ಕೋಲಾರ

ಬಾಲಕಾರ್ಮಿಕ ಪದ್ದತಿಗೆ ಪೋಷಕರೇ ಕಾರಣ: ನ್ಯಾ. ಬಸವರಾಜಪ್ಪ

Published On :

ಬಂಗಾರಪೇಟೆ: ದೇಶದಲ್ಲಿ ಕೋಟ್ಯಂತರ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಸರ್ಕಾರಗಳು ಎಷ್ಟೇ ಬಿಗಿಯಾದ ಕಾನೂನುಗಳನ್ನು ಜಾರಿಗೆ ತಂದರೂ ಬಾಲಕಾರ್ಮಿಕ ಪದ್ದತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಪೋಷಕರೇ ಕಾರಣ ಹೊರತು ಬೇರಾರು ಅಲ್ಲ ಎಂದು ಕೆಜಿಎಫ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ಬಸವರಾಜಪ್ಪ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ  ಕಾರ್ಮಿಕ ಇಲಾಖೆ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ಬಾಲಕಾರ್ಮಿಕ ನಿರ್ಮೂಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಮಕ್ಕಳು ಕೆಟ್ಟವರಾಗಿರಬಹುದು. ಆದರೆ ತಾಯಂದಿರು ಇರುವುದಿಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಬಾಲ್ಯದಲ್ಲೆ ಉತ್ತಮ ನಡುವಳಿಕೆಗಳ ಬಗ್ಗೆ ಅರಿವು ಮೂಡಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆ ವಿನಾ ಬಾಲ್ಯದಲ್ಲೆ ದುಡಿಮೆಗೆ ನೂಕಬಾರದು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕೆಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶೆ ವಿಶಾಲಾಕ್ಷಿ ಬಾಲ ಕಾರ್ಮಿಕ ಪದ್ದತಿ ಸಮಾಜದಲ್ಲಿ ದೊಡ್ಡ ಪಿಡುಗಾಗಿದೆ ಇದನ್ನು ಹೊಗಲಾಡಿಸಲು ಸರ್ಕಾರಗಳು ಎಷ್ಟೇ ಕಾನೂನು ತಂದರೂ ಪರಸ್ಪರ ಸಹಕಾರದ ಕೊರತೆಯಿಂದ ಕಾನೂನು ಪಾಲನೆಯಲ್ಲಿ ಹಿನ್ನಡೆಯಾಗಿ ಮಕ್ಕಳ ಹಕ್ಕನ್ನು ಕಸಿದುಕೊಂಡು ಮಕ್ಕಳನ್ನು ಶೋಷನೆ ಮಾಡಿದಂತಾಗಿದೆ,ಮಕ್ಕಳ ಹಕ್ಕನ್ನು ಕಸಿದುಕೊಳ್ಳದೆ ಅವರನ್ನು ಕಡ್ಡಾಯವಾಗಿ ಶಾಲೆ ಸೇರಿಸಿ ಅವರ ಬದುಕನ್ನು ಸುಂದರವಾಗಿಸಿ ಎಂದು ಹೇಳಿದರು.
ಕೆಜಿಎಫ್ ಸಿವಿಲ್ ನ್ಯಾಯಾಧೀಶ ನಂದಿಶ್ ಮಾತನಾಡಿದರು.ತಹಸೀಲ್ದಾರ್ ಉಷಾ, ರಾಜಗೋಪಾಲ್,ವಕೀಲರ ಸಂಘದ ಅಧ್ಯಕ್ಷ ಶಿವಸುಬ್ರಮಣಿ, ವಕೀಲರಾದ ನಾರಾಯಣಪ್ಪ,ರಾಜಗೋಪಾಲ್,ಮೇಸ್ತ್ರಿ ಶೀನಪ್ಪ,ಚೇತನಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.