ಕೋಲಾರ

ಸ್ಥಳೀಯರಿಗೆ ಆದ್ಯತೆ ನೀಡಿದಾಗ ದೇಶದ ಅಭಿವೃದ್ಧಿ

Published On :

ಮಾಲೂರು: ಕೈಗಾರಿಕೆಗಳಿಂದ ದೇಶದ ಅಭಿವೃದ್ಧಿ ನಿಜವಾದರೂ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದಾಗ ಮಾತ್ರ ದೇಶ ಅಭಿವೃದ್ಧಿಗೆ ಸರಿಯಾದ ಅರ್ಥ ಬರುತ್ತದೆ ಎಂದು ತಾ.ಪಂ. ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು. ಅವರು ಸ್ಥಳೀಯ ಕೈಗಾರಿಕಾ ಮಾಲೀಕರ ಸಂಘ ಹಾಗೂ ಭುವನೇಶ್ವರಿ ಕೈಗಾರಿಕಾ ಕಾರ್ಮಿಕರ ಕನ್ನಡ ಸಂಘ ಇಲ್ಲಿನ ಕೈಗಾರಿಕಾ ಪ್ರಾಂಗಣದಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡುತ್ತ ಕೈಗಾರಿಕೆಗಳಿಗೆ ತಮ್ಮ ಭೂಮಿಯನ್ನು ನೀಡಿದ ರೈತನ ಕುಟುಂಬ ಸೇರಿದಂತೆ ಸ್ಥಳೀಯರಿಗೆ ಉದ್ಯೋಗ ನೀಡಿದಾಗ ಮಾತ್ರ ಕೈಗಾರಿಕೆ ವಲಯವಲ್ಲದೇ ಕೈಗಾರಿಕಾ ಪ್ರದೇಶವು ಅಭಿವೃದ್ಧಿಯಾಗುತ್ತದೆ ಎಂದ ಪುಟ್ಟಸ್ವಾಮಿ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಭವಿಷ್ಯದಲ್ಲಿ ಕಾರ್ಖಾನೆಗಳಲ್ಲಿ ಉನ್ನತ್ತ ಹುದ್ದೆ ಪಡೆಯುವಂತಾಗಲಿ ಎಂದರು. ಜಿ.ಪಂ. ಸದಸ್ಯೆ ಯಲ್ಲಮ್ಮ, ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿದರು. ನೂಸಗೆರೆ ಪಂಚಾಯ್ತಿ ಅಧ್ಯಕ್ಷೆ ಭಾಗಮ್ಮ ಮುನಿರಾಜು, ಸದಸ್ಯ ಮಲ್ಲಿಕಪ್ಪ, ಕುಮಾರ್, ಮುಖಂಡ ಈಶ್ವರ್, ಕರವೇ ಮಹಿಳಾ ಘಟಕ ಅಧ್ಯಕ್ಷೆ ಲತಾಬಾಯಿ, ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ರಾಜು, ಮಣಿ, ಮಂಜುನಾಥ್ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಸನ್ಮಾನಿಸಲಾಯಿತು.

'ಒಕ್ಕಲಿಗರು ಸಂಘಟಿತರಾಗಿ'
ಶಿಡ್ಲಘಟ್ಟ:
ಒಕ್ಕಲಿಗ ಸಮಾಜ ಅಭಿವೃದ್ದಿಯ ದೃಷ್ಟಿಯಿಂದ ತಾಲೂಕಿನ ಪ್ರತಿ ಗ್ರಾಪಂ ಮಟ್ಟದಲ್ಲಿ ಯುವಜನರು ಸಂಘಟಿತರಾಗಬೇಕು ಎಂದು ಒಕ್ಕಲಿಗರ ಯುವಸೇನೆಯ ತಾಲೂಕು ಅಧ್ಯಕ್ಷ ಜೆ.ಎಸ್. ವೆಂಕಟಸ್ವಾಮಿ ಕರೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಾದ್ಯಂತ ಒಕ್ಕಲಿಗ ಸಮುದಾಯವನ್ನು ಸಂಘಟಿಸುವುದಕ್ಕಾಗಿ ಯುವಸೇನೆ ಕೆಲಸ ಮಾಡುತ್ತದೆ ಎಂದರು. ಕಾರ್ಯದರ್ಶಿ ಎ.ಎಂ. ತ್ಯಾಗರಾಜ್ ಮಾತನಾಡಿ, 15 ರಂದು ಹನುಮಜಯಂತಿ ಪ್ರಯುಕ್ತ ನವಗ್ರಹ ನೂತನ ಮಂದಿರ ಉದ್ಘಾಟನೆ ಹಾಗೂ ಗುರು ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.