ಸುದ್ದಿ ಸಂಕ್ಷೇಪ
ಚಿಕಿತ್ಸೆ ನೀಡುವಲ್ಲಿ ವೈದ್ಯರ ನಿರ್ಲಕ್ಷ್ಯ: ಆರೋಪ
ಶ್ರೀನಿವಾಸಪುರ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಅಸ್ಪತ್ರೆಗೆ ಸಾಗಿಸಿದ್ದು, ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡದ ಸಿಬಂದ್ದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ನಡೆದಿದೆ.ತಾಲೂಕಿನ ರೋಣೂರು ಹೋಬಳಿಯ ಚಿಕ್ಕತಿಮ್ಮನಹಳ್ಳಿ ಗ್ರಾಮದ ಐಮನ್ನ (55) ಎಂಬವರು ನೀಲಟೂರು ಕ್ರಾಸ್ ಬಳಿ ಬೈಕ್ ಅಪಘಾತವಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪಟ್ಟಣದ ಸರ್ಕಾರಿ ಅಸ್ಪತ್ರೆಗೆ ಸಾಗಿಸಿದಾಗ ಅಸ್ಪತ್ರೆ ಸಿಬ್ಬಂದಿ ಗಮನ ಹರಿಸದಿದ್ದಾಗ ಗಾಯಾಳುವಿನ ಸಂಬಂಧಕರು ಕರ್ತವ್ಯ ನಿರತ ವೈದ್ಯರ ಬಳಿ ಚಿಕಿತ್ಸೆ ನಿಡುವಂತೆ ಬೇಡಿಕೊಂಡರೂ ವೈದ್ಯರು ಬೇಜಾವ್ದಾರಿತನದಿಂದ ವರ್ತಿಸಿದ್ದಾರೆ ಎನ್ನಲಾಗಿದೆ.
ಇ-ಸುರಕ್ಷಾ ಸೇವೆ ಆರಂಭ
ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಎಸ್ಎಂಎಸ್ ಮೂಲಕ ತಕ್ಷಣ ಪರಿಹಾರಕ್ಕಾಗಿ ದೂರು ಸಲ್ಲಿಸುವ ಇ-ಸುರಕ್ಷಾ ಸೇವೆ ಹೊಸದಾಗಿ ಪ್ರಾರಂಭಿಸಲಾಗಿದೆ. ಕೆಜಿಎಫ್ ಪೊಲೀಸ್ ಜಿಲ್ಲೆಯ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾ ಪೊಲೀಸ್ ವತಿಯಿಂದ ಮೊಬೈಲ್ ದೂರವಾಣಿಯ ಎಸ್ಎಂಎಸ್ ಮೂಲಕ ದೂರು, ಮಾಹಿತಿ ತಕ್ಷಣದ ಪರಿಹಾರಕ್ಕಾಗಿ ಇ-ಸುರಕ್ಷಾ ಕೇಂದ್ರಕ್ಕೆ -9480802700ಗೆ ಕಳುಹಿಸುವ ಮೂಲಕ ಈ ಹೊಸ ಸೇವೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸೆಫಟ್ ತಿಳಿಸಿದ್ದಾರೆ. ಕೆಜಿಎಫ್ ಪೊಲೀಸ್ ಜಿಲ್ಲೆಯ ಸಾರ್ವಜನಿಕರು ಸಮಸ್ಯೆಗಳು, ಪೊಲೀಸ್ ಇಲಾಖೆಗೆ ನೀಡಬೇಕಾದ ಮಾಹಿತಿ ಮತ್ತು ಇಲಾಖೆಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿ ತಮ್ಮ ಮೊಬೈಲ್ಗಳಿಂದ ಜಿಲ್ಲಾ ಕಂಟ್ರೋಲ್ ರೂಮ್ ಸಂಚಾರ ದೂರವಾಣಿ ಸಂಖ್ಯೆ 9480802700ಗೆ ಎಸ್ಎಂಎಸ್ ಕಳುಹಿಸುವ ಮೂಲಕ ಇ-ಸುರಕ್ಷಾ ಸೇವೆ ಸದುಪಯೋಗಪಡಿಸಿಕೊಳ್ಳಬೇಕೆಂದು ಕೆಜಿಎಫ್ ಎಸ್ಪಿ ಡಾ. ರೋಹಿಣಿ ಕಟೋಚ್ ಸೆಫಟ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ವಾರ್ಷಿಕ ಜಮಾಬಂದಿ
ಕೆಜಿಎಫ್: ಸಮೀಪದ ಕಮ್ಮಸಂದ್ರದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ವಾರ್ಷಿಕ ಜಮಾಬಂದಿ ಕಾರ್ಯಕ್ರಮವನ್ನು ತಹಸೀಲ್ದಾರ್ ಉಷಾ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ತಹಸೀಲ್ದಾರ್, ತಾಲೂಕನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು ಕಂದಾಯ ವಸೂಲಾತಿಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಸೂಚಿಸಿದರು. ಬಂಗಾರಪೇಟೆ ಶಿರಸ್ಥೇದಾರ್ ರವಿ ಕಂದಾಯ ನಿರೀಕ್ಷಕ ವಿಜಯಜೆವ್, ಗೋಪಾಲ್ ಇದ್ದರು.
ಕ್ರಾಂತಿ ಗೀತೆಗಳ ಮೂಲಕ ಶ್ರದ್ಧಾಂಜಲಿ
ಕೋಲಾರ; ವರ್ಣಬೇಧ ವಿರುದ್ಧ ಹೋರಾಡಿ ಆಫ್ರಿಕದ ಕಪ್ಪು ಜನರಿಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ನೆಲ್ಸನ್ ಮಂಡೇಲಾ ಅವರ ನಿಧನಕ್ಕೆ ಅಭಿಮಾನಿಗಳ ಬಳಗದಿಂದ ಕ್ರಾಂತಿ ಗೀತೆಗಳ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಗರದ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಾಜಪ್ಪ, ಮಾರುತಿ ಪ್ರಸಾದ್, ರಾಮಪ್ಪ ಹಾಗೂ ಮಾರ್ಜೇನಹಳ್ಳಿ ಮುನಿರಾಜು ಕಪ್ಪು ಜನರ ಬದುಕು ಬವಣೆಗಳ ಕುರಿತ ಹಾಡುಗಳನ್ನು ಹಾಡುವ ಮೂಲಕ ಅಗಲಿದ ಆಫ್ರಿಕಾ ಗಾಂಧಿ ಎಂದೇ ಖ್ಯಾತಿ ಸಂಪಾದಿಸಿರುವ ದಿವಂಗತ ನೆಲ್ಸನ್ ಮಂಡೇಲಾರವರಿಗೆ ಗೌರವ ನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ನೆಲ್ಸನ್ ಮಂಡೇಲಾ ಅವರಿಗೆ ಗಾಯನ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್, ಕೆ. ನರಸಿಂಹಮೂರ್ತಿ, ವಿಶ್ವಕುಂದಾಪುರ, ಸಿ.ವಿ.ನಾಗರಾಜ್. ಸಿ.ಜಿ. ಮುರಳಿ, ಸ್ಕಂದಕುಮಾರ್, ಹಾರೋಹಳ್ಳಿ ರವಿ, ಸೂಲಿಕುಂಟೆ ರಮೇಶ್, ವರದೇನಹಳ್ಳಿ ವೆಂಕಟೇಶ್, ಹೂಹಳ್ಳಿ ನಾಗರಾಜ್, ಮಾರ್ಜೇನಹಳ್ಳಿ ಬಾಬು, ಚಂದ್ರಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

