್ರಸಾದ್, ಪಠಾಣ್ ರಹಮತ್ತುಲ್ಲಾ, ಅಫ್ರೀದಿ ಪಠಾಣ್, ಸಹಕಾರ ನೀಡಿದರು. ಶಂಕರ್ ಕಣ್ಣಿನ ಆಸ್ಪತ್ರೆಯ ಡಾ. ಗ್ಲಾಡೆಸ್, ಶಿವಪ್ರಕಾಶ್ ತಂಡದಿಂದ ನೇತ್ರ ಪರೀಕ್ಷೆ ಮಾಡಲಾಯಿತು.
ಶಿಕ್ಷಕರ ಪ್ರತಿಭಟನೆ
ಕೋಲಾರ: ತಾಲೂಕಿನ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಶಿಕ್ಷಕರ ಸೇವಾ ವಿವರಗಳು ನಾಪತ್ತೆಯಾಗಿದ್ದು ಕೂಡಲೇ ದಾಖಲಾತಿಗಳನ್ನು ಪತ್ತೆ ಮಾಡಿ ಕಚೇರಿಗೆ ತರಿಸಿಡಬೇಕೆಂದು ಒತ್ತಾಯಿಸಿ ಡಿ.7 ರಂದು ಬಿಇಓ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ ತಿಳಿಸಿದ್ದಾರೆ. ಎಸ್.ಆರ್.ಗಳನ್ನು ಹೆಚ್.ಆರ್.ಎಂ.ಎಸ್.ನಲ್ಲಿ ನಮೂದಿಸಬೇಕೆಂದು ಸೇವಾ ಪುಸ್ತಕಗಳನ್ನು ಬೆಂಗಳೂರಿಗೆ ಕೆಲವು ತಿಂಗಳುಗಳ ಹಿಂದೆ ಕಳುಹಿಸಿದ್ದೇವೆ ಎಂದು ಬಿಇಓ ಕಚೇರಿಯ ಅಧಿಕಾರಿಗಳು ತಿಳಿಸಿದ್ದರು. ಕೋಲಾರ ಬಿಇಓ ಕಚೇರಿಯಲ್ಲಿ 1750 ಎಸ್.ಆರ್.ಗಳು ನಾಪತ್ತೆ ಆಗಿವೆ ಎಂದು ಕಳೆದ ತಿಂಗಳು ಕನ್ನಡಪ್ರಭದಲ್ಲಿ ವರದಿ ಪ್ರಕಟಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಪೇದೆ ಮೇಲೆ ಹಲ್ಲೆ
ಶಿಡ್ಲಘಟ್ಟ: ಎಚ್.ಕ್ರಾಸ್ನ ಸೀತಾ ರಾಮಾಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ತಡೆದು ಬುದ್ಧಿ ಹೇಳಲು ಹೋಗಿದ್ದಕ್ಕಾಗಿ ಪೇದೆ ಮೇಲೆ ಹಲ್ಲೆ ನಡೆದಿದೆ. ಎಚ್.ಕ್ರಾಸ್ನಲ್ಲಿ ರಥೋತ್ಸವ ಎಂದು ಮೂರ್ತಿ ಎಂಬ ಪೇದೆಯನ್ನು ನಿಯಮಿಸಿಲಾಗಿತ್ತು. ಜಾತ್ರೆ ಸಂದರ್ಭದಲ್ಲಿ ಕೆಲವು ಪುಂಡು ಪೋಕರಿಗಳು ಹುಡುಗಿಯರನ್ನು ಚುಡಾಯಿಸುತ್ತಿದ್ದು, ಬುದ್ಧಿ ಹೇಳಲು ಹೋದ ಪೇದೆ ಮೂರ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ಕಿರಣ್, ಪ್ರತಾಪ್, ಮಹೇಶ್ನನ್ನು ಬಂಧಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.