ರೈತ ಸಂಘ, ಸೇನೆ: ಹಂಗಾಮಿ ಪದಾಧಿಕಾರಿಗಳ ನೇಮಕ
ಗುಡಿಬಂಡೆ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಯ ಗುಡಿಬಂಡೆ ತಾಲೂಕು ಘಟಕದ ಹಂಗಾಮಿ ಅಧ್ಯಕ್ಷರಾಗಿ ಯರ್ರಲಕ್ಕೇನಹಳ್ಳಿಯ ಟಿ.ವೆಂಕರವಣಪ್ಪ, ಹಂಗಾಮಿ ಕಾರ್ಯದರ್ಶಿಯಾಗಿ ಚಿನ್ನಪನಹಳ್ಳಿಯ ಸಿ.ಎಲ್.ಅಶ್ವತ್ಥಪ್ಪ ಹಾಗೂ 7 ಪಂಚಾಯತಿಗಳಿಂದ ತಲಾ 5 ರೈತರಂತೆ ಒಟ್ಟು 30 ಹಂಗಾಮಿ ಸದಸ್ಯರ ಆಯ್ಕೆ 4 ತಾಲೂಕು ಅಧ್ಯಕ್ಷರ ಸಮ್ಮುಖದಲ್ಲಿ ನಡೆಯಿತು.
ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಗೇಪಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ವಿ.ನಾರಾಯಣಸ್ವಾಮಿ ತಾಲೂಕಿನ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ 2007ನೇ ಇಸವಿಯಲ್ಲಿ ತಾಲೂಕು ಸಂಘಟನೆಯನ್ನು ಮಾಡಲಾಯಿತು. ಕಳೆದ 2 ವರ್ಷಗಳಿಂದ ಈಚೆಗೆ ಆಯ್ಕೆಯಾಗಿದ್ದ ಕೆಲ ಮುಖಂಡರು ಹಲವಾರು ರೀತಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿ ಸಂಘಟನೆಗೆ ಕೆಟ್ಟ ಹೆಸರು ತಂದಿರುವುದು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಗಮನಕ್ಕೆ ಬಂದಿದ್ದು, ಅವರ ನಿರ್ದೇಶನದಂತೆ ನೂತನ ಹಂಗಾಮಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಶಿಡ್ಲಘಟ್ಟ ತಾ. ರೈತ ಸಂಘದ ಅಧ್ಯಕ್ಷ ಬೈರೇಗೌಡ ಮಾತನಾಡಿ, ರೈತರ ಸಮಸ್ಯೆಗಳನ್ನು ಪರಿಹರಿಸಲು ಸಂಘಟನೆ ಶ್ರಮ ವಹಿಸುತ್ತಿದ್ದು, ಗುಡಿಬಂಡೆ ತಾಲೂಕಿನಲ್ಲಿ ಕೆಲವರು ರೈತ ಸಂಘದ ಪದಾಧಿಕಾರಿಯೆಂದು ಸ್ವಂತ ಕೆಲಸಗಳಿಗಾಗಿ ಸಂಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ, ಇದು ಅಪರಾಧ. ರೈತ ಸಂಘದ ಯಾರೇ ಸದಸ್ಯ, ಪದಾಧಿಕಾರಿಯಾಗಲಿ ಸಂಘದ ಹೆಸರಿನಲ್ಲಿ ಭ್ರಷ್ಟಾಚಾರಕ್ಕೆ ಮುಂದಾದರೇ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಚಿಕ್ಕಬಳ್ಳಾಪುರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಎಸ್.ರಾಜಪ್ಪ, ಚಿಂತಾಮಣಿ ಅಧ್ಯಕ್ಷ ತಿಮ್ಮರಾಯಪ್ಪ ಹಾಗೂ ಕಾರ್ಯಕರ್ತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

