ಕೋಲಾರ

ವಿದ್ಯುತ್ ಸಮಸ್ಯೆ: ಬೆಸ್ಕಾಂಗೆ ರೈತರ ಮುತ್ತಿಗೆ, ಪ್ರತಿಭಟನೆ

Published On :

ಶಿಡ್ಲಘಟ್ಟ, ಡಿ. 20: ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಯಾವುದೇ ತಾರತಮ್ಯ ತೋರದೆ 10 ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕೆಂದು ಒತ್ತಾಯಿಸಿ ಬೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ. ನಾರಾಯಣಸ್ವಾಮಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಒಣ ಪ್ರದೇಶವಾಗಿದ್ದು ಸರಿಯಾಗಿ ಮಳೆ ಇಲ್ಲದೇ, ಅಂತರರ್ಜಲ 1200-1500 ಅಡಿಗಳು ಆಳಕ್ಕೆ ಕುಸಿದಿದೆ. ಅಲ್ಲಿಂದ ನೀರೆತ್ತಲು 20 ಎಚ್.ಪಿ. ಮೋಟರ್ ಅಳವಡಿಸಲು ರೈತರು ತಮ್ಮ ಮನೆಯಲ್ಲಿನ ಅಮೂಲ್ಯ ಸಾಮಗ್ರಿಗಳನ್ನು ಅಡವಿಟ್ಟು ಕೊಳವೆ ಬಾವಿ ತೋಡಿಸುವ ತೊಂದರೆಲ್ಲಿದ್ದಾರೆ.  ಸಮರ್ಪಕವಾಗಿ ವಿದ್ಯುತ್ ನೀಡದೇ ಹೋದರೆ ರೈತರು ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಹೋರಾಟದ ಎಚ್ಚರಿಕೆ: ಸಂಬಂಧಪಟ್ಟ ಇಲಾಖೆಯಲ್ಲಿ ಈವರೆಗೂ ಬಂದು ಹೋದ ಎಲ್ಲಾ ಸಚಿವರೂ, ಈ ಸಮಸ್ಯೆಯ ಅರಿವಿದ್ದೂ ನಿರಂತರ ವಿದ್ಯುತ್ ನೀಡುವಲ್ಲಿ ವಿಫಲಾಗಿದ್ದಾರೆ. ಈಗಲೂ ಅದು ಮುಂದುವರಿದಿದೆ. ಸಮಸ್ಯೆ ಇದೇ ರೀತಿ ಮುಂದುವರಿದರೆ ತೀವ್ರವಾಗಿ ಹೋರಾಟ ರೂಪಿಲಾಗುವುದೆಂದರು. ಶಿಡ್ಲಘಟ್ಟ ರೇಷ್ಮೆ ಉತ್ಪಾದನೆಯಲ್ಲೇ ಪ್ರಥಮ ಸ್ಥಾನದಲ್ಲಿದ್ದು, ರೇಷ್ಮೆ ಉದ್ದಿಮೆಯನ್ನೇ ಅವಲಂಬಿತರಾಗಿರುವ ತಾಲ್ಲೂಕು ರೈತರಿಗೆ ಹೆಚ್ಚಿನ ವಿದ್ಯುತ್ತನ್ನು ಸರ್ಕಾರ ನೀಡಬೇಕೆಂದು ಅವರು ಒತ್ತಾಯಿಸಿದರು.
ಶಿಡ್ಲಘಟ್ಟಕ್ಕೆ 6, 10 ಗಂಟೆಗಳ ಕಾಲ ಮೂರು ಲೈನ್ ವಿದ್ಯುತ್ ನೀಡಬೇಕು. ಸಿಂಗಲ್ ಫೇಸ್ ವಿದ್ಯುತ್ ನಮಗೆ ಬಬೇಡ ಎಂದು ಅಧಿಕಾರಿಗಳನ್ನು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಜಿಪಂ ಸದಸ್ಯ ಎಸ್.ಎಂ. ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಚೀಮನಹಳ್ಳಿ ಗೋಪಾಲ್, ರಾಯಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.