ಪಡಿತರ ವಿತರಿಸದೆ ಅಂಗಡಿಗೆ ಬೀಗ ಜಡಿದ ಮೇಲ್ವಿಚಾರಕ: ಗ್ರಾಹಕರ ಆಕ್ರೋಶ
ಚಿಂತಾಮಣಿ: ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಡವರಿಗೆ ವಿತರಿಸುವ ಪಡಿತರ ಪದಾರ್ಥಗಳನ್ನು ವಿತರಿಸದೆ ಡಿಪೋ ಮೇಲ್ವಿಚಾರಕ ಬೀಗ ಹಾಕಿಕೊಂಡು ಪರಾರಿಯಾದ ಮೇಲ್ವಿಚಾರಕನ ವಿರುದ್ಧ ಪಡಿತರ ಚೀಟಿದಾರರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ವೈಜಕೂರು ವ್ಯವಸಾಯ ಸಹಕಾರ ಸಂಘ ವತಿಯಿಂದ ವಿತರಿಸುವ ಪಡಿತರ ಆಹಾರ ಪದಾರ್ಥಗಳನ್ನು ಕೊಂಗನಹಳ್ಳಿ ಗ್ರಾಮದಲ್ಲಿ ಪಡಿತರ ಚೀಟಿದಾರರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವಿತರಿಸದೆ ಬೀಗ ಹಾಕಿಕೊಂಡು ಹೊರಟು ಹೋದ ಮೇಲ್ವಿಚಾರಕನ ಕಾರ್ಯವೈಖರಿ ಬಗ್ಗೆ ಮಹಿಳೆಯರು, ವೃದ್ಧರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವರು ವರ ಕೊಟ್ಟರೂ ಪೂಜಾರಿ ವರ ನೀಡಲಿಲ್ಲ ಎಂಬ ಗಾದೆಯಂತೆ ಸರ್ಕಾರ ಬಡ ಜನತೆಗೆ ವಿತರಿಸುವ ಆಹಾರ ಪದಾರ್ಥಗಳ ವಿತರಣೆಯಲ್ಲಿಯೂ ಬೆಳಗಿನಿಂದ ಮಧ್ಯಾಹ್ನದವರೆಗೂ ಸರದಿ ಸಾಲಿನಲ್ಲಿ ನಿಂತು ಸುಸ್ತಾಗಿ ತಾಳ್ಮೆ ಪರೀಕ್ಷಿಸಿದ ಪದಾರ್ಥಗಳ ವಿತರಣಾ ಮೇಲ್ವಿಚಾರಕನ ಯಾವುದೇ ಸೂಚನೆ ಅಥವಾ ವೇಳೆಯನ್ನು ನಿಗದಿಪಡಿಸದೆ ಪದಾರ್ಥಗಳನ್ನು ವಿತರಿಸುವ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದನ್ನು ಕಂಡ ಗ್ರಾಮಸ್ಥರು ಇವರ ಕಾರ್ಯವೈಖರಿ ವಿರುದ್ಧ ತೀವ್ರವಾಗಿ ಖಂಡಿಸಿದ್ದಾರೆ.
ಸಂಬಂಧಪಟ್ಟ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಬಡಜನರಿಗೆ ವಿತರಿಸುವ ನ್ಯಾಯಬೆಲೆಯ ಆಹಾರ ಪದಾರ್ಥಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಬೇಕೆಂದು ಕೊಂಗನಹಳ್ಳಿ ಗ್ರಾಮದ ನೂರಾರು ಪಡಿತರ ಚೀಟಿದಾರರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

