ಶಾಂತಿ, ನೆಮ್ಮದಿ ಸಿಗಲೆಂದು ಪ್ರಾರ್ಥನೆ
ಗೌರಿಬಿದನೂರು: ರಾಷ್ಟ್ರದಲ್ಲಿನ ಜನತೆಗೆ ಜೀವನದಲ್ಲಿ ಶಾಂತಿ, ನೆಮ್ಮದಿ ಸಿಗಲೆಂದು ಪುರಾತನ ಉಡುಮುಲೋಡು ಇಎಸ್‌ಐ ಚರ್ಚ್‌ಲ್ಲಿ ಸಭಾ ಪಾಲಕರಾದ ರೆವರೆಂಡ್ ರೂಫೆನ್ ಏಸು ದೇವರಲ್ಲಿ ಪ್ರಾರ್ಥಿಸಿದರು. ಇತ್ತೀಚಿನ ದಿನಗಳಲ್ಲಿ ದೇಶದ ಮಹಿಳೆಯರ ಮೇಲೆ ದಾಳಿಗಳು, ಅತ್ಯಾಚಾರಗಳು ಹೆಚ್ಚುತ್ತಿವೆ. ನೊಂದ ಮಹಿಳೆಯರಿಗೆ ನ್ಯಾಯ ಸಿಗಲೆಂದು, ಭಯೋದ್ಪಾದಕರಿಂದ ಉಪಟಳವಿಲ್ಲದೆ ದೇಶದ ಜನತೆ ಶಾಂತಿಯಿಂದ ಬಾಳಲೆಂದು ಎಲ್ಲರೂ ಏಸುವಿನಲ್ಲಿ ಪ್ರಾರ್ಥಿಸಬೇಕೆಂದು ಭಕ್ತರಿಗೆ ತಿಳಿಸಿದರು.
ಕ್ರಿಸ್ತ ಧರ್ಮದವರು ಶ್ರದ್ಧಾಭಕ್ತಿಯಿಂದ ಕ್ರಿಸ್ಮಸ್ ಆಚರಿಸಿಸಲಾಯಿತು. ಪಟ್ಟಣದ ರೇಲ್ವೆ ಗೇಟ್ ಸಮೀಪವಿರುವ ಚರ್ಚ್, ನದಿ ದಡದಲ್ಲಿರುವ ಗಾರ್ವಿನ್ ಮೆಮೋರಿಯಲ್ ಚರ್ಚ್, ಮಾನಸ ಅಸ್ಪತ್ರೆ ಬಳಿ ಇರುವ ಚರ್ಚ್, ತಾಲೂಕಿನಲ್ಲಿರುವ ಚರ್ಚ್‌ಗಳಲ್ಲಿ ಸಡಗರದಿಂದ ಹಬ್ಬವನ್ನು ಆಚರಿಸಿದರು.
ವಿಶೇಷ ಪ್ರಾರ್ಥನೆ
ಮುಳಬಾಗಲು: ಪಟ್ಟಣದ ಮುತ್ಯಾಲಪೇಟೆಯಲ್ಲಿರುವ ಭಾರತೀಯ ಮೆಧೋಡಿಸ್ಟ್ ಚರ್ಚ್‌ನಲ್ಲಿ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕ್ರಿಸ್ಮಸ್‌ನ್ನು ವೈಭವದಿಂದ ಆಚರಿಸಲಾಯಿತು. ತಾಲೂಕಿನ ಜಮ್ಮನಹಳ್ಳಿ ಮತ್ತು ಗೂಕುಂಟೆ ಗ್ರಾಮಗಳಲ್ಲೂ ಸಹ ಕ್ರಿಸ್ಮಸ್ ಆಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

