ಕೈವಾರ: ನಾದಸುಧಾರಸ ವೇದಿಕೆಯಲ್ಲಿ ಸಮೂಹ ಗಾಯನ
ಚಿಂತಾಮಣಿ: ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದ ಸಾಂಸ್ಕೃತಿಕ ವೇದಿಕೆ ನಾದಸುಧಾರಸ ಕಾರ್ಯಕ್ರಮವು ಸದ್ಗುರು ತಾತಯ್ಯನವರ ಪ್ರೇರಣೆಯಂತೆ ಆರಂಭವಾಗಿ ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಾದಸುಧಾರಸ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ನೇತೃತ್ವದಲ್ಲಿ ಸಮೂಹ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ನಾದಸುಧಾರಸ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ಕಲಾವಿದರಿಂದ ಗಾಯನ ನಡೆಯಿತು. ಮಾಧವದಾಸ್,ನಾರಾಯಣಸ್ವಾಮಿ,ಶ್ರೀಹರಿಶರ್ಮಾ,ರಮೇಶ್‌ಬಾಬು,ತಳಗವಾರ ಟಿ.ಎಲ್.ಆನಂದ್, ಎಸ್.ಎನ್.ಜಗದೀಶ್‌ಕುಮಾರ್ ಗಾಯನ ನಡೆಸಿಕೊಟ್ಟರು. ಇವರಿಗೆ ಪಕ್ಕವಾದ್ಯದಲ್ಲಿ ಕೋಡಿಚೆರುವು ನಾರಾಯಣಪ್ಪ ಕಿಬೋರ್ಡ್,ಹೇಮಕುಮಾರ್ ಪಿಟೀಲು, ವೆಂಕಟರಮಣಯ್ಯ ತಬಲ,ಸೂರ್ಯನಾರಾಯಣಚಾರಿ ಮೃದಂಗ ಸಹಕಾರ ನೀಡಿದರು.
ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಮಾತನಾಡಿ, ಸಂಗೀತ,ಸಾಹಿತ್ಯ ನಮ್ಮ ಸಂಸ್ಕೃತಿಯ ಪ್ರತೀಕ. ಆಧ್ಯಾತ್ಮದ ತತ್ವಗಳ ಪ್ರಚಾರದ ಜೊತೆಗೆ ಕಲೆಯ ಅವಸಾನವನ್ನು ತಡೆಗಟ್ಟಲು ಮತ್ತು ಕಲೆಯನ್ನು ಪ್ರೋತ್ಸಾಹಿಸಲು ಈ ನಾದಸುಧಾರಸ ವೇದಿಕೆ ಸಹಕಾರಿಯಾಗಿದೆ. ರಾಷ್ಟ್ರಮಟ್ಟದ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರಿಗೂ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಹರಿದಾಸರು ಸನಾತನ ಧರ್ಮ ಗ್ರಂಥ ಪುರಾಣಗಳಲ್ಲಿರುವ ಶ್ರೇಷ್ಠ ಸಾರವನ್ನು ಸರಳ ರೀತಿಯಲ್ಲಿ ಸಾಮಾನ್ಯ ಜನರಿಗೆ ಭೋದಿಸಿದರು. ಮಾನವ ಜನ್ಮ ಶ್ರೇಷ್ಠವಾದುದು ಇದನ್ನು ಹಾನಿ ಮಾಡಿಕೊಳ್ಳದೆ ಅದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ಹರಿದಾಸರು ಎಚ್ಚರಿಸಿದರು. ಅಂತಹ ದಾಸವರೇಣ್ಯರ ಸ್ಮರಣೆ ಮಾಡುವ ನಿಟ್ಟಿನಲ್ಲಿ ಯೋಗಿನಾರೇಯಣ ಮಠವು ನಾದಸುಧಾರಸ ಯೋಜನೆ ಕೈಗೊಂಡಿದೆ. ನಾದೋಪಾಸನೆ ಮೂಲಕ ಆಧ್ಯಾತ್ಮ ವಿದ್ಯೆಯ ಸಾರವನ್ನು ರಸವತ್ತಾಗಿ ಮನಸ್ಸಿಗೆ ನಾಟುವಂತೆ ಪ್ರಸರಿಸುವುದು ಈ ಯೋಜನೆಯ ಗುರಿಯಾಗಿದೆ ಎಂದು ತಿಳಿಸಿದರು.
ನಾದಸುಧಾರಸ ಕಲಾವಿದರಾದ ವಿದ್ವಾನ್ ಮಾಧವದಾಸ್ ಮಾತನಾಡಿ, ಪ್ರತಿದಿನ ಕ್ಷೇತ್ರಕ್ಕೆ ಬರುತ್ತಿರುವ ಭಕ್ತರು ಒಂದು ಕಡೆ ನೆಮ್ಮದಿಯಿಂದ ಕುಳಿತುಕೊಂಡು ಧ್ಯಾನ ಮಾಡುತ್ತಾ ಈ ನಾದಸುಧಾರಸ ನಾದವನ್ನು ಕೇಳುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು,ಇದರಿಂದ ಧಾರ್ಮಿಕ ಜಾಗೃತಿ ಉಂಟಾಗುತ್ತಿರುವುದು ಸತ್ಯ ಎಂದರು.
ನಾದಸುಧಾರಸ ವೇದಿಕೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ಕನಕದಾಸರ,ಪುರಂದರದಾಸರ ಮತ್ತು ಕೈವಾರ ತಾತಯ್ಯನವರ ಕೀರ್ತನೆಗಳ ಗಾಯನ ನಿರಂತರವಾಗಿ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

