ಕೋಲಾರ

ಅಸಮರ್ಪಕ ವಿದ್ಯುತ್: ಬೆಸ್ಕಾಂ ಕಚೇರಿಗೆ ಕರವೇ ಮುತ್ತಿಗೆ

Published On :

ಕ.ಪ್ರ.ವಾರ್ತೆ ಮಾಲೂರು ಡಿ.19
ಅಸಮರ್ಪಕ ವಿದ್ಯುತ್ ವಿತರಣೆಯನ್ನು ಖಂಡಿಸಿ ಸ್ಥಳೀಯ ಕರವೇ ಕಾರ್ಯಕರ್ತರು ಇಲ್ಲಿನ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ.
ಕರವೇ ಅಧ್ಯಕ್ಷ ರಾಮಕೃಷ್ಣಪ್ಪ ಈ ಸಂದರ್ಭದಲ್ಲಿ ಮಾತನಾಡಿ ಬೆಸ್ಕಾಂ ಇಲಾಖೆ ತಮ್ಮ ಇಚ್ಚೆ ರೀತಿಯಲ್ಲಿ ಕರೆಂಟ್ ತೆಗೆಯುತ್ತಿರುವುದರಿಂದ ಕೃಷಿ ಹಾಗೂ ಪರೀಕ್ಷೆ ಹತ್ತಿರು ಬರುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಕಷ್ಠದಲ್ಲಿದ್ದಾರೆ.
ಒಂದಡೆ  ಒಂದು ರುಪಾಯಿ ಅಕ್ಕಿ ನೀಡಿ ಬಡ ರೈತನಿಗೆ ಸಹಕಾರ ನೀಡುತ್ತಿರುವ ರಾಜ್ಯ ಸರ್ಕಾರವು ಇನ್ನೊಂದೆಡೆ ಅನಿಮಿಯತವಾಗಿ ವಿದ್ಯುತ್ ಅಡಚಣೆ ಮಾಡಿ ಕೃಷಿ ನಂಬಿರುವ ರೈತನ ಹಾಗೂ ವಿದ್ಯಾಭ್ಯಾಸ ಮಾಡುತ್ತಿರುವ ಗ್ರಾಮೀಣ ಮಕ್ಕಳ ಭವಿಷ್ಯವನ್ನು ಹಾಳುಗೆಡುವುತ್ತಿದೆ ಎಂದು ಆಪಾದಿಸಿದರು. ಇನ್ನೆರಡು ದಿನಗಳಲ್ಲಿ ನಿಗದಿತ ವೇಳೆ ಘೋಷಿಸಿ ಕರೆಂಟ್‌ನ ವಿತರಣೆಯನ್ನು ಸಮರ್ಪಕ ಮಾಡದಿದ್ದರೆ ತಾಲೂಕಿನಲ್ಲಿರುವ ಎಲ್ಲ ಬೆಸ್ಕಾ ಸ್ಟೇಷನ್ ಮುಂಭಾಗಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಕಾರರ ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಂ ಎ.ಇ.ಇ.ವಾಸುದೇವ ರವರು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿರುವುದರಿಂದ ವಿದ್ಯುತ್ ಸಮಸ್ಯೆ ಪ್ರಾರಂಭವಾಗಿದ್ದು, ತಾಲೂಕಿಗೆ ಬೇಕಾಗಿದ್ದ 140 ಮೆ.ವ್ಯಾಟ್‌ನಲ್ಲಿ ಕೇವಲ 30 ರಿಂದ 40 ಮೆ.ವ್ಯಾಟ್ ವಿದ್ಯುತ್ ಸರಬಾರಾಜುವಾಗುತ್ತಿದೆ.
ಸುಮಾರು ಒಂದು ನೂರು ಮೆ.ವ್ಯಾಟ್ ಕರೆಂಟ್‌ನ ಕೊರತೆಯಿಂದ ತಾಲೂಕಿನ ವಿದ್ಯುತ್ ಸಮಸ್ಯೆ ಸಂಭವಿಸುತ್ತಿದ್ದು, ಇಲ್ಲಿನ ಪರಿಸ್ಥಿತಿ ಬಗ್ಗೆ ಮೇಲಿನಾಧಿಕಾರಿಗಳಿಗೆ ತಿಳಿಸಲಾಗಿದೆ. ಇನ್ನೆರಡು ದಿನದಲ್ಲಿ ಪರಿಸ್ಥಿತಿ ಸುಧಾರಿಸಬಹುದೆಂಬ ಆಶಾ ಭಾವನೆಯನ್ನು ಮೇಲಿನಾಧಿಕಾರಿಗಳು ತಿಳಿಸಿರುವುದರಿಂದ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಮುಂದಿನ ಮೂರು ದಿನದೂಳಗೆ ಸುಧಾರಿಸಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.