ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ಆಚರಣೆ
ಚಿಕ್ಕಬಳ್ಳಾಪುರ: ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಕ್ರೈಸ್ತ ಧರ್ಮದ ಪ್ರಚಾರಕ ಏಸು ಕ್ರಿಸ್ತನ ಜಯಂತಿಯನ್ನು ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಕಳೆದ 15 ದಿನಗಳಿಂದಲೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು ಬುಧವಾರ ಚರ್ಚುಗಳು ವಿದ್ಯುದೀಪಾಂಕಾರಗಳಿಂದ ಕಂಗೊಳಿಸುತ್ತಿದ್ದವು. ಬೆಳಿಗ್ಗೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಚರ್ಚುಗಳಿಗೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದರು. ಇನ್ನೂ ಸಂಜೆಯಾಗುತ್ತಿದ್ದಂತೆ ಚರ್ಚುಗಳಿಗೆ ಬರುವ ಭಕ್ತಾದಿಗಳ ಸಂಖ್ಯೆ ದುಪ್ಪಟ್ಟಾಯಿತು. ಅದರಲ್ಲೂ ಹಿಂದೂ, ಮುಸ್ಲಿಂ, ಜೈನ್ ಎಂಬ ಭೇದಭಾವವನ್ನು ತೋರದೇ ಎಲ್ಲಾ ಧರ್ಮಿಯ ಜನರು ಸಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಹಿಳೆಯರು, ಮಕ್ಕಳು, ಯುವಕ ಯುವತಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿ ತುಳುಕಾಡುತ್ತಿದ್ದ ಭಕ್ತಾದಿಗಳು ದೊಡ್ಡ ಸಾಲುಗಳಲ್ಲಿ ನಿಂತು ದೇವರ ದರ್ಶನವನ್ನು ಪಡೆದರು.
ಚರ್ಚುಗಳಲ್ಲಿ ಮೇಣದ ಬತ್ತಿಯನ್ನು ಅಂಟಿಸಿ ದೇವರನ್ನು ಹಲವರು ಪ್ರಾರ್ಥಿಸಿದರೆ, ವಿಶೇಷವಾಗಿ ಯೇಸು ಕಿಸ್ತನ ಜನ್ಮದ ದೃಶ್ಯವನ್ನು ಪ್ರತಿಬಿಂಬಿಸುವ ಬೊಂಬೆಗಳ ಪ್ರದರ್ಶನವನ್ನು ನೋಡಿ ಭಕ್ತಿಯ ಪರವಶರಾದರು.ಇನ್ನೂ ಬೇಕರಿಗಳಲ್ಲಿ ಬಗೆಬಗೆಯ ಕೇಕುಗಳ ಪ್ರದರ್ಶನ ಗಮನ ಸೆಳೆದರೆ, ಅನೇಕರ ಮನೆಗಳಲ್ಲಿ ನಕ್ಷತ್ರಗಳ ಮಾದರಿಯು ದೀಪದಿಂದ ಬೆಳಗಿತು.
ವೀರಪ್ಪ ಮೊಯ್ಲಿ ಪ್ರಾರ್ಥನೆ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚರ್ಚುಗಳಿಗೆ ಭೇಟಿ ನೀಡಿದ ಕೇಂದ್ರ ಪೆಟ್ರೋಲಿಯಂ ಹಾಗು ನೈಸರ್ಗಿಕ ಅನಿಲ ಕೇಂದ್ರ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರನ್ನು ಪ್ರಾರ್ಥಿಸಿ ಶುಭ ಕೋರಿದರು.
ನಗರದ ಬಿ.ಬಿ.ರಸ್ತೆಯಲ್ಲಿನ ಸಿಎಸ್ ಐ ಕ್ರೈಸ್ಟ್ ಚರ್ಚಿಗೆ ಭೇಟಿ ನೀಡಿ ಸಭಾಪಾಲಕರಾದ ರೆವರೆಂಡೆ ಶೈಲಶ್ರೀ ಸುರೇಶ್ ಮತ್ತು ಕ್ರೈಸ್ ಬಾಂಧವರಿಗೆ ಶುಭಾಶಯ ತಿಳಿಸಿದರು.ಆಲಯದಲ್ಲಿ ಸಭೆಯ ಯುವಕರು ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ನಿರ್ಮಿಸಿದ್ದ ಬೆತ್ಲೆಹೇಮಿನಲ್ಲಿ ಯೇಸು ಜನಿಸಿದ ಗೋದಲಿಯ ಮತ್ತು ಅರಮನೆಯ ಪ್ರತಿರೂಪವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾ ಉಪಾಧ್ಯಕ್ಷ ಎನ್.ಹೆಚ್. ಶಿವಶಂಕರ ರೆಡ್ಡಿ, ಮಾಜಿ ಶಾಸಕ ಎನ್.ಸಂಪಂಗಿ, ಕಾಂಗ್ರೆಸ್ ಮುಖಂಡರಾದ ಭಾವ, ಲಾಯರ್ ನಾರಾಯಣ ಸ್ವಾಮಿ, ಗೋವಿಂದ ಸ್ವಾಮಿ, ಖನ್ನಾ, ಸಭೆಯ ಸದಸ್ಯರಾದ ಜಿ. ಜಯಕುಮಾರ್, ಸಭಾ ಖಚಾಂಚಿ ಅರುಣ್ ಕುಮಾರ್, ಎಸ್.ವಿನ್ಸ್ಸ್ಟ್ನ್ ಕೆನಡಿ, ಆರ್.ಹೆನ್ರಿ ಪ್ರಸನ್ನ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

