ಬೆಸ್ಕಾಂ ವಸತಿಗೃಹ ವಾಸಿಗಳ ಸಮಸ್ಯೆ ಕೇಳೋರ್ಯಾರು?
-ಕೆ. ರಮೇಶ್
ಬಂಗಾರಪೇಟೆ: ಬೆಸ್ಕಾಂ ಇಲಾಖೆಯ ನೌಕರರಿಗೆ ನಿರ್ಮಾಣ ಮಾಡಿರುವ ವಸತಿ ಗೃಹಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೆ ನೌಕರರು ಪ್ರತಿದಿನ ಅವ್ಯವಸ್ಥೆಯಲ್ಲಿ ಕಾಲ ನೂಕುತ್ತಿದ್ದರೂ ಮೇಲಾಧಿಕಾರಿಗಳು ನಿಗಾವಹಿಸದೆ ಕಡೆಗಣಿಸಿರುವುದು ನೌಕರರ ಕೆಂಗಣ್ಣಿಗೆ ಗುರಿಯಾಗಿದೆ.
ಪಟ್ಟಣದ ಸೂಲಿಕುಂಟೆ ರಸ್ತೆಯಲ್ಲಿರುವ ಬೆಸ್ಕಾಂ ಉಪ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹಾಗೂ ಜೆಇ ಗಳಿಗೆಂದೇ ನಿರ್ಮಾಣ ಮಾಡಿರುವ 12 ವಸತಿ ಗೃಹಗಳಲ್ಲಿ ಕುಡಿಯುವ ನೀರು, ಸ್ವಚ್ಛತ್ತೆ, ಬೀದಿ ದೀಪಗಳು ಮತ್ತು ರಕ್ಷಣೆ ಕೊರತೆಯಿಂದ ಇಲ್ಲಿ ವಾಸಿಸುವ ಸಿಬ್ಬಂದಿ ಯಾರಿಗೇಳೋಣ ನಮ್ಮ ಪ್ಲಾಬ್ಲಮ್ ಎಂದು ಚಡಪಡಿಸುವಂತಾಗಿದೆ. ಸೌಲಭ್ಯಗಳ ಬಗ್ಗೆ ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಬದಲಾವಣೆಯಾಗಿಲ್ಲ ಎಂದು ಮಹಿಳೆಯರು ತಮ್ಮ ಅಳಲನ್ನು ಬಂದವರಿಗೆಲ್ಲಾ ಹೇಳುವಂತಾಗಿದೆ. ಈ ವಸತಿ ಗೃಹಗಳಲ್ಲಿ 15ವರ್ಷಗಳಿಂದ ಇರುವವರೂ ಇದ್ದಾರೆ. ಪ್ರಾರಂಭದಲ್ಲಿ ಎಲ್ಲಾ ಅನುಕೂಲಗಳಿದ್ದವು ನಂತರ ಎಲ್ಲವೂ ಮಾಯವಾಗಿದೆ.
ರಾತ್ರಿ ವೇಳೆ ಸಂಚರಿಸಲು ಬೀದಿ ದೀಪಗಳೂ ಇಲ್ಲ, ಅನೈರ್ಮಲ್ಯ ತಾಂಡವಾಡುತ್ತಿರುವುದರಿಂದ ರಾತ್ರಿ ವೇಳೆ ವಿಷ ಜಂತೂಗಳು ಕಾಣಿಸಿಕೊಂಡು ಮನೆಗಳಿಂದ ಹೊರ ಬರಲು ಮಹಿಳೆಯರು ಹೆದರುವಂತಾಗಿದೆ. ಒಮ್ಮೆ ಮನೆಯೊಳಗೆ ನಾಗರಹಾವು ಬಂದು ಬಡಾವಣೆ ಜನರನ್ನು ಆತಂಕಗೊಳಿಸಿತ್ತು. ಅಂದಿನಿಂದ ಸಂಜೆ 6ಗಂಟೆಯಾದರೆ ಮನೆಗಳಿಂದ ಯಾರೂ ಹೊರಬರುವುದಿಲ್ಲ. ಇನ್ನು ಕುಡಿಯುವ ನೀರಿಗೆ ಎಲ್ಲಿಲ್ಲಿದ ಹಾಹಾಕಾರವಿದೆಯಾದರೂ ಇಲಾಖೆ ಮೇಲಾಧಿಕಾರಿಗಳು ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಬದಲಿಗೆ ಖಾಸಗಿ ವ್ಯಕ್ತಿಗಳಿಂದ ಪ್ರತಿದಿನ ಹಣ ಕೊಟ್ಟು ನೀರನ್ನು ಖರೀದಿ ಮಾಡಿಕೊಳ್ಳುತ್ತಿದ್ದಾರೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿರವರಿಗೆ ಫೋನ್ ಮಾಡಿದರೆ ಉಚಿತ ನೀರಿನ ಟ್ಯಾಂಕರ್ ಕಳುಹಿಸಿಕೊಡುವರು ಪುರಸಭೆಗೆ ಕೇಳಿದರೆ ನಿಮ್ಮ ಬಡಾವಣೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅದು ಗ್ರಾಮ ಪಂಚಾಯ್ತಿಗೆ ಸೇರುತ್ತದೆ ಅಲ್ಲಿ ಕೇಳಿ ಎನ್ನುವರು ಎಂದು ಬಡಾವಣೆ ಮಹಿಳೆಯರು ತಿಳಿಸಿದರು. ಪಕ್ಕದಲ್ಲೇ ಇರುವ ಅಗ್ನಿಶಾಮಕ ಠಾಣೆಯಿಂದ ಪೂರೈಸಿಕೊಳ್ಳೋಣ ಎಂದರೆ ಅವರಿಗೇ ನೀರಿಲ್ಲದೆ ಬೆಮಲ್‌ನಿಂದ ನೀರು ತರುವರು ಇಲ್ಲಿರುವ ಬಹುತೇಕ ನೌಕರರು ಹೊರ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ನಾವು ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು ಇತ್ತ ಇಲಾಖೆನೂ ಸ್ಪಂದಿಸುತ್ತಿಲ್ಲ ಅತ್ತ ಪಂಚಾಯ್ತಿಯವರು ಕೇಳುತ್ತಿಲ್ಲ ಎಂದು ನೋವಿನಿಂದ ಹೇಳುವರು.
ಸಂಪ್‌ನಿಂದ ನೀರೆತ್ತಲು ವಿದ್ಯುತ್ ಕಳವು: ಬಡಾವಣೆಯ ನೌಕರರು ಖಾಸಗಿ ವ್ಯಕ್ತಿಗಳಿಂದ ಖರಿದಿಸುವ ನೀರನ್ನು ಸಂಪ್‌ನೊಳಗೆ ಹಾಕಿಕೊಂಡು ನಂತರ ಮೇಲೆತ್ತಲು ಅನಧಿಕೃತವಾಗಿ ಸಂಪ್ ಮೇಲೆ ಹಾದುಹೋಗಿರುವ ವಿದ್ಯುತ್ ಲೈನ್ ವಯರ್ ಅಳವಡಿಸಿಕೊಂಡು ನೀರು ಪೂರೈಸಿಕೊಳ್ಳುವರು, ಬೇರೆಯವರು ವಿದ್ಯುತ್ ಕಳವು ಮಾಡದಂತೆ ತಡೆಯಲು ಇಲಾಖೆ ಹಲವು ಹೊಸ ಯೋಜನೆಗಳನ್ನು ರೂಪಿಸುತ್ತಿದೆ ಆದರೆ ತಮ್ಮ ಇಲಾಖೆಯ ನೌಕರರಿಂದಲೇ ಲೈನ್‌ನಿಂದ ವಿದ್ಯುತ್ ಪ್ಪಡೆಯುತ್ತಿದ್ದು ಅವರು ಸಾಮಾನ್ಯ ಜನರಿಗೆ ನೀತಿ ಪಾಠ ಹೇಗೆ ತಾನೆ ಹೇಳುವರು. ಇಲಾಖೆ ಮೇಲಾಧಿಕಾರಿಗಳು ಕೂಡಲೆ ಇತ್ತ ನಿಗಾವಹಿಸಿ ಸಮಸ್ಯೆಗಳಿಂದ ನರಳುತ್ತಿರುವ ತಮ್ಮ ಸಿಬ್ಬಂದಿಗೆ ಮುಕ್ತಿ ಕಾಣಿಸುವರೇ ಎಂದು ಆಸೆ ಕಣ್ಣಿನಿಂದ ಸಿಬ್ಬಂದಿ ಎದುರು ನೋಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

