ಕೋಲಾರ

ಮಂಚೇನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ

Published On :

ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿ ಕೇಂದ್ರದಲ್ಲಿ ಜೈ ಕರ್ನಾಟಕ ಗೆಳೆಯರ ಬಳಗದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಬಸ್ ನಿಲ್ದಾಣದಲ್ಲಿ ಸಮಾಜ ಸೇವಕ ದಿವಂಗತ ಎಂ.ಟಿ.  ನರಸಿಂಹಮೂರ್ತಿ ಜ್ಞಾಪಕಾರ್ಥವಾಗಿ ಅಭಿಮಾನಿ ಬಳಗ ನೂತನವಾಗಿ ಧ್ವಜಸ್ಥಂಭ ಹಾಗೂ ಭಾವಚಿತ್ರವಿರುವ ನಾಮಪಲಕ ಉಧ್ಘಾಟನೆ ಮತ್ತು ಧ್ವಜಾರೋಹಣವನ್ನು ಎಂ.ಪಿ. ಶ್ರೀರಂಗಪ್ಪ ನೆರವೇರಿಸಿದರು.
ಬಸ್ ನಿಲ್ದಾಣದಲ್ಲಿ ಜಿಪಂ ಮಾಜಿ ಸದಸ್ಯ ಕೆ.ವಿ. ಹನುಮಪ್ಪರೆಡ್ಡಿ, ತಲ್ಲಂ ಕಲ್ಯಾಣ ಮಂಟಪದ ಬಳಿ ಎಂ.ಎಲ್. ಗಂಗಣ್ಣ ಧ್ವಜಾರೋಹಣ ನೆರವೇರಿಸಿದರು. ಗ್ರಾಮದ ಬೀದಿಗಳಲ್ಲಿ ಭುವನೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ವಿವಿಧ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಚೇನಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಪಿ. ಶ್ರೀರಂಗಪ್ಪ ವಹಿಸಿದ್ದರು. ತಾಲೂಕು ಚುಟುಕು ಸಾಹಿತ್ಯ ಅಧ್ಯಕ್ಷ ಎಂ.ಆರ್. ನಾಗರಾಜ್ ಮಾತನಾಡಿ, ನಾಡು ನುಡಿಯ ಅಭಿಮಾನ ಗಡಿ ಜಿಲ್ಲೆಯಲ್ಲೂ ಹೆಚ್ಚಾಗಿರುವುದು ಹೆಮ್ಮೆಯ ವಿಚಾರ ಎಂದರು.
ಜಿಪಂ ಮಾಜಿ ಸದಸ್ಯ ಕೆ.ವಿ. ಹನುಮಪ್ಪರೆಡ್ಡಿ ಮಾತನಾಡಿ, ಹೋಬಳಿ ಕೇಂದ್ರದಲ್ಲಿ ನಿರಂತರವಾಗಿ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡ ಅಭಿಮಾನ ಮೆರೆಯುವ ಜೈ ಕರ್ನಾಟಕ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ ಎಂದರು. ತಾಪಂ ಸದಸ್ಯೆ ಪ್ರಭಾನಾರಾಯಣಗೌಡ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಿಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕಿ ವರವಣಿ ಸುಶೀಲಮ್ಮಶೇಷಣ್ಣ, ಎಂ.ಎಲ್. ಗಂಗಣ್ಣ,  ದಿವಂಗತ ಎಂ.ಟಿ.ಎನ್. ಪತ್ನಿ ವಿಜಯ ಎನ್. ಮೂರ್ತಿ, ಲಕ್ಷ್ಮೀನರಸಮ್ಮ, ಹಸೀನಭಾನು, ಮುನಿರತ್ನಮ್ಮ, ಸೌಭಾಗ್ಯಮ್ಮ, ನಿವೃತ್ತ ಪೊಲೀಸ್ ಸಿಬ್ಬಂದಿ ಅಶ್ವತ್ಥನಾರಾಯಣ್, ಸಾದಪ್ಪ,  ಹಾಗೂ 108 ಚಾಲಕ ಸಿಬ್ಬಂದಿಗೆ ಗೌರವಿಸಲಾಯಿತು.
ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಪಾರಿತೋಷಕ ಹಾಗೂ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಜಿಪಂ ಸದಸ್ಯೆ ರಾಧಮ್ಮಗಂಗಾಧರ್, ತಾಪಂ ಸದಸ್ಯ ಬಿ.ಎನ್. ಪ್ರಕಾಶ್‌ರೆಡ್ಡಿ, ಎಂ. ನಾರಾಯಣಸ್ವಾಮಿ, ಎಚ್.ಎಂ. ಶಿವಶಂಕರ್, ಉಪತಹಸಿಲ್ದಾರ್ ರಘುಪತಿ, ಜೆ.ವಿ. ಹನುಮೇಗೌಡ, ರವೀಂದ್ರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.