ಕೋಲಾರ

ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

Published On :

ಮಾಲೂರು: ದಲಿತರ ಬಗ್ಗೆ ನಿರ್ಲಕ್ಷ್ಯ ಬದಿಗೊತ್ತಿ ಮೂಲ ಸೌಕರ್ಯ ಒದಗಿಸುವಂತೆ ಅಗ್ರಹಿಸಿ ದಸಂಸ ತಾಲೂಕು ಘಟಕ ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ತಾಲೂಕು ಸಂಚಾಲಕ ಎಸ್.ಎಂ. ವೆಂಕಟೇಶ್ ಮಾತನಾಡಿ, ತಾಲೂಕಿನ 184 ಗ್ರಾಮಗಳಿಗೆ 1990-91ರಲ್ಲಿ ತಹಸೀಲ್ದಾರ್ ಹಕ್ಕುಪತ್ರ ವಿತರಿಸಿದ್ದರು. ಬಹಳಷ್ಟು ದಲಿತರಿಗೆ ಇನ್ನೂ ಸಂಬಂಧ ಪಟ್ಟ ದಾಖಲೆಯೇ ಸಿಕ್ಕಿಲ್ಲ. ಸರ್ಕಾರವು ಈ ಕೂಡಲೇ ಫಲಾನುಭವಿಗಳಿಗೆ ದಾಖಲಾತಿ ಒದಗಿಸಬೇಕು. ಗ್ರಾಮಗಳಿಲ್ಲಿ ಗೋಮಾಳ ಜಮೀನನ್ನು ದಲಿತರ ಹೆಸರಿಗೆ ಭೂಮಿ ಖಾತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮೂಲ ಸೌಕರ್ಯ ಒದಗಿಸಿ: ಪಟ್ಟಣದ ಹನುಮಂತನಗರದಲ್ಲಿರುವ ಬಡವರು ಹಾಗೂ ದಲಿತರು ಕಳೆದ ಎರಡು ದಶಕಗಳಿಂದ ಗುಡಿಸಿನಲ್ಲೇ ವಾಸುತ್ತಿದ್ದು, ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ. ಆ ಪ್ರದೇಶ ಸೇರಿದಂತೆ ತಾಲೂಕಿನಾದ್ಯಾಂತ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ಚವ್ವೇನಹಳ್ಳಿ ವಿಜಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಹಣ ಪಾವತಿಸಿರುವ ಪಟ್ಟಣದ 395 ದಲಿತ ನಿವಾಸಿಗಳಿಗೆ ಕೊಡಲೇ ನಿವೇಶನ ಹಂಚಬೇಕು ಹಾಗೂ ತಾಲೂಕಿನ ಸೂಣ್ಣಹಳ್ಳಿ ಗ್ರಾಮದ ಕೆರೆಯ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.
ತಾಲೂಕು ಸಂಚಾಲಕ ಮೈಲಾಂಡಹಳ್ಳಿ ಮುನಿಯಪ್ಪ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ವರದಾಪುರ ವೆಂಕಟೇಶ್, ಮಡಿವಾಳ ರಾಮಚಂದ್ರ, ಹನುಮಂತ ನಗರ ಮಂಜುನಾಥ್, ಶಂಕರ್, ಮಂಜುನಾಥ್, ಬಿ.ಆರ್.ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.