ಸುದ್ದಿಸಂಕ್ಷೇಪ
ಶಾಂತಿಯುತ ಮತದಾನ
ಶಿಡ್ಲಘಟ್ಟ: ಹೊಸಪೇಟೆ, ನಾಗಮಂಗಲ, ಭಕ್ತರ ಹಳ್ಳಿ, ಮಳಮಾಚನ ಹಳ್ಳಿ, ಗ್ರಾಪಂ ಚುನಾವಣೆಗಳು ನಡೆಯುತ್ತಿದ್ದು, ಭಕ್ತರ ಹಳ್ಳಿ ಗ್ರಾಪಂನಲ್ಲಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಭಕ್ತರ ಹಳ್ಳಿಯ 1ನೇ ಕ್ಷೇತ್ರದಿಂದ ಬಿ.ಎಂ. ಗೋಪಾಲ ಗೌಡ, ರಘುರಾಜ್, ಮುನಿಯಮ್ಮ, 2ನೇ ಕ್ಷೇತ್ರದಿಂದ ಕೆ.ಎಸ್. ಭಾನುಮತಿ, ವೆಂಕಟಲಕ್ಷಮ್ಮ, ಭಾರತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಗ್ರಾಪಂಗಳಲ್ಲಿ ಮತದಾನ ಶಾಂತಿಯುತವಾಗಿ ನೆರವೇರಿತು.
ಬಾಲಮೇಳ
ಚಿಂತಾಮಣಿ: ಶಿಕ್ಷಕರು ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಆರೋಗ್ಯದ ಬಗ್ಗೆಯೂ ಆದ್ಯತೆ ನೀಡಿದಲ್ಲಿ ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯಲಿದ್ದಾರೆಂದು ಡಾ. ರಮೇಶ್ ಬಾಬು ಹೇಳಿದರು. ತಾಲೂಕಿನ ಕುರುಟಹಳ್ಳಿ ಪವನ ಜಾನಕಿ ಕಲ್ಯಾಣ ಮಂಟಪದಲ್ಲಿ ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮತ್ತು ಅಂಗನವಾಡಿ ಕೇಂದ್ರಗಳಿಂದ ನಡೆದ ಬಾಲಮೇಳಕ್ಕೆ ಚಾಲನೆ ನೀಡಿ, ಅಪೌಷ್ಠಿಕತೆ ನಿವಾರಣೆ ಮತ್ತು ಗರ್ಭಿಣಿಯರ ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು. ಎಸಿಡಿಪಿಒ ನಾನಮ್ಮ ಪ್ರಾಸ್ತಾವಿಕವಾಗಿ ಮಾತಡಿದರು. ಮಕ್ಕಳಿಂದ ವೇಷ ಭೂಷಣಗಳು, ಬಾಲಮೇಳದಲ್ಲಿ ಭಾಗವಹಿಸಿದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಪದ್ಮಾವತಿ ರಾಮಚಂದ್ರ, ಮಹದೇವಿ ಎಂ. ಉದೇಶಿ, ಸಾವಿತ್ರಮ್ಮ, ರೂಪಾವತಿ, ಡಾಬಾ ಮಂಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

