ರೈತರ ಶೋಷಿಸದಿರಿ: ಮಾನವೀಯತೆ ಮೆರೆಯಿರಿ
ಬಂಗಾರಪೇಟೆ: ಬರದಿಂದ ತತ್ತರಿಸಿರುವ ರೈತರನ್ನು ಯಾವುದೇ ಕಾರಣಕ್ಕೂ ಅಧಿಕಾರಿಗಳು ಶೋಷಿಸಬಾರದು ಹಾಗೂ ಕೆಲಸ ಕಾರ್ಯಗಳಿಗೆ ಲಂಚ ಅಪೇಕ್ಷೆ ಪಡದೆ ತ್ವರಿತವಾಗಿ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆಯಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಗುಲ್ಲಹಳ್ಳಿ ಪಂಚಾಯ್ತಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಸ್ಥರ ಕುಂದು ಕೊರತೆ ನಿವಾರಣೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ಕ್ಷೇತ್ರಕ್ಕೆ ಬರ ಆವರಿಸಿ ರೈತರನ್ನು ಬೆಂಡಾಗುವಂತೆ ಮಾಡಿದೆ ಈ ಮಧ್ಯ ಅಧಿಕಾರಿಗಳು ಅವರ ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಬಂದಾಗ ಸೌಜನ್ಯದಿಂದ ವರ್ತಿಸಿ ವಿಳಂಬ ಮಾಡದೆ ಮತ್ತು ಹಣಕ್ಕಾಗಿ ಪೀಡಿಸುವ ಬಗ್ಗೆ ದೂರುಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಳೆದ ತಿಂಗಳಿಂದ ಗಡಿ ಭಾಗದ ಗ್ರಾಮಗಳಲ್ಲಿ ಆನೆಗಳ ಹಿಂಡು ದಾಳಿ ಮಾಡಿ ರೈತರ ಬೆಳೆಗಳನ್ನು ನಾಶಪಡಿಸಿ ರೈತರನ್ನು ಮತ್ತಷ್ಟು ದಿವಾಳಿಯತ್ತ ಸಾಗುವಂತೆ ಮಾಡಿರುವ ಆನೆಗಳನ್ನು ಮತ್ತೆ ತಮಿಳುನಾಡಿನತ್ತ ಸಾಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಬೆಳೆ ನಷ್ಟಕ್ಕೆ ಸರ್ಕಾರದ ಜೊತೆ ಮಾತುಕತೆ ನಡೆಸಿ 80 ಲಕ್ಷ ರು. ಮಂಜೂರು ಮಾಡಿಸಿರುವೆ ಎಂದು ಹೇಳಿದರು.
ಅಲ್ಲದೆ ಆನೆಗಳು ಕಾಡು ಬಿಟ್ಟು ರೈತರ ಹೊಳದತ್ತ ಬಾರದಂತೆ ಅರಣ್ಯದಲ್ಲಿ ಹೊಂಡಗಳನ್ನು ನಿರ್ಮಾಣಕ್ಕೆ ಹಾಗೂ ಅಲ್ಲೇ ಅವುಗಳಿಗೆ ನೀರು ಲಭಿಸುವಂತೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಮಾರ್ಗದರ್ಶನ ನೀಡಲಾಗಿದೆ ಎಂದರು.
ಕುಂದುಕೊರತೆ ಸಭೆಯಲ್ಲಿ ನಿರ್ಣಯಿಸುವ ಕಾರ್ಯಗಳನ್ನು ಅಧಿಕಾರಿಗಳು ವಾರದೊಳಗೆ ಪೂರೈಸಬೇಕು ಮುಂದಿನ ಸಭೆಗೆ ಬಂದಾಗ ಮತ್ತೆ ಸಮಸ್ಯೆಗಳು ಕೇಳಿ ಬರಬಾರದು. ವಾರದಿಂದ ಕ್ಷೇತ್ರದಲ್ಲಿ ತಲೆ ದೂರಿರುವ ವಿದ್ಯುತ್ಸ್ಮಸ್ಯೆಗೆ ಕಲ್ಲಿದ್ದಲು ಕೊರತೇ ಕಾರಣವಾಗಿದ್ದು ಮೂರು ನಾಲ್ಕು ದಿನಗಳಲ್ಲಿ ಸಮಸ್ಯೆ ನೀಗಲಿದೆ ಜನರು ಆತಂಕಪಡುವ ಅಗತ್ಯವಿಲ್ಲ ಮತ್ತು ಇದನ್ನೇ ಬಂಡವಾಳವಾಗಿಟ್ಟುಕೊಂಡು ಪ್ರತಿಭಟನೆ ಮಾಡುವ ಅಗತ್ಯವೂ ಇಲ್ಲ ಎಂದು ಹೇಳಿದರು.ಇದೇ ವೇಳೆ ಪಂಚಾಯ್ತಿಯ ಹಲವು ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣ, ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು.ಶಾಸಕರು ಭೇಟಿ ನೀಡಿದ ಪ್ರತಿ ಹಳ್ಳಿಯಲ್ಲಿಯೂ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ,ಇಒ ಕೆ.ಎಸ್.ಭಟ್.ಪಂಚಾಯ್ತಿ ಅಧ್ಯಕ್ಷ ಚಲಪತಿ, ತಾಪಂ ಸದಸ್ಯೆ ಲಕ್ಷ್ಮೀದೇವಮ್ಮ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

