ಆರೋಪಿಗಳ ಬಂಧನ ವಿಳಂಬ ವಿರೋಧಿಸಿ ಪ್ರತಿಭಟನೆ
ಮಾಲೂರು: ಕಳೆದ ಆರು ತಿಂಗಳ ಹಿಂದೆ ತಾಲೂಕಿನ ಚೆನ್ನಕಲ್ಲು ಗ್ರಾಮದ ಬಳಿ ನಡೆದಿದ್ದ ತರಕಾರಿ ವ್ಯಾಪಾರಿ ಕೃಷ್ಣಪ್ಪನ ಕೊಲೆಗೆ ಸಂಬಂಧಿಸಿ ಈವರೆಗೂ ಆರೋಪಿಗಳನ್ನು ಬಂಧಿಸದ ಪೊಲೀಸರ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಕಳೆದ ಜುಲೈ 29 ರಂದು ತಾಲೂಕಿನ ಚೆನ್ನಕಲ್ಲು ನಿವಾಸಿ ತರಕಾರಿ ವ್ಯಾಪಾರಿ ಕೃಷ್ಣಪ್ಪ ಪಟ್ಟಣದಲ್ಲಿ ವಹಿವಾಟು ಮುಗಿಸಿ ಸಂಜೆ ವಾಪ್ಪಾಸ್ಸಾಗುತ್ತಿದ್ದ ವೇಳೆ ದುಷ್ಕರ್ಮಿಗಳು ಮಾರಕಾಶ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಆರೋಪಿಗಳ ಬಗ್ಗೆ ಸುಳಿವು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನೆಕಾರರು ಆರೋಪಿಸಿದರು. ನಾವು ಮಾಹಿತಿ ನೀಡಿದ ಸಂಶಯ ವ್ಯಕ್ತಿಗಳನ್ನು ವಿಚಾರಣೆ ನೆಡೆಸಿಲ್ಲ ಎಂದು ಆರೋಪಿಸಿದ ಮೃತ ಕೃಷ್ಣಪ್ಪರ ಮಗ ಹರೀಶ್ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಬರುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆಯಲ್ಲಿ ಕುಳಿತರು. ಇದರಿಂದ ಟ್ರಾಫಿಕ್ ಜಾಮ್ ಆದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಎಸ್ಐ ಮಂಜುನಾಥ್ ಪ್ರತಿಭಟನೆಕಾರರ ಮನವೂಳಿಸಿ ರಸ್ತೆ ತಡೆ ತೆರವುಗೊಳಿಸಿದರು. ಆರೋಪಿಗಳ ಬಂಧಿಸುವ ಬಗ್ಗೆ ಭರವಸೆ ನೀಡುವ ತನಕ ಪ್ರತಿಭಟನೆಕಾರರು ಪೊಲೀಸ್ ಠಾಣೆ ಮುಂಭಾಗ ದರಣಿ ಕುಳಿತರು. ಜಿಲ್ಲಾ ವರಿಷ್ಠಾಧಿಕಾರಿ ಮಾರ್ಗದರ್ಶನ ಮೇರೆಗೆ ಸ್ಥಳೀಯ ಎಸ್ಐ ಮಂಜುನಾಥ್ ಜನವರಿ 15 ರ ಒಳಗೆ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ ಮೇಲೆ ಧರಣಿ ಕೈ ಬಿಟ್ಟರು. ಮೃತ ಕೃಷ್ಣಪ್ಪ ರವರ ಮಗ ಸತೀಶ್, ಹರೀಶ್, ಸುರೇಶ್ ಗೌಡ, ಜಯ ಕರ್ನಾಟಕ ಅಧ್ಯಕ್ಷ ಕೆ. ದಿನೇಶ್ಗೌಡ, ನಾಗೇಶ್,ಬಚ್ಚೇಗೌಡ, ರಾಜೇಶ್, ಪ್ರಭಾಕರ್, ಮುನೇಗೌಡ, ದೇವರಾಜ್, ಮುರಳಿ, ಬಾಲಕೃಷ್ಣ, ಸುಮಂತ್, ಗಜೇಂದ್ರ, ಮಂಜುನಾಥ್, ರಘು, ರಾಮಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

