ಕೋಲಾರ

ಯೋಗಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Published On :

ಚಿಂತಾಮಣಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ ವಿಭಾಗ ಮತ್ತು ಬೆಂಗಳೂರಿನ ರಾಜೇಶ್ವರಿ ನಗರದ ರಾಜೇಶ್ವರಿ ವಿದ್ಯಾಶಾಲೆಗಳ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಚಿಂತಾಮಣಿ ನಗರದ ಪ್ರತಿಷ್ಠಿತ ಶಾಲೆಗಳ 3 ಯೋಗಾಪಟುಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚಿಂತಾಮಣಿಯ ರಾಯಲ್ ಶಾಲೆಯಿಂದ ಬಾಲಕಿಯರ 17 ವರ್ಷದೊಳಗಿನ ವಯೋವುತಿಯಲ್ಲಿ ಎಂ.ಸಿ.ಪ್ರಿಯಾಂಕ, ಇದೇ ಶಾಲೆಯ ಬಾಲಕರ 14 ವರ್ಷದೊಳಗಿನ ವಯೋವುತಿಯಲ್ಲಿ ಬಿ.ಎಸ್.ಗಗನ್ ಹಾಗೂ ಕಿಶೋರ್ ವಿದ್ಯಾಶಾಲೆಯಿಂದ ಬಾಲಕಿಯರ 14 ವರ್ಷದೊಳಗಿನ ವಯೋವುತಿಯಲ್ಲಿ ಯಶಸ್ವಿನಿ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಯಲ್ ಶಾಲೆಯ ಬಾಲಕಿಯರ 17 ವರ್ಷದೊಳಗಿನ ವಯೋವುತಿಯಲ್ಲಿ ಸಾಯಿಚಿತ್ರ ಹಾಗೂ ಬಾಲಕಿಯರ 14 ವರ್ಷದೊಳಗಿನ ವಯೋವುತಿಯಲ್ಲಿ ಚಂದನ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಮುಂದಿನ ತಿಂಗಳು ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಮೂವರು ಯೋಗ ಪಟುಗಳು ಭಾಗವಹಿಸಲಿದ್ದಾರೆಂದು ತಂಡದ ವ್ಯವಸ್ಥಾಪಕ ಹಾಗೂ ಯೋಗ ಗುರು ಗೋವಿಂದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.