ಕೋಲಾರ

ಸಿಇಟಿ ಬಿಕ್ಕಟ್ಟು; ಶಾಸನ ಜಾರಿಯಾಗಲಿ

Published On :

ಕೋಲಾರ: ಸಿಇಟಿ ಬಿಕ್ಕಟ್ಟಿಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಕಾರಣರಾಗಿದ್ದು, ಬಡ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕಾದರೆ ರಾಜ್ಯ ಸರ್ಕಾರ ಬಿಕ್ಕಟ್ಟಿನ ಪರಿಹಾರಕ್ಕೆ ಶಾಶ್ವತ ಶಾಸನ ಜಾರಿಗೆ ತರಬೇಕೆಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರಗಳು ಉನ್ನತ ಶಿಕ್ಷಣದಿಂದ ಬಡವರನ್ನು ದೂರವಿಡಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಖಾಸಗೀಕರಣ, ಕೇಸರೀಕರಣ ಉನ್ನತ ಶಿಕ್ಷಣದಲ್ಲಿ ಅಡಕವಾಗುವಂತೆ ಮಾಡಿ ಬಡವರನ್ನು ವಂಚನೆ ಮಾಡುವ ನೀತಿಗಳನ್ನು ಸರ್ಕಾರಗಳು ಜಾರಿ ಮಾಡುತ್ತಿದ್ದು, ಇಂತಹ ನೀತಿಗಳ ವಿರುದ್ಧ ಎಸ್ಎಫ್ಐ ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳನ್ನು ಸಂಘಟಿಸುತ್ತಿದೆ ಎಂದರು.
ಇಂದಿನ ಶಿಕ್ಷಣ ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸದೇ ಕಾರ್ಪೋರೇಟ್ ಕಂಪನಿಗಳ ಅವಶ್ಯಕತೆಗಳನ್ನು ಪೂರೈಸುವ ಶಿಕ್ಷಣ ನೀಡಲಾಗುತ್ತಿದೆ. ಸಿಇಟಿ ಬಿಕ್ಕಟ್ಟು ನಿವಾರಣೆ ಆಗದಿದ್ದರೆ ಉನ್ನತ ಶಿಕ್ಷಣ ಕೇವಲ ಹಣ ಇರುವವರ ಪಾಲಾಗುತ್ತದೆ ಎಂದರು.
12ವರ್ಷದ ಹಿಂದೆ ಶಾಶ್ವತ ನೀರಾವರಿ ವಿಷಯವನ್ನು ಮೊದಲ ಬಾರಿಗೆ ಎಸ್ಎಫ್ಐ ಪ್ರಸ್ತಾಪಿಸಿತು. ಆದರೆ, ಇಂದು ಶಾಶ್ವತ ನೀರಾವರಿ ಯೋಜನೆಗಳ ವಿಚಾರ ರಾಜಕೀಯ ಪಕ್ಷಗಳಿಗೆ ಅಧಿಕಾರ ಹಿಡಿಯುವ ಅಸ್ತ್ರವಾಗಿದೆ. ಈ ಚಳುವಳಿಯಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸುವ ಮೂಲಕ ಜನತೆಯ ಆಶೋತ್ತರ ಈಡೇರಿಸಬೇಕಾಗಿದೆ ಎಂದರು.
ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು. ಹಾಸ್ಟೆಲ್ ಮತ್ತು ಶಾಲಾ ಕಾಲೇಜುಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ವಿದ್ಯಾರ್ಥಿನಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಸುಪ್ರೀಂಕೋರ್ಟ್ನ ನಿರ್ದೇಶನಂತೆ ಪ್ರತಿ ಶಾಲಾ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಬೇಕು. ವಿದ್ಯಾರ್ಥಿ ವೇತನವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಮರ್ಪಕ ಸಾರಿಗೆ ವ್ಯವಸ್ಥೆ ಜಾರಿಗೊಳಿಸಬೇಕು. ಕೋಲಾರದ ಸ್ನಾತಕೋತ್ತರ ಕೇಂದ್ರದ ಕಟ್ಟಡವನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆ ಈಡೇರಿಕೆಗೂ ಒತ್ತಾಯಿಸಲಾಯಿತು. ಸಮ್ಮೇಳನದ ಅಧ್ಯಕ್ಷತೆಯನ್ನು ವಿ. ಅಂಬರೀಷ್ ವಹಿಸಿದ್ದರು. ಪ್ರಸ್ತಾವಿಕವಾಗಿ ವಾಸುದೇವರೆಡ್ಡಿ ಮಾತನಾಡಿದರು. ಎಸ್ಎಫ್ಐ ನೂತನ ಜಿಲ್ಲಾ ಅಧ್ಯಕ್ಷರಾಗಿ ಕೆ. ವಾಸುದೇವರೆಡ್ಡಿ, ಜಿಲ್ಲಾ ಕಾರ್ಯದರ್ಶಿಯಾಗಿ ಮಾರ್ಕಂಡಯ್ಯ, ಉಪಾಧ್ಯಕ್ಷರಾಗಿ ವೈ. ಅಮಿತ್, ಮೊಹಮದ್ ಮುಸ್ತಾಪ, ಶಿವಶಂಕರ್, ಸಹಕಾರ್ಯದರ್ಶಿಗಳಾಗಿ ಸಿ. ಅಮರೇಶ್, ಕೆ.ಎನ್. ಸುನೀಲ್ ಕುಮಾರ್, ಸಿ.ವೈ. ಗೋಪಿ, ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಅಮರಾವತಿ, ಜಿಲ್ಲಾ ಸಮಿತಿ ಸದಸ್ಯರಾಗಿ ಮಾಲೂರಿನ ಎ.ಜಿ. ಅರುಣ್ ಕುಮಾರ್, ದ್ರಾಕ್ಷಾಯಿಣಿ, ಉಮೇಶ್, ಪಿ. ದಿವ್ಯ, ಮುಳಬಾಗಿಲಿನ ಮಂಜುನಾಥ್, ಯಾಸ್ಮಿನ್, ಕುಮಾರ್.ಜಿ, ನಬಿವುಲ್ಲಾ, ಕೋಲಾರದ ಶಿವರಾಜ್, ಪವಿತ್ರ, ಸ್ನಾತಕೋತ್ತರ ಘಟಕದಿಂದ ಕೆ. ಗಂಗಾಧರ್, ಎ. ಜಬಿವುಲ್ಲ, ಮುರಳೀಧರ್, ಧನಂಜಯ್ರನ್ನು ಆಯ್ಕೆ ಮಾಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.