ಕೋಲಾರ

ಬುದ್ಧ-ಅಂಬೇಡ್ಕರ್ ಆದರ್ಶ ಪಾಲಿಸಲು ಕರೆ

Published On :

ಕೋಲಾರ, ಡಿ.22
ಬುದ್ಧನ ತತ್ವ ಮತ್ತು ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಿದರೆ ದೇಶವು ಬಲಿಷ್ಟವಾಗುತ್ತದೆಂದು ವರಜ್ಯೋತಿ ಬಂತೇಜಿ ಅಭಿಪ್ರಾಯಪಟ್ಟರು.
ಅವರು ನಗರದ ನಚಿಕೇತ ನಿಲಯದಲ್ಲಿರುವ ತಥಾಗತ ಭಗವಾನ್ ಬುದ್ಧ ದಮ್ಮ ಮತ್ತು ಪ್ರಚಾರ ಸಮಿತಿ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಮಹಾನ್ ಪರಿವರ್ತನೆಯೇ ಬೌದ್ಧಧರ್ಮ ಎಂಬ ವಿಚಾರ ಸಂಕಿರಣದಲ್ಲಿ ಪ್ರವಚನ ನೀಡಿ, ಬೌದ್ಧಧರ್ಮದ ಆದರ್ಶಗಳನ್ನು ಪ್ರಸ್ತುತ ದಿನಗಳಲ್ಲಿ ಪ್ರಪಂಚದ 18 ದೇಶಗಳು ಒಪ್ಪಿಕೊಂಡು ಬಲಿಷ್ಟವಾಗಿವೆ ಹಾಗೂ ಶಾಂತಿಯುತ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆಂದರು.
ಕಾರ್ಯಕ್ರಮ ಉದ್ಘಾಟಿಸಿದ ನ. ಸುಬ್ಬರಾಯಪ್ಪ, ಶೋಷಿತರು ಅಂಬೇಡ್ಕರ್ ಅವರ ಆಶಯದಂತೆ ಬೌದ್ಧಧರ್ಮವನ್ನು ಒಪ್ಪಿಕೊಂಡಾಗ ಮಾತ್ರ ಅವರ ಆದರ್ಶಗಳನ್ನು ಪಾಲಿಸದಂತಾಗುತ್ತದೆಂದರು. ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರ ಮುನಿ ಆಂಜಿನಪ್ಪ ಮಾತನಾಡಿದರು. ಕೆ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರೊ.ಹ. ಸೋಮಶೇಖರ್, ಎಂ. ಪಾಪಣ್ಣ, ಪ್ರೊ. ಹನುಮಪ್ಪ, ಪ್ರಭಾವತಿ, ದಮ್ಮಮಿತ್ರ ಸಿ.ಎಂ. ವಿಜಯಕುಮಾರ್, ಭಾಂಸೆಪ್ ನಾರಾಯಣಪ್ಪ, ಡಾ. ಶಿವಪ್ಪ ಅರಿವು, ನಂಬಿಗಾನಹಳ್ಳಿ ನಾರಾಯಣಸ್ವಾಮಿ, ಚಂದ್ರಶೇಖರ್, ಆಶಾರಾಣಿ, ಮೈತ್ರಿ, ದಿನೇಶ್  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.