ಕೋಲಾರ

ಕ್ಷೀರಭಾಗ್ಯಕ್ಕೆ ಅವಧಿ ಮೀರಿದ ಪುಡಿ ಪೂರೈಕೆ ನಿಲ್ಲಲಿ

Published On :

ಚಿಂತಾಮಣಿ: ಕ್ಷೀರಭಾಗ್ಯಕ್ಕೆ ಅವಧಿ ಮೀರಿದ ಹಾಲಿನ ಪುಡಿ ಪೂರೈಕೆಗೆ ಸಂಬಂಧಿಸಿದಂತೆ ತಾಲೂಕು ದಂಡಾಧಿಕಾರಿಗಳು ತಕ್ಷಣವೇ ಸ್ಪಂದಿಸಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ ಸೂಕ್ತ ಕ್ರಮ ಜರುಗಿಸಿದ್ದಾರೆ.  ಡಿ.10ರಂದು 'ಕನ್ನಡಪ್ರಭ'ದಲ್ಲಿ ಪ್ರಕಟವಾದ 'ಕ್ಷೀರಭಾಗ್ಯಕ್ಕೆ ಅವಧಿ ಮೀರಿದ ಪುಡಿ' ಎಂಬ ವರದಿಗೆ ಸ್ಪಂದಿಸಿರುವ ತಾಲೂಕು ದಂಡಾಧಿಕಾರಿ ಕೆ.ಟಿ.ಕೃಷ್ಣಸ್ವಾಮಿ ಮಂಗಳವಾರ ಅವಧಿ ಮೀರಿದ ಹಾಲಿನ ಪುಡಿ ಪೂರೈಕೆ ನಿಲ್ಲಿಸಲು ಆದೇಶಿಸಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಹನುಮಂತರಾವ್ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಕೃಷ್ಣ ಅವರೊಂದಿಗೆ ಸಭೆ ನಡೆಯಿಸಿ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅವಧಿ ಮೀರಿದ ಹಾಲಿನ ಪ್ಯಾಕ್ಗಳನ್ನು ಪೂರೈಸದಂತೆ ಸೂಚಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಬಿಇಒ ನಗರದ ಸರ್ಕಾರಿ ಹಿರಿಯ ಬಾಲಕರ ಪಾಠ ಶಾಲೆಯಲ್ಲಿ ಇಸಿಒ ಮತ್ತು ಸಿಆರ್ಪಿ ಸಭೆ ಕರೆದು ಅವಧಿ ಮೀರಿದ ಹಾಲಿನ ಪುಡಿ ಪ್ಯಾಕ್ಗಳನ್ನು ಶಾಲೆ ಮಕ್ಕಳಿಗೆ ನೀಡದಂತೆ ತಡೆಹಿಡಿಯಲು ಸೂಚಿಸಿದ್ದಾರೆ. ಮತ್ತು ಮಖ್ಯಶಿಕ್ಷಕರಿಗೆ ಹಾಲಿನ ಪುಡಿ ಅವಧಿಯನ್ನು ಸೂಕ್ಷ್ಮವಾಗಿ ಗಮನಿಸಲು ಸೂಚಿಸಿದ್ದಾರೆ.  ಹಾಲಿನ ಪುಡಿಯೊಂದಿಗೆ ಮುದ್ರಣ ದಿನಾಂಕವನ್ನು ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಪುಡಿಯ ಗುಣಮಟ್ಟವನ್ನು ದೃಢೀಕರಿಸಿಕೊಂಡ ನಂತರವೇ ವಿತರಿಸಲಾಗುವುದೆಂದು ಹನುಮಂತರಾವ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.