ಕೋಲಾರ ಭೂಮಿಗೆ ಹೆಚ್ಚಿನ ಬೇಡಿಕೆ: ಶಾಸಕ
ಮಾಲೂರು: ಕೋಲಾರ ಜಿಲ್ಲೆ ಬೆಂಗಳೂರಿಗೆ ಹತ್ತಿರವಿರುವದರಿಂದ ಭೂಮಿಗೆ ಹೆಚ್ಚಿನ ಬೇಡಿಕೆ ಇದ್ದು,ಪಿಟಿಸಿಎಲ್‌ನಿಂದ ದಲಿತರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಮಂಜುನಾಥ್ ಹೇಳಿದರು.
ಅವರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಅಟ್ರಾಸಿಟಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತ ರಾಜ್ಯ ಸರ್ಕಾರವು ದಲಿತರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರು.ಗಳ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ. ಆದರೆ ಅವುಗಳು ಪೂರ್ಣವಾಗಿ ಫಲಾನುಭವಿಗಳಿಗೆ ಸಿಗದಂತೆ ಮಾಡುವ ಭ್ರಷ್ಟ ಅಧಿಕಾರಿಗಳ ತಂಡವು ಸಿದ್ದವಾಗಿರುತ್ತದೆ. ಇಂತಹವರ ಬಗ್ಗೆ ಎಚ್ಚರವಿರಬೇಕು ಎಂದ ಶಾಸಕರು, ರಾಜ್ಯವು ಲಂಚಮುಕ್ತವಾದಾಗ ಮಾತ್ರ ಅಭಿವೃದ್ಧಿ ಹೂಂದಲು ಸಾಧ್ಯ ಎಂದರು.
ಮರುಪರಿಶೀಲಿಸಬೇಕು: ಶಾದಿ ಭಾಗ್ಯಕ್ಕಾಗಿ ರಾಜ್ಯ ಸರ್ಕಾರ ಮೀಸಲಿಟ್ಟಿರುವುದು ಕೇವಲ ರು. 5 ಕೋಟಿ. ಆ ಮೊತ್ತವು ಒಂದು ಪ್ರದೇಶ ಪಲಾನುಭವಿಗಳಿಗೆ ನೀಡಲು ಸಾಧ್ಯವಾಗುವುದಿಲ್ಲ. ಈ ರೀತಿಯಲ್ಲಿ ಯೋಜನೆಗಳನ್ನು ರೂಪಿಸುವುದನ್ನು ಆಡಳಿತ ಸರ್ಕಾರಗಳು ಬಿಡಬೇಕು ಎಂದ ಶಾಸಕರು, ದಲಿತರ ಏಳಿಗೆಗೆ ಸಹಕಾರ ನೀಡಬೇಕಾದರೆ ಪಿಟಿಸಿಎಲ್‌ಗಳ ಬಗ್ಗೆ ರಾಜ್ಯ ಸರ್ಕಾರ ಮರು ಪರಿಶೀಲಿಸಬೇಕು ಹಾಗೂ ಈ ಬಗ್ಗೆ ದಲಿತ ಸಂಘಟನೆಗಳು ರಾಜ್ಯ ಸರ್ಕಾರದ ಗಮನ ಸೆಳೆಯಬೇಕು ಎಂದರು.
ನಿಗದಿತ ಸಮಯದಲ್ಲೇ ಸಭೆ: ತಾಲೂಕು ಆಡಳಿತದಲ್ಲಿ ಭ್ರಷ್ಟಾಚಾರ ತಡೆಯಲು ಪ್ರಾಮಾಣೀಕ ಪ್ರಯತ್ನ ಮಾಡಲಾಗುತ್ತಿದ್ದು, ತಮ್ಮ ಕಚೇರಿ ಕೆಲಸಗಳಿಗಾಗಿ ಅಧಿಕಾರಿಗಳಿಗೆ ಲಂಚ ನೀಡದೇ ಜನತೆ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸಬೇಕು ಎಂದರು. ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ಮಾತನಾಡಿ ಈ ಹಿಂದೆ ಅಟ್ರಾಸಿಟಿ ಸಭೆ ಆದ ಪ್ರಮಾದಗಳ ಬಗ್ಗೆ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸುವುದಾಗಿ ತಿಳಿಸಿದ ತಹಸೀಲ್ದಾರ್, ಇನ್ನೂ ಮುಂದೆ ಅಟ್ರಾಸಿಟಿ ಸಮಿತಿ ರಚಿಸುವ ಜತೆಯಲ್ಲಿ ಸಭೆಗಳನ್ನು ನಿಗದಿತ ಕಾಲದಲ್ಲೇ ನಡೆಸುವುದಾಗಿ ತಿಳಿಸಿದರು.
ಜಿ.ಪಂ.ಸದಸ್ಯೆ ಯಲ್ಲಮ್ಮ, ತಾ.ಪಂ. ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷೆ ರಾಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಸದಸ್ಯ ಎಸ್.ವಿ. ಲೋಕೇಶ್, ಮೂರ್ತಿ, ಕಾರ್ಯ ನಿರ್ವಹಣಾಧಿಕಾರಿ ಸಂಜೀವಪ್ಪ, ಎ.ಇ.ಇ. ಬದ್ರಿನಾಥ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ,ಪುರಸಭೆ ಸದಸ್ಯ ಮುರಳೀಧರ್, ಮುಖಂಡ ಎಲುಗುಳಿ ರಾಜಣ್ಣ, ತಾಲೂಕು ವೈದ್ಯಾಧಿಕಾರಿ ಡಾ.ಅನುರಾಧ, ಆಹಾರ ಇಲಾಖೆ ಅಧಿಕಾರಿ ರಾಮಚಂದ್ರ, ಬೆಸ್ಕಾಂ ಎ.ಇ.ಇ. ವಾಸುದೇವ್, ತೋಟಗಾರಿಕಾಧಿಕಾರಿ ಆನಂದ್, ಬಿಇಓ ಸುಬ್ರಮಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

