ಕೋಲಾರ

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ; ಪ್ರಕರಣ ದಾಖಲು

Published On :

ಕೆಜಿಎಫ್: ನಗರಸಭೆಗೆ ಸೇರಿದ ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ 2009-10ರ ಅಂದಿನ ಪೌರಾಯುಕ್ತ ಯರ್ರಪ್ಪ ಎಂಬವರ ಸಹಿ ನಕಲಿ ಮಾಡಿ ಬಂಗಾರಪೇಟೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣೆ ಮಾಡುವ ಮೂಲಕ 34 ನಿವೇಶಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತ ವಿ. ಬಾಲಚಂದ್ರ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ನಗರಸಭೆಗೆ ಸೇರಿದ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಪೌರಾಯುಕ್ತ ಯರ್ರಪ್ಪ ಅವರ ಸಹಿಯನ್ನು ನಕಲು ಮಾಡಿರುವುದಾಗಿ ತಿಳಿದು ಬಂದಿದ್ದು, ಈ ಕುರಿತು ತನಿಖೆ ನಡೆಸುವಂತೆ ಕೋರಿ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಯಾವ ಕ್ರಮ ಜರುಗಿಸಿದ್ದೀರಿ ಎಂದು ಲೋಕಾಯುಕ್ತರು ಕಾರಣ ಕೇಳಿ ಪೌರಾಯುಕ್ತ ವಿ. ಬಾಲಚಂದ್ರ ಹಾಗೂ ಅಧಿಕಾರಿಗೆ ನೋಟಿಸ್ ಜಾರಿ ಮಾಡಿರುವ ಹಿನ್ನಲೆಯಲ್ಲಿ ಪೌರಾಯುಕ್ತ ವಿ. ಬಾಲಚಂದ್ರ ನಕಲಿ ದಾಖಲೆ ಸೃಷ್ಟಿಸಿ ನಗರಸಭೆಗೆ ಸೇರಿದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವ ವೇಣುಗೋಪಾಲ್, ಕುಪ್ಪುಸ್ವಾಮಿ, ವಿಕ್ಟೋರಿಯಾ, ವೆಲತ್ತೂರ್, ಗೀತಾ, ಮಣಿ, ಗಂಗಮ್ಮ, ಮೊಹ್ಮದ್ರಫೀ, ಸರಸು, ಇಸ್ಮೇಲ್, ಜಾರ್ಜ್, ಅಮುದ, ಬಷೀರ್ಅಹ್ಮದ್, ಸರೋಜಿನಿ, ಪ್ರಕಾಶ್, ಸುಸೈ, ಮಾಣಿಕ್ಯಂ, ನಹೀಮ್ಬಾಷಾ, ವೆಂಕಟರೆಡ್ಡಿ, ವರದರಾಜ, ಶಕುಂತಲಾ, ಶಹನಾಜ್ಬೇಗಂ, ಮಣಿ, ಲೋಕೇಶ್ವರಿ, ಮೇರಿಹೆಲ್ಲನ್, ನಾರಾಯಣ್, ಲಕ್ಷ್ಮೀ, ಸುಂದರಮೂರ್ತಿ, ನೇಸಮುನಿ, ಅಂತೋಣಿದಾಸ್, ರಾಜನ್, ಹಾಗೂ ರಾಮಚಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಬಸ್ ಡಿಕ್ಕಿ: ದ್ವಿಚಕ್ರ ವಾಹನ ಸವಾರನಿಗೆ ಗಾಯ
ಚಿಂತಾಮಣಿ: ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಗಂಭೀರ ಗಾಯಗಳಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂತಪಲ್ಲಿ ಗ್ರಾಮದ ಹತ್ತಿರದಲ್ಲಿ ಮಂಗಳವಾರ ಸಂಜೆ ನಡೆದಿದೆ.
ತಾಲೂಕಿನ ಮುಂಗಾನಹಳ್ಳಿ ಹೋಬಳಿ ಚಿಂತಪಲ್ಲಿ ಗ್ರಾಮದ ವೆಂಕಟರವಣಪ್ಪ ಕಾರ್ಯನಿಮಿತ ಬಟ್ಲಹಳ್ಳಿ ಗ್ರಾಮಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಧನಲಕ್ಷ್ಮಿ ಬಸ್ ಚಾಲಕ ಅತಿ ವೇಗ ಮತ್ತು ಅಜಾಗ್ರತೆಯಿಂದ ಡಿಕ್ಕಿ ಹೊಡೆದ ಪರಿಣಾಮ ವಾಹನ ಜಖಂಗೊಂಡು ವೆಂಕಟರವಣಪ್ಪ ತಲೆಗೆ ತೀವ್ರ ಪೆಟ್ಟಾಗಿ ನಗರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಟ್ಲಹಳ್ಳಿ ಠಾಣೆಯ ಸನ್ಇನ್ಸೆಪೆಕ್ಟರ್ ಬಸ್ಸನ್ನು ವಶಕ್ಕೆ ಪಡೆದು ಬಸ್ ಚಾಲಕ ಪರಾರಿಯಾದ ಚಾಲಕನ ವಿವರದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.