ಕೋಲಾರ

ಜನರನ್ನು ಬೆಚ್ಚಿಬೀಳಿಸುತ್ತಿರುವ ಚಳಿ

Published On :

ಟೇಕಲ್: ಟೇಕಲ್‌ನಲ್ಲಿ ಕಳೆದ ಒಂದು ವಾರದಿಂದ ಕನಿಷ್ಠ ತಾಪಮಾನ ಕುಸಿಯುತ್ತಿದ್ದು ಮಧ್ಯಾಹ್ನ ಬಿಸಿಲಿದ್ದರೆ, ಸಂಜೆಯಾಯಿತೆಂದರೆ ಮೈಕೊರೆಯುವ ಚಳಿ ಎದುರಾಗುತ್ತದೆ.
 ಇದರಿಂದ, ಟೇಕಲ್ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು ಹೇಮಾದ್ರಿ, ಪೋಮಾದ್ರಿ ಬೆಟ್ಟಗಳು ಈ ಕೊರೆಯುವ ಚಳಿ ಮತ್ತು ಹಿಮಕ್ಕೆ ಮೈ ಒಡ್ಡಿ ನಿಂತು ತಾಪಮಾನ ಮತ್ತಷ್ಟು ಕುಸಿಯುವಂತೆ ಮಾಡುತ್ತಿದೆ. ಅದರಲ್ಲೂ ರಾತ್ರಿಯಿಡೀ ಕೊರೆಯುವ ಚಳಿ ಕವಿಯುತ್ತದೆ.
ಮಧ್ಯರಾತ್ರಿ 1 ಗಂಟೆಯಿಂದಲೇ ದಟ್ಟವಾದ ಮಂಜು ಆವರಿಸಿದ್ದು ಮುಂಜಾನೆ 8ರ ತನಕ ರಸ್ತೆಗಳೆಲ್ಲಾ ಕತ್ತಲು ನಿರ್ಮಾಣವಾಗುತ್ತದೆ. ಬೆಟ್ಟದ ತಪ್ಪಲಿನಲ್ಲಿ ಓಡಾಡುವ ವಾಹನಗಳು ಗುರುತೇ ಸಿಗದಷ್ಟು ದಟ್ಟ ಮಂಜು ಆವರಿಸಿದ್ದು ಎಲ್ಲಾ ವಾಹನಗಳು ತಮ್ಮ ಮುಂದಿನ ಲೈಟ್‌ಗಳನ್ನು ಹಾಕಿಕೊಂಡೆ ಸಂಚರಿಸಬೇಕಾಗುತ್ತದೆ.
ಜನ ದಿಗ್ಭ್ರಾಂತ: ಅದರಲ್ಲೂ ಕೊರೆಯುವ ಚಳಿ, ಹಿಮ, ಹಿಮಗಾಳಿಯಿಂದ ವಯೋವೃದ್ಧರು, ಮಕ್ಕಳಿಗೆ ತೀವ್ರ ತೊಂದರೆ ಒಳಗಾಗಿದ್ದು ಅಸ್ತಮಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ರೋಗ ಉಲ್ಬಣವಾಗುತ್ತಿದೆ. ಉಸಿರಾಟದ ತೊಂದರೆ ಜನಸಾಮಾನ್ಯರ ಆರೋಗ್ಯದಲ್ಲಿ ಏರುಪೇರು ಹೆಚ್ಚಾಗಿದ್ದು, ಹಿಮದಲ್ಲಿ ಓಡಾಡುವ ಜನಕ್ಕೆ ಬಹುತೇಕ ಕಾಯಿಲೆಗಳು ಬರುತ್ತಿವೆ. ಈ ವಾರಾಂತ್ಯದಿಂದ ತಾಪಮಾನ ಕುಸಿಯುತ್ತಿದ್ದು ಜನ ದಿಗ್ಭ್ರಾಂತರಾಗಿದ್ದಾರೆ.
ಚಳಿ ಹೆಚ್ಚು: ಈ ಕೊರೆಯುವ ಚಳಿಗೆ ಜರ್ಕಿನ್, ಸ್ವೆಟರ್ ಹಾಗೂ ಚಳಿಯಿಂದ ದೂರವಾಗಲು ಬಳಸುವ ಉಡುಪುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನೂ ಕೆಲವರು ಚಳಿಯಿಂದ ಪಾರಾಗಲು ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದ್ದು ಮಾರಾಟಗಾರರಿಗೂ ಇದರಿಂದ ಹೆಚ್ಚಿನ ಲಾಭವಾಗುತ್ತಿದೆ. ಈ ಶೀತಗಾಳಿಯಿಂದ ಕೆಮ್ಮು, ಕಫ, ಮಕ್ಕಳ ಕಾಯಿಲೆ, ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಆಸ್ಪತ್ರೆಗಳಲ್ಲಿ ಜನ ಕಿಕ್ಕಿರಿದು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಶೀತಗಾಳಿ ಮತ್ತು ಚಳಿ ಹೆಚ್ಚಾಗಿದ್ದು ಜನರನ್ನು ನಲುಗಿಸಿಬಿಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.