ಕೋಲಾರ

'ಹೊಸ ಸಾಹಿತ್ಯ ಗುರುತಿಸುವ ಕೆಲಸವಾಗಲಿ'

Published On :

ಚಿಕ್ಕಬಳ್ಳಾಪುರ: ಹೊಸಬರಲ್ಲಿ ಅಡಗಿರುವ ಸಾಹಿತ್ಯ ಪಾಂಡಿತ್ಯವನ್ನು ಗುರುತಿಸುವ ಕೆಲಸವಾಗಬೇಕೆಂದು ಶ್ರೀ ರಾಮಕೃಷ್ಣ ವಿವೇಕಾನಂದ ಮಠದ ಶ್ರೀ ಪೂರ್ಣಾನಂದಜೀ ಮಹಾರಾಜ್ ತಿಳಿಸಿದರು.
 ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮನಸ್ಸಿನ ಭಾವನೆಗಳನ್ನು ಲಿಖಿತ ರೂಪದಲ್ಲಿ ಬರೆಯುವುದೇ ಒಂದು ಸಾಹಿತ್ಯ. ವಿಶೇಷವಾಗಿ ಚುಟುಕುಗಳು ಬಹು ಅರ್ಥ ರೂಪದಿಂದ ಕೂಡಿರುತ್ತವೆ ಎಂದು ಹೇಳಿದರು.
 ಸಾಹಿತ್ಯದ ಬಗೆಗಿನ ಕಾರ್ಯಕ್ರಮಗಳನ್ನು ಹೆಚ್ಚಿಗೆ ಹಮ್ಮಿಕೊಂಡಾಗ ನೂತನ ಪ್ರತಿಭೆಗಳು ಮುಖ್ಯವಾಹಿನಿಗೆ ಬಂದು ತಮ್ಮಲಿರುವ ಸಾಹಿತ್ಯ ಪಾಂಡಿತ್ಯವನ್ನು ತೋರಿಸಲು ಸಹಕಾರಿಯಾಗುತ್ತದೆ.
  ಈ ಹಿನ್ನೆಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ಸಂಘಟನೆಗಳು ಸಾಹಿತ್ಯವನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.
 ಚುಟುಕು ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಪಾತಮುತ್ತಕಹಳ್ಳಿ ಎಂ. ಚಲಪತಿಗೌಡ ಮಾತನಾಡಿ, 1990ರಲ್ಲಿ ಸ್ಥಾಪನೆಗೊಂಡಿರುವ ಚುಟುಕು ಸಾಹಿತ್ಯ ಪರಿಷತ್ 25 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪರಿಷತ್ತನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಬೆಳೆಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಶಾಖೆಯನ್ನು ಉದ್ಘಾಟಿಸಲಾಗುತ್ತಿದೆ. ಎಲೆಮರೆಕಾಯಂತಿರುವ ಕನ್ನಡ ಉದಯೋನ್ಮಕ ಕವಿಗಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಿ ಗುರುತಿಸುವುದೇ ನಮ್ಮ ಗುರಿ ಎಂದರು.
 ಜಿಲ್ಲಾ ಗುಪ್ತಚರ ವಿಭಾಗದ ವೃತ್ತ ನಿರೀಕ್ಷಕ ಕೆ.ಎನ್. ರಮೇಶ್ ಧ್ವಜಾರೋಹಣ ನೆರವೇರಿಸಿದರು. ಕನ್ನಡದ ಕುರಿತು ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯಗೆಳ ಬಗ್ಗೆ ವಿಚಾರಗೋಷ್ಠಿ, ಕವಿಗೋಷ್ಠಿ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೈ.ಎಲ್. ಹನುಮಂತರಾವ್, ಕಾರ್ಯದರ್ಶಿ ಸಿ.ಎಸ್. ನಾಗಾರಾಜ್ , ಉಪಾಧ್ಯಕ್ಷ ರಮೇಶ್, ತಾಲೂಕು ಅಧ್ಯಕ್ಷ ಎಚ್.ಎಸ್. ಗಾರ್ಡನ್ ಗೋವಿಂದರಾಜು, ಗೌರವಾಧ್ಯಕ್ಷ ಸೊಣ್ಣೇಗೌಡ, ಕಾರ್ಯದರ್ಶಿ ಅಶ್ವತ್ಥನಾರಾಯಣ್, ಉಪಾಧ್ಯಕ್ಷ ನಾಗಭೂಷಣರೆಡ್ಡಿ, ಇಂದುಮತಿ, ಎಸ್.ಸಿ. ಸೌಭಾಗ್ಯ ಆನಂದ್, ಸುಶೀಲ ಮಂಜುನಾಥ್, ಅಡ್ಡಗಲ್ ಅನಿಲ್, ಪ್ರಕಾಶ್, ಜಯರಾಂ, ರಮಣ ಕೇಶ್ ಬಾಬು, ಬೈರಪ್ಪ, ಗೋಪಾಲ್ ಇನ್ನೂ ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.