ಕೋಲಾರ

ಕಂದನ ಹುಡುಕಾಟದಲ್ಲಿ ಅಮ್ಮ

Published On :

ಚಿಕ್ಕಬಳ್ಳಾಪುರ: ಮನೆಯ ಬಳಿ ಆಟವಾಡಿದ್ದ ಮೂರು ವರ್ಷದ ಮಗ ಕಾಣೆಯಾಗಿರುವುದರಿಂದ ಕಂಗಲಾಗಿರುವ ತಾಯಿಯೊಬ್ಬಳು ಮಗನ ಭಾವಚಿತ್ರ ಹಿಡಿದು ಕಣ್ಣೀರು ಸುರಿಸುತ್ತಿದ್ದಾಳೆ. ಕಳೆದ ಎರಡು ವಾರಗಳಿಂದಲೂ ಚಿಂತಾಮಣಿ ತಾಲೂಕಿನ ಮುರುಮಲ್ಲಾ ಗ್ರಾಮದ ಸೀಮಾ ಹುಡುಕಾಟ ನಡೆಸಿದ್ದಾಳೆ.
ಚಿಂತಾಮಣಿ ತಾಲೂಕಿನ ಮುರುಗಮಲ್ಲಾದ ಫೈರೋಜ್ ಖಾನ್ ಮತ್ತು ಸೀಮಾ ದಂಪತಿಯ ಏಕೈಕ ಪುತ್ರ ಫಕೃದ್ದೀನ್ ಖಾನ್ (3 ವರ್ಷ) ಕಾಣೆಯಾದ ಮಗು. ನ.21 ರಂದು ಸಮೀಪದ ದರ್ಗಾಗೆ ತನ್ನ ಅಜ್ಜಿಯೊಂದಿಗೆ ಹೋಗಿದ್ದ.ಅಲ್ಲಿ ಪಕ್ಕಕ್ಕೆ ಹೋಗಿ ಆಟವಾಡುತ್ತಿದ್ದ ಮಗು ಸ್ವಲ್ಪ ಸಮಯದ ನಂತರ ಮಾಯವಾಗಿದ್ದ. ಮಗು ಕಾಣೆಯಾಗುವ ಮಟ್ಟಿಗೆ ಜನಸಂದಣಿ ಅಲ್ಲಿರಲಿಲ್ಲ. ಬದಲಿಗೆ ಬೇರೆ ಎಲ್ಲೂ ಹೋಗುವಂತವನೂ ಅವನಲ್ಲ. ಇದರಿಂದ ಆತಂಕಗೊಂಡ ಮಹಿಳೆ ಮನೆಗೆ ಬಂದು ವಿಷಯ ತಿಳಿಸಿದ್ದು ಈ ವರೆಗೆ ಮಗು ಪತ್ತೆಯಾಗಿಲ್ಲ.
ಕಿಡ್ನ್ಯಾಪ್ ಆರೋಪ: ಮುರುಗಾಮಲ್ಲಾದಲ್ಲಿ ಮಗುವನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ ಎಂದು ದಂಪತಿಗಳು ಅನುಮಾನಗೊಂಡಿದ್ದು, ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿ ರೆಹಮಾನ್‌ನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ವಿಚಾರಣೆ ನಡೆಸಿದಾಗ ಮಗುವನ್ನು ಬೇರೆಯವರ ಕೈಗೆ ಕೊಟ್ಟು ಕಳುಹಿಸಿರುವ ಬಗ್ಗೆ ಬಾಯಿ ಬಿಟ್ಟಿದ್ದು, ಆತನ ಸುಳಿವಿನಂತೆ ಮದನಪಲ್ಲಿ, ಶ್ರೀನಿವಾಸಪುರ ಸೇರಿದಂತೆ ಅನೇಕ ಕಡೆ ಪರಿಶೀಲನೆ ನಡೆಸಿದ್ದು ಸಂಬಂಧಪಟ್ಟ ಆರೋಪಿ ಮತ್ತು ಮಗು ಇನ್ನೂ ಸಿಕ್ಕಿಲ್ಲ.
ಅಮ್ಮನ ಕಣ್ಣೀರು: ನಗರದ ಹಳೆ ಬಸ್ ನಿಲ್ದಾಣದಲ್ಲಿ ತನ್ನ ಅತ್ತೆ, ಗಂಡನೊಂದಿಗೆ ಎಲ್ಲರಿಗೂ ಮಗುವಿನ ಭಾವಚಿತ್ರ ತೋರಿಸಿ ವಿಚಾರಿಸಿದಳು. ಮೊಬೈಲ್ ನಂಬರ್ ಕೊಟ್ಟು ಮಗು ಸಿಕ್ಕಿದರೆ ಕೂಡಲೇ ತಿಳಿಸಿ ಎಂದು ಮನವಿ ಮಾಡಿದಳು.
ಮಗು ಕಂಡು ಬಂದರೆ ಸೀಮಾ ಕೋಂ ಫೈರೋಜ್ ಖಾನ್, ವೆಂಕಟರಮಣಪ್ಪ ಬಿಲ್ಡಿಂಗ್, 3 ನೇ ಮನೆ, ಮುರುಗಮಲ್ಲಾ, ಚಿಂತಾಮಣಿ ವಿಳಾಸವನ್ನು ಅಥವಾ ಮೊ-9686776462 ಅನ್ನು ಸಂಪರ್ಕಿಸಬೇಕೆಂದು ಕೋರಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.