ಮರೀಚಿಕೆಯಾದ ಮೇಲ್ಸೇತುವೆ
ಟೇಕಲ್: 4 ವರ್ಷದ ಹಿಂದೆ ಅಂದಿನ ರೈಲ್ವೆ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ರೈಲ್ವೆ ಬಜೆಟ್ನಲ್ಲಿ ಟೇಕಲ್ ಮೇಲು ಸೇತುವೆ ನಿರ್ಮಾಣಕ್ಕೆ 9 ಕೋಟಿ ರುಪಾಯಿ ಅನುಮೋದಿಸಿದ್ದರು. ಆದರೆ ಈವರೆಗೂ ಸೇತುವೆ ನಿರ್ಮಾಣವಾಗಿಲ್ಲ.
ಹೊಸಕೋಟೆಯಿಂದ ಮಾಲೂರು, ಬಂಗಾರಪೇಟೆ, ಕೆಜಿಎಫ್ಗೆ ಹೋಗಲು ಟೇಕಲ್ ಮತ್ತು ಬಂಗಾರಪೇಟೆ ಹುಣಸನಹಳ್ಳಿ ರೈಲ್ವೆ ಗೇಟ್ಗಳು. ಈ ಮೇಲುಸೇತುವೆಗಳ ನಿರ್ಮಾಣಕ್ಕೆ ಕ್ರಮವಾಗಿ 9 ಕೋಟಿ, 11 ಕೋಟಿ ಬಿಡುಗಡೆಯಾಗಿ ಹುಣಸನಹಳ್ಳಿ ಸೇತುವೆ ಕಾಮಗಾರಿ ಆರಂಭವಾಗಿ ಸ್ಥಗಿತಗೊಂಡಿದೆ, ಆದರೆ ಟೇಕಲ್ನಲ್ಲಿ ಅದೂ ಇಲ್ಲ.
ಜಿಪಂ ಚುನಾವಣೆ ಸಂದರ್ಭದಲ್ಲಿ ಟೇಕಲ್ಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಕೆಲವೇ ತಿಂಗಳಲ್ಲಿ ಮೇಲು ಸೇತುವೆ ಕಾಮಗಾರಿ ಪ್ರಾರಂಭಗೊಳ್ಳುತ್ತಿದೆ ಎಂದು ಹೇಳಿದ್ದರು. ಆದರೆ ಫಲಿತಾಂಶ ಶೂನ್ಯ.
ಈ ಸೇತುವೆ ಗೊಂದಲದಿಂದಾಗಿ ಉದ್ದೇಶಿತ ಸ್ಥಳದ ಆಸುಪಾಸಿನಲ್ಲಿ ಕೆಲವು ಕಟ್ಟಡಗಳ ಕಾಮಗಾರಿಗಳು ಅರ್ಧಕ್ಕೆ ನಿಲ್ಲಿಸಿದ್ದಾರೆ. ಹಿಂದೆ ರೈಲ್ವೆ ಅಧಿಕಾರಿಗಳು ಹಾಗೂ ಸರ್ವೇ ಇಲಾಖೆಯವರು ಮೇಲು ಸೇತುವೆ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಿದ್ದು, ನೀಲಿ ನಕ್ಷೆ ತಯಾರಾಗಿದೆ ಎಂದು ಅಧಿಕಾರ ವರ್ಗದಲ್ಲಿ ಕೇಳಿಬಂದಿತ್ತು. ಹಾಗಾಗಿ ಕಟ್ಟಡಗಳನ್ನು ಮತ್ತೆ ತೆರವುಗೊಳಿಸಬಹುದು ಎಂದು ಸಾರ್ವಜನಿಕರು ತಮ್ಮ ಕಟ್ಟಡಗಳನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಆದರೆ ಸೇತುವೆ ಜನರಿಗೆ ಮರೀಚಿಕೆಯಾಗಿಯೆ ಉಳಿದಿದೆ.
-ಟೇಕಲ್ ಲಕ್ಷ್ಮೀಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

