ಕೋಲಾರ

ಎಚ್ಚರಿಕೆ ವಹಿಸಿದರೆ ಏಡ್ಸ್ ತಡೆ ಸಾಧ್ಯ

Published On :

ಟೇಕಲ್: ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವವರು, ಸೋಂಕಿತ ರಕ್ತ ಪಡೆಯುವವರು ಜಾಗೃತೆಯಿಂದ ಇರಬೇಕು. ಇದು ಮಾರಕ ಕಾಯಿಲೆ ಏಡ್ಸ್‌ಗೆ ಮಾರ್ಗವಾಗುತ್ತದೆ ಎಂದು ಮಾಲೂರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಪ್ರಸನ್ನ ತಿಳಿಸಿದರು.
ಟೇಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೆಡ್‌ರಿಬ್ಬನ್ ಕ್ಲಬ್ ಹಾಗೂ ಪ್ರೌಢಶಾಲಾ ವಿಭಾಗ ಸ್ಥಳೀಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಏಡ್ಸ್ ದಿನಾಚರಣೆ ಅಂಗವಾಗಿ ಏಡ್ಸ್ ಅರಿವು ಕಾರ್ಯಕ್ರಮ ಹಾಗೂ ಜಾಥಾ ಉದ್ಘಾಟಿಸಿ ಮಾತನಾಡಿ, ಮುನ್ನೆಚ್ಚರಿಕೆ ಕ್ರಮ ವಹಿಸಿದರೆ ಇದನ್ನು ತಡೆಗಟ್ಟಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎ.ಕೆ. ಪಾಪಣ್ಣ, ಯೌವನದಲ್ಲಿ ಯುವಕ ಯುವತಿಯರು ಜಾಗೃತಿ ವಹಿಸಿದರೆ ಏಡ್ಸ್ ರೋಗವನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಆರೋಗ್ಯ ನಿರೀಕ್ಷಕ ಎ. ರಾಜು, ಆರೋಗ್ಯ ಇಲಾಖೆಯ ಕಲೈಸೆಲ್ವಿ ಮತ್ತು ಉಪಪ್ರಾಂಶುಪಾಲೆ ಪುಷ್ಟಲತಾ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಚ್‌ಐವಿ ಏಡ್ಸ್ ಜಾಗೃತಿ ಮೂಡಿಸಲು ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು ಕಾಲೇಜಿನ ವಿದ್ಯಾರ್ಥಿನಿಯರಾದ ಶ್ಯಾಮಲ ಪ್ರಥಮ, ಕವಿತಾ ದ್ವಿತೀಯ, ಘೋಷಣಾ ಸ್ಪರ್ಧೆಯಲ್ಲಿ ಅಮೃತ ಪ್ರಥಮ, ಗುರುಪ್ರಸಾದ್ ದ್ವಿತೀಯ, ಬಿತ್ತಿಚಿತ್ರ ಸ್ಪರ್ಧೆಯಲ್ಲಿ ವಿ. ಹರೀಶ್ ಪ್ರಥಮ ಬಹುಮಾನ ಪಡೆದರು. ಕಾಲೇಜಿನ ಯುವಕರಿಂದ ಕಿರುನಾಟಕ ಜನಮನ ಸೋರೆಗೊಂಡಿತು, ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಏಡ್ಸ್ ಅರಿವು ಮೂಡಿಸಲು ಟೇಕಲ್ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಉಪನ್ಯಾಸಕರಾದ ರವಿಂದ್ರಕುಮಾರ್, ಶ್ರೀನಿವಾಸ್, ವಿವೇಕಾನಂದ, ನಾಗರತ್ನ, ಮಾಲಿನಿ, ಮುಜಾಮಿಲ್, ಅರುಣ್‌ಕುಮಾರ್, ಬಿ.ಎಂ. ಚಂದ್ರಪ್ಪ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.