ಕೋಲಾರ

ಫಲಾನುಭವಿಗಳಿಗೆ ವಂಚನೆ; ಪ್ರತಿಭಟನೆ

Published On :

ಶ್ರೀನಿವಾಸಪುರ: ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ  ಹೈನುಗಾರಿಕೆ ವಿಶೇಷ ಪ್ಯಾಕೇಜ್ ಯೋಜನೆಯಡಿ ತಾಲೂಕಿನ ಲಕ್ಷ್ಮೀಪುರ ಕೊತ್ತಪೇಟೆ ಗ್ರಾಮಗಳಿಗೆ ತಲಾ 20 ಸೀಮೆ ಹಸುಗಳನ್ನು ಮಂಜೂರಾಗಿದ್ದು, ವ್ಯವಸ್ಥಾಪಕರು ಫಲಾನುಭವಿಗಳನ್ನು ವಂಚಿಸಿ ಫಲಾನುಭವಿಗಳಿಂದ ಛೀಮಾರಿ  ಹಾಕಿಸಿಕೊಂಡ ಪ್ರಕರಣ ನಡೆದಿದೆ. ತಾಲೂಕಿನ ಲಕ್ಷ್ಮೀಪುರ ಪಂಚಾಯ್ತಿ ಕೋತ್ತಪೇಟೆ ಗ್ರಾಮಕ್ಕೆ 57 ಮತ್ತು ಲಕ್ಷ್ಮೀಪುರಕ್ಕೆ 27 ಸೇರಿ ಒಟ್ಟು 84 ಫಲಾನುಭವಿಗಳಿಗೆ ಸಹಾಯ ಧನ ತಲಾ 12.500 ರು., ಅವಧಿ ಸಾಲ 15.250 ರು. ಮತ್ತು ಫಲಾನುಭವಿಯ ಪಾಲು 1,500 ರು. ಸೇರಿ ಫಲಾನುಭವಿಗೆ ಒಂದು ಸೀಮೆ ಹಸುವಿಗೆ ಒಟ್ಟು 29.350 ರು.ಗಳಂತೆ ಫಲಾನುಭವಿಗಳಿಗೆ ಚೆಕ್ಗಳನ್ನು ನೀಡಿದೆ. ಪಣಸಮಾಕಲಹಳ್ಳಿ ರಾಮಮೂರ್ತಿ, ನಿಗಮದ ಪೀಲ್ಡ್ ಆಫೀಸರ್ ಹಾಗೂ ಜಿಲ್ಲಾ ವ್ಯವಸ್ಥಾಪಕ ಮೂವರು ಸೇರಿ ಹಣ ಡ್ರಾ ಮಾಡಿ ಕಳೆದ 4 ದಿನಗಳ ಹಿಂದೆ ಚಿಂತಾಮಣಿಯ ಧನಗಳ ಸಂತೆಯಲ್ಲಿ ರೋಗಗ್ರಸ್ಥ ಹಸುಗಳನ್ನು ಕೊಂಡುತಂದು ರಾತ್ರೋ ರಾತ್ರಿಯಲ್ಲಿ ಲಕ್ಷ್ಮೀಪುರದಲ್ಲಿ 20 ಮತ್ತು ಕೊತ್ತಪೇಟೆಯಲ್ಲಿ 20 ಹಸುಗಳನ್ನು ಫಲಾನುಭವಿಗಳಿಗೆ ನೀಡಿದೆ. ಇದನ್ನು ಗಮನಿಸಿದ ಫಲಾನುಭವಿಗಳು ಸಂಬಂಧಪಟ್ಟವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಮಧ್ಯವರ್ತಿಗಳ ಕಾಟ ತಪ್ಪಿಸಲು ಸೂಚನೆ
ಮುಳಬಾಗಲು: ರೈತರಿಗೆ ಸರ್ಕಾರ ನೀಡುವ ಸೌಲಭ್ಯಗಳು ಮಧ್ಯವರ್ತಿಗಳ ಕಾಟವಿಲ್ಲದೇ ರೈತರಿಗೆ ನೇರವಾಗಿ ಸಿಗಲು ಕೃಷಿ ಅಧಿಕಾರಿಗಳು ಶ್ರಮಿಸಬೇಕೆಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು. ಪಟ್ಟಣದಲ್ಲಿ ರೈತರಿಗಾಗಿ ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಪಂ ಉಪಾಧ್ಯಕ್ಷ ರಾಜಪ್ಪ, ಉತ್ತನೂರು ಶ್ರೀನಿವಾಸ್, ಬೈರಪ್ಪ, ಪಶುಪಾಲನೆ ಸಹಾಯಕ ನಿರ್ದೇಶಕ ರಮಾನಂದ್, ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ, ಶಿವಪ್ರಸಾದ್ ಇದ್ದರು.
ದಿ.ಎಂ.ಜಿ.ಆರ್ ಪುಣ್ಯ ತಿಥಿ
ಕೆಜಿಎಫ್: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಎಂ.ಜಿ.ಆರ್ ಅವರ 26ನೇ ಪುಣ್ಯತಿಥಿ ಅಂಗವಾಗಿ ಕೆಜಿಎಫ್ ಮಾಜಿ ಶಾಸಕ ಎಂ. ಭಕ್ತವತ್ಸಲಂ ನೇತೃತ್ವದಲ್ಲಿ ಆಂಡ್ರಸನ್ಪೇಟೆಯ ಜೆಡಿಎಸ್ ಕಚೇರಿಯಲ್ಲಿ ಎಂಜಿಆರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಂ. ಭಕ್ತವತ್ಸಲಂ, ಎಂಜಿಆರ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಡ ಕುಟುಂಬದವರಿಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಲ್ಲಿನ ಜನತೆಗೆ ದಾರಿ ದೀಪವಾಗಿದ್ದರು ಎಂದರು. ಮುರುಗೇಶನ್, ದಯಾನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.