ಬಿಎಸ್ಸೆನ್ನೆಲ್ ನಷ್ಟಕ್ಕೆ ಕೇಂದ್ರ ನೀತಿ ಕಾರಣ
ಕ.ಪ್ರ.ವಾರ್ತೆಕೋಲಾರಡಿ.21
ಸಂಸ್ಥೆಯ ಹಾಗೂ ಗ್ರಾಹಕರ ಹಿತ ಕಾಪಾಡುತ್ತಿರುವ ಬಿಎಸ್ಎನ್ಎಲ್ ನೌಕರರ ವರ್ಗದಿಂದ ಸಂಸ್ಥೆಗೆ ಯಾವುದೇ ರೀತಿಯಲ್ಲೂ ನಷ್ಟ ಉಂಟಾಗುತ್ತಿಲ್ಲ, ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಕಂದಾಯ ಕಡಿಮೆ ಆಗುತ್ತಿದೆ ಎಂದು ನ್ಯಾಷನಲ್ ಫೆಡರೇಷನ್ ಆಪ್ ಟೆವಿಕಾಂ ಎಂಪ್ಲಾಯಿಸ್ ಬಿಎಸ್ಎನ್ಎಲ್ ರ್ರಾಷ್ಟ್ರೀಯ ಉಪ ಪ್ರಧಾನ ಕಾರ್ಯದರ್ಶಿ ಕಾಂ.ಸಿ.ಕೆ. ಮತಿವಣ್ಣನ್ ತಿಳಿಸಿದರು.
ನಗರದ ಕೆಇಬಿ ಸಮುದಾಯ ಭವನದಲ್ಲಿ ನ್ಯಾಷನಲ್ ಫೆಡರೇಷನ್ ಆಪ್ ಟೆಲಿಕಾಂ ಎಂಪ್ಲಾಯಿಸ್ ಬಿಎಸ್ಎನ್ಎಲ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 3ನೇ ಸಮ್ಮೇಳನ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಂಸ್ಥೆಯ ನೌಕರರು ಉತ್ತಮ ಸೇವೆ ಸಲ್ಲಿಸುವ ಮೂಲಕ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದು ಇದಕ್ಕೆ ಆಡಳಿತ ವರ್ಗ ಸ್ಪಂಧಿಸುವುದು ಕರ್ತವ್ಯವಾಗಿದೆ ಎಂದರು.
ಸಂಸ್ಥೆಯು ನಷ್ಟದಲ್ಲಿ ಇದೆ ಎಂಬ ಕಾರಣಕ್ಕೆ ದುಡಿಯುವ ವರ್ಗಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ, ಕಾರ್ಮಿಕ ಮುಖಂಡ ನಂಬೂದರಿ ಅವರು ಆಡಳಿತ ಮಂಡಳಿಯ ಜೊತೆ ಬೌನಸ್, ವೇತನ ಹೆಚ್ಚಳ, ಬಡ್ತಿ ಮುಂತಾದ ಬೇಡಿಕೆಗಳ ಸಂಬಂಧ ಒಡಂಬಡಿಕೆ ಮಾಡಿಕೊಳ್ಳುವಾಗ ಸರಿಯಾದ ನಿರ್ಧಾರ ಕೈಗೊಳ್ಳದ ಕಾರಣ ಉತ್ಯುತ್ತಮ ಸೇವೆ ಸಲ್ಲಿಸುತ್ತಿರುವ ನೌಕರರ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮ್ಮೇಳನವನ್ನು ಜಿಲ್ಲಾ ಟೆಲಿಕಾಂ ಜನರಲ್ಮ್ಯಾನೇಜರ್ ಎನ್.ಡಿ. ರಾಮರಾಜು ಉದ್ಘಾಟಿಸಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದಕ್ಕೆ ಉತ್ಕೃಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು.
ಸ್ಥಿರ ದೂರವಾಣಿ, ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ದೂರುಗಳಿದ್ದು ಇದನ್ನು ಸಕಾಲಕ್ಕೆ ಸರಿಪಡಿಸಿಸುವ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಬೇಕೆಂದರು.
ಸಂಸ್ಥೆಗೆ ನಿಜವಾದ ರಾಯಬಾರಿಗಳು ನಾವೇ ಆಗಿದ್ದೇವೆ, ಜಿಲ್ಲೆಯಲ್ಲಿ ಪ್ರಸ್ತುತ 1 ಲಕ್ಷ ಸ್ಥಿರ ದೂರವಾಣಿ ಸಂಪರ್ಕಗಳು ಇದ್ದು, 30 ಸಾವಿರಕ್ಕೆ ಬೇಡಿಕೆ ಇದೆ, ಗ್ರಾಹಕರೊಂದಿಗೆ ಸೌಹಾರ್ದತೆ ಕಾಯ್ದುಕೊಂಡು ಸಂಸ್ಥೆಯನ್ನು ಸುಸ್ಥಿತಿಗೆ ತರಬೇಕಾಗಿದೆ, ಇನ್ನು ಕೆಲವೇ ತಿಂಗಳಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಎನ್ಎಫ್ಟಿಇ ಅಧ್ಯಕ್ಷ ಕಾ.ಪಿ. ಮುತ್ತುರಾಮನ್ ವಹಿಸಿದ್ದರು. ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಕೆ.ಎಸ್. ಶೇಷಾದ್ರಿ, ಎಂ. ಕೃಷ್ಣಮೋಹನ್, ಬಿ.ಎಸ್. ಶಿವಲಿಂಗಪ್ಪ, ವೈ.ಎಸ್. ಪೂಜಾರ್, ಎಂ. ನರೀನ್ ನಂದಕುಮಾರ್, ವಿ.ಎಸ್. ಮೋಹನ್ ಕೃಷ್ಣ, ಟಿ.ವಿ. ಚಲಪತಿ, ಯಲ್ಲಪ್ಪ, ಆರ್. ಜಗನಾಥ್, ಆರ್. ಪ್ರಕಾಶ್, ಜಿ. ನಾರಾಯಣನ್, ಎಂ. ರಾಜ್ಕುಮಾರ್, ಸಿ.ಎಂ. ರಾಜ್, ಎಂ.ಆರ್. ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

