ಕೋಲಾರ

ಮಕ್ಕಳ ಕವನಗಳ ಆಹ್ವಾನ

Published On :

ಕ.ಪ್ರ.ವಾರ್ತೆ  ಕೋಲಾರ  ಡಿ.25
ಮಕ್ಕಳಲ್ಲಿ ಅಡಗಿರುವ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದ್ದು, ಮನ್ವಂತರ ಪ್ರಕಾಶನದಿಂದ ಮಕ್ಕಳ ಕವನ ಸಂಕಲನ ಹೊರತರಲು ಉದ್ದೇಶಿಸಲಾಗಿದೆ ಎಂದು ಹಿರಿಯ ಸಾಹಿತಿ  ಸ. ರಘುನಾಥ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಮನ್ವಂತರ ಪ್ರಕಾಶನದ ಸಾಹಿತ್ಯ ವಿಭಾಗದಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೆಜಿಎಫ್‌ನಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಕ್ಕಳ ಕವಿಗೋಷ್ಠಿಗೆ ಆಸಕ್ತರನ್ನು ಹುಡುಕಿ ವೇದಿಕೆಗೆ ಕರೆತರಲು ಆದ ಕಷ್ಟ, ಕಹಿ ಅನುಭವದಿಂದ ಎಚ್ಚೆತ್ತುಗೊಂಡು ಮುಂದೆ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗದಿರಲಿ ಎಂಬ ಸದುದ್ದೇಶದಿಂದ ಮಕ್ಕಳ ಕವನ ಸಂಕಲನ ಹೊರತರಲು ನಿರ್ಧರಿಸಲಾಗಿದ್ದು, ಇದಕ್ಕೆ ಮನ್ವಂತರ ಪ್ರಕಾಶನ ಕೈಜೋಡಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಜ.30ರೊಳಗೆ ಕಳುಹಿಸಿ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಶಾಲೆಗಳ ಶಿಕ್ಷಕರು ತಮ್ಮ ಶಾಲೆಯ ಮಕ್ಕಳಿಂದ ಕವಿತೆಗಳನ್ನು ಬರೆಸಿ ಕಳುಹಿಸಿದಲ್ಲಿ ಗುಣಮಟ್ಟದ ಕವಿತೆಗಳನ್ನು ಆಯ್ಕೆ ಮಾಡಿ ಕವನ ಸಂಕಲನವನ್ನು ಹೊರತರುತ್ತೇವೆ ಎಂದು ಹೇಳಿದರು.
ಕವಿತೆಗಳನ್ನು ಅಗತ್ಯ ಅಂಚೆ ಚೀಟಿಯನ್ನು ಲಗತ್ತಿಸಿದ ಲಕೋಟೆಯಲ್ಲಿಟ್ಟು ಜ.30ರೊಳಗೆ  ಸ.ರಘುನಾಥ, ಮನ್ವಂತರ ಮಕ್ಕಳ ಕವನ ಸಂಕಲನ ರೂವಾರಿ, ಕಂಟ್ರಾಕ್ಟರ್ ರಾಜಣ್ಣನವರ ಮನೆ, ವೇಣು ವಿದ್ಯಾ ಸಂಸ್ಥೆ ಎದುರು, ಶ್ರೀನಿವಾಸಪುರ, ಕೋಲಾರ ಜಿಲ್ಲೆ-563135 ಕಳುಹಿಸಿಕೊಡಬೇಕು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಪ್ರಕಾಶನದ ಸಂಘಟನಾ ಸಂಚಾಲಕ ಮಾಲೂರು ಅಶ್ವತ್ಥರೆಡ್ಡಿ- 9448009933, ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ- 9448410359 ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಕಾಶನದ ಹಿರಿಯ ಉಪಾಧ್ಯಕ್ಷ ಟಿ.ಕೆ.ನಟರಾಜ್, ಪ್ರಧಾನ ಪೋಷಕ ಪಲ್ಲವಿಮಣಿ, ಉದಯಕುಮಾರ್, ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಸಂಘಟನಾ ಸಂಚಾಲಕ ಮಾಲೂರು ಅಶ್ವತ್ಥರೆಡ್ಡಿ, ಖಜಾಂಚಿ ಎಸ್.ಎನ್. ಪ್ರಕಾಶ್ ಮಾಮಿ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.