ಕೋಲಾರ

ತಿರುಪತಿ ಎಕ್ಸ್ಪ್ರೆಸ್ ರೇಲು ಮೊದಲಿನ ವೇಳೆಗೇ ಇರಲಿ

Published On :

ಟೇಕಲ್: ಪಟ್ಟಣದಲ್ಲಿ ಜನವರಿ 1 ರಿಂದ ತಿರುಪತಿ ಪ್ಯಾಸೆಂಜರ್ ರೇಲು ನಿಲುಗಡೆ ಇಲ್ಲವೆಂದು ಟೇಕಲ್ ರೇಲು ನಿಲ್ದಾಣದ ಸೂಚನಾ ಫಲಕದಲ್ಲಿ ಹಾಕಲಾಗಿದ್ದು, ಇದರಿಂದ ಸುತ್ತಮುತ್ತಲಿನ ದಿನನಿತ್ಯ ಓಡಾಡುವ ಜನರಿಗೆ ಬಹಳ ತೊಂದರೆಯಾಗಿದೆ. ಈ  ಹಿಂದೆ ಕೇಂದ್ರ  ರೈಲ್ವೆ ಸಚಿವರಾಗಿದ್ದ ಕೋಲಾರ ಜಿಲ್ಲೆಯವರಾದ ಸಂಸದ  ಕೆ.ಎಚ್. ಮುನಿಯಪ್ಪನವರು ಟೇಕಲ್ನಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ತಿರುಪತಿ ಎಕ್ಸ್ಪ್ರೆಸ್ನ್ನು ಟೇಕಲ್ನಲ್ಲಿ ನಿಲುಗಡೆ  ಮಾಡಲಾಯಿತು. ಅದರಂತೆ ಸುತ್ತಮುತ್ತಲ ಜನತೆ ರಾಜಧಾನಿ ಬೆಂಗಳೂರಿಗೆ ತೆರಳಲು ಅನುಕೂಲವಾಗಿತ್ತು. ಬೆಳಿಗ್ಗೆ 5-20ಕ್ಕೆ ಟೇಕಲ್ ಬಿಟ್ಟು 7 ಗಂಟೆಗೆ ಬೆಂಗಳೂರಿಗೆ ತಲುಪುತ್ತಿದ್ದರು  ಹಾಗೂ ತಿರುಮಲಕ್ಕೆ ತೆರಳುವವರು ದೇವರ ದರ್ಶನ ಮುಗಿಸಿ ತಿರುಪತಿ ಎಕ್ಸ್ಪ್ರೆಸ್ನಲ್ಲಿಯೇ ಬರುತ್ತಿದ್ದರು  ಜನರಿಗೆ ಇದು ತುಂಬಾ ಸಹಾಯಕವಾಗಿತ್ತು.
ಒಂದು ಗಂಟೆ ಮೊದಲೇ: ಆದರೆ ಟೇಕಲ್ ಭಾಗದ ಜನತೆಗೆ ಜುಲೈ 1 ರಿಂದ ಆಘಾತಕಾರಿ ಅಚ್ಚರಿ ವಿಷಯ ಬೆಳಕಿಗೆ ಬಂತು. ಅದು  ತಿರುಪತಿ ಎಕ್ಸ್ಪ್ರೆಸನ್ನು ಟೇಕಲ್ನಲ್ಲಿ 5-20 ರ ಬದಲಾಗಿ ಮುಂಜಾನೆ 4-45ಕ್ಕೆ ಸಮಯ ನಿಗಧಿಪಡಿಸಿದ್ದು ಬಹುತೇಕ  ದಿನಾಲೂ ಓಡಾಡುವ ಜನಕ್ಕೆ ಒಂದು ಗಂಟೆಯ ಅವಧಿ ಬೇಗ ವಿಸ್ತರಿಸಿರುವುದಕ್ಕೆ ಬಹಳಷ್ಟು ತೊಂದರೆಯಾಗಿದೆ. ಜನವರಿ 1 ರಿಂದ ಮತ್ತೆ ಟೇಕಲ್ನಲ್ಲಿ ನಿಲುಗಡೆ ಮಾಡುವಂತೆ ನಿತ್ಯ ಓಡಾಡುವ ಪ್ರಯಾಣಿಕರ ಮನವಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.