ಕೋಲಾರ

ಲೋಪರಹಿತ ಮತದಾರರ ಪಟ್ಟಿ ತಯಾರಿಸಲು ಸೂಚನೆ

Published On :

ಮುಳಬಾಗಲು: ಮತದಾರ ಪಟ್ಟಿಯನ್ನು ದೋಷರಹಿತವಾಗಿ ತಯಾರಿಸಲು ಬೂತ್ ಮಟ್ಟದ ಚುನಾವಣಾ ಸಿಬ್ಬಂದಿ ಶ್ರಮಿಸಬೇಕೆಂದು ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ತಹಸೀಲ್ದಾರ್ ಇ. ಬಾಲಕೃಷ್ಣ ಸೂಚಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ  87 ಮಂದಿ ಮತದಾರರ ಜೊತೆ ತಂದೆ, ಗಂಡ ಮಾಹಿತಿ ಇರುವುದಿಲ್ಲ, 2,726 ಮಂದಿ ಮತದಾರರಿಗೆ 80 ವರ್ಷ ವಯಸ್ಸಾಗಿದೆ, ಇವುಗಳನ್ನು ಕುರಿತು ನಿಖರವಾದ ಮಾಹಿತಿ ಪಡೆಯಲು ಶ್ರಮಿಸಬೇಕು ಎಂದರು.
ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಮಾತನಾಡಿ, ಮತಪಟ್ಟಿ ತಯಾರಿಸುವವರಿಗೆ ಸದರಿ ಮತಗಟ್ಟಿಯ ಮತದಾರರ ಸಂಪೂರ್ಣ ಮಾಹಿತಿ ಇರಬೇಕು ಎಂದರು. ಚುನಾವಣೆ ಉಪತಹಸೀಲ್ದಾರ್ ಸೂಲಯ್ಯ ಮಾತನಾಡಿ, ಆರು ಸಾವಿರ ಮಂದಿ ಮತದಾರರಾಗಲು ಫಾರಂ 6ರಲ್ಲಿ ಅರ್ಜಿ ಸಲ್ಲಿಸಿದ್ದು, ಈಗಾಗಲೇ 3ಸಾವಿರ ಮತದಾರರನ್ನು ಕಂಪ್ಯೂಟರಿನಲ್ಲಿ ಹಸರು ದಾಖಲಿಸಲಾಗಿದೆ ಎಂದರು. ಜಿಲ್ಲಾಧಿಕಾರಿಗಳ ಕಚೇರಿಯ ರಾಧಾಕೃಷ್ಣಭಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.