ಕೋಲಾರ

ಜಯ ಕರ್ನಾಟಕ ಸಂಘಟನೆಯಿಂದ ಸಂತಾಪ

Published On :

ಕೋಲಾರ: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರ ಅಗಲಿಕೆಯಿಂದ ಕರ್ನಾಟಕದ ಸಾಹಿತ್ಯ ಲೋಕ ಹಾಗೂ ಕನ್ನಡಿಗರು ಒಬ್ಬ ಸಿರಿವಂತ ಕವಿ ಹಾಗೂ ಸಾಹಿತಿಯನ್ನು ಕಳೆದುಕೊಂಡಂತಾಗಿದೆ ಎಂದು ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜು ಸಂತಾಪ ಸೂಚಿಸಿದರು.
ಅವರು ನಗರದ ಕುವೆಂಪು ವೃತ್ತದಲ್ಲಿ ಜಿ.ಎಸ್. ಶಿವರುದ್ರಪ್ಪ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿಯಲ್ಲಿ ಭಾಗವಹಿಸಿ ಮಾತನಾಡುತ್ತಾ ಎಂದು ಮರೆಯದ ಹಾಡು, ಎದೆ ತುಂಬಿ ಹಾಡುವೆನು, ವೇದಂತಿ ಹೇಳಿದನು ಇತ್ಯಾದಿ ಕವಿತೆಗಳನ್ನು ರಚನೆ ಮಾಡಿ ಜನತೆ ಇಂದಿಗೂ ಇಷ್ಟಪಡುವಂತೆ ಮಾಡಿರುವ ಜಿಎಸ್ಎಸ್ ನಾಡಿನ ಮಹಾನ್ ಸಾಹಿತಿ ಎಂದು ಬಣ್ಣಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮದ್ ಆಲಿ, ಜಿಲ್ಲಾ ಉಪಾಧ್ಯಕ್ಷ ಕೀಲುಕೋಟೆ ಆಂಜಿನಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ. ಶಿವಕುಮಾರ್, ಜಿಲ್ಲಾ ಖಜಾಂಚಿ ಬಿ.ರಾಂಸಿಂಗ್, ಜಿಲ್ಲಾ ಸಂಚಾಲಕ ಜಿ.ಜಿ. ಸುರೇಶ್ ಬಾಬು, ಗಾಂಧಿನಗರ ರಾಜಣ್ಣ, ಕೆ.ಎಂ. ಗೋವಿಂದರಾಜು, ಬಿ.ಎಸ್.ಸುಬ್ರಮಣಿ, ಡಿ.ಎನ್.ನಾಗಸುಂದರ್, ಎಸ್. ಪ್ರಸಾದ್, ಎಂ. ವೆಂಕಟಪ್ಪ, ಮಂಜುನಾಥರಾವ್, ಸಿ.ಆರ್. ಬಾಬು, ಐಸ್ ನಾಗರಾಜು, ಸೈಯದ್ ಶಬ್ಬೀರ್ ಅಹಮದ್, ಬೊಂಬುಬಜಾರ್ ಮಂಜು, ಪಿ. ಶಿವಕುಮಾರ್, ಎಸ್.ನಾಗರಾಜ್, ಕೆ.ಜಿ. ಶಿವಣ್ಣ, ನಯೀಮ್ ಉಲ್ಲಾ ಖಾನ್, ಎಸ್. ಸುನೀಲ್, ಜಿ.ಜೆ. ಪುನೀತ್ಕುಮಾರ್, ಮಂಜುನಾಥ್, ಮುನಿರಾಜು, ಅಸ್ಲಂಪಾಷ, ನಯಾಜ್, ಮುನೀರ್ ಅಹಮದ್ ಇದ್ದರು.


ಮುಳಬಾಗಲಲ್ಲಿ ಶ್ರದ್ಧಾಂಜಲಿ

ಮುಳಬಾಗಲು: ಪಟ್ಟಣದ ಡಿವಿಜಿ ಸರ್ಕಲ್ ಬಳಿ ಡಾ.ಜಿ.ಎಸ್. ಶಿವರುದ್ರಪ್ಪ ನವರಿಗೆ ಸಂತಾಪ ಸೂಚಕ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮು.ಕೃ. ಪದ್ಮನಾಭರಾವ್, ಕನ್ನಡ ಭಾಷೆ ಅಭಿವೃದ್ಧಿಗೆ ಶಿವರುದ್ರಪ್ಪನವರು ನೀಡಿದ ಕಾಣಿಕೆ ಆಪಾರವಾದುದಾಗಿದ್ದು ಅವರ ನಿಧನದಿಂದ ಕನ್ನಡದ ಕಟ್ಟಾಭಿಮಾನಿಯನ್ನು ಕಳೆದುಕೊಂಡಂತಾಗಿದೆ ಎಂದರು. ನಿಕಟ ಪೂರ್ವ ಅಧ್ಯಕ್ಷ ಯು.ವಿ. ನಾರಾಯಣಾಚಾರ್, ಕನ್ನಡ ಭಟ ವೆಂಕಟಪ್ಪ, ಅಪ್ರೋಜಿಗೌಡ, ಸೊಣ್ಣಪ್ಪ, ಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.