ಕೋಲಾರ

ಬೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

Published On :

ಕ.ಪ್ರ.ವಾರ್ತೆ  ಕೋಲಾರ  ಡಿ.27
ವಿದ್ಯುತ್ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ನಗರದ ಬೆಸ್ಕಾಂ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ ಗೌಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರು ಕೊಳವೆಬಾವಿಗಳ ಅಶ್ರಯದಿಂದ ಕೃಷಿ ಮತ್ತು ತೋಟಕಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಅವೈಜ್ಞಾನಿಕ ವಿದ್ಯುತ್ ಕಡಿತದಿಂದಾಗಿ ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ಸಂಕಷ್ಟಕ್ಕೀಡಾಗಿದ್ದಾನೆ ಎಂದು ಬೆಸ್ಕಾಂ ವಿರುದ್ಧ ಕಿಡಿಕಾರಿದರು.
ಜಿಲ್ಲೆಗೆ 140 ಮೆಗಾ ವ್ಯಾಟ್ ವಿದ್ಯುತ್ ನಿಗಧಿ ಮಾಡಿದ್ದರೂ ಕೇವಲ 30ರಿಂದ 40 ಮೆಗಾವ್ಯಾಟ್ ವಿದ್ಯುತ್ ನೀಡಲಾಗುತ್ತಿದೆ. ಜಿಲ್ಲೆಯ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ನಿವಾರಣೆ ಮಾಡುವಲ್ಲಿ ಕೋಲಾರ ಬೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆಂದು ದೂರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲೂರು ಅಶ್ವಥ್ ರೆಡ್ಡಿ ಮಾತನಾಡಿ, ಜಿಲ್ಲೆಗೆ ಅಗತ್ಯವಿರುವಷ್ಟು ವಿದ್ಯುತ್ ಪೂರೈಕೆ ಮಾಡಬೇಕು, ಕೂಡಲೇ ಜಿಲ್ಲೆಯ ಶಾಸಕರು ಬೆಸ್ಕಾಂ ವ್ಯಾವಸ್ಥಾಪಕ ನಿರ್ದೇಶಕರ ಬಳಿ ಚರ್ಚಿಸಿ, ಶಾಶ್ವತ ಪರಿಹಾರ ಮಾಡಿಕೊಡದಿದ್ದರೆ ಎಲ್ಲಾ ತಾಲೂಕು ಬೆಸ್ಕಾಂ ಕಚೇರಿ ಹಾಗೂ ಶಾಸಕರ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸಿ.ವಿ. ಪ್ರಭಾಕರ್ ಗೌಡ ಮಾತನಾಡಿ, ಸರ್ಕಾರ ಘೋಷಿಸರುವಂತೆ 8 ಗಂಟೆ ಕಾಲ ತ್ರೀಫೇಸ್ ವಿದ್ಯತ್ ನೀಡಬೇಕು, ಯಾವುದೇ ಮನ್ಸೂಚನೆ ನೀಡದೆ ವಿದ್ಯುತ್ ಕಡಿತಗೊಳಿಸಬಾರದು, ಕನಿಷ್ಠ 10 ಗಂಟೆಯಾದರೂ ನಿರಂತರವಾಗಿ ತ್ರೀಫೇಸ್ ವಿದ್ಯತ್ ನೀಡಬೇಕು, ಕೆಟ್ಟುಹೋದ ಟ್ರಾನ್ಸ್ ಪಾರ್ಮರ್‌ಗಳ ದುರಸ್ತಿಗೆ ಹಣ ರೈತರಿಂದ ಪಡೆಯುತ್ತಿರುವ ಗುತ್ತಿಗೆದಾರರನ್ನು ಮತ್ತು ವಾಣಿಜ್ಯ ಬಳಕೆ ವಿದ್ಯುತ್ ಕಳ್ಳತನ ಮಾಡುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಬೆಸ್ಕಾಂ ಆಧೀಕ್ಷಕ ಎಂಜನಿಯರ್ ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದ ಮುಖಂಡರು, ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾಯಾಧ್ಯಂತ ಪ್ರತಿಭಟನೆ ವಿಸ್ತರಣೆ ಮಾಡುವುದಾಗಿ ತಿಳಿಸಿದರು. ಸಂಘದ ಗೌರವಾಧ್ಯಕ್ಷ ತೇರ್ನಹಳ್ಳಿ ವೆಂಕಟೇಶ್ ಗೌಡ, ಕಾರ್ಯದರ್ಶಿ ಸೈಯದ್ ಮುಜೀಬ್ ಪಾಷ, ವಿದ್ಯಾರ್ಥಿ ಘಟಕದ ಜಿಲ್ಲಾ ಸಂಚಾಲಕ ವೀರಾಪುರ ಮಂಜುನಾಥ್, ವೆಂಕಟಾಚಲಪತಿ, ಹೊಳಲಿ ಹೋಸೂರು ಚಂದ್ರಪ್ಪ, ತೊರಗನದೊಡ್ಡಿ ಮಂಜುನಾಥ್, ಲಕ್ಷ್ಮೀಸಾಗರ ಕೃಷ್ಣಾರೆಡ್ಡಿ, ಅಗ್ರಹಾರ ಸೋಮೆಸನಹಳ್ಳಿ ನಾರಾಯಣಸ್ವಾಮಿ, ದೊಡ್ಣಹಳ್ಳಿ ಕೃಷ್ಣಪ್ಪ, ನಾಗೇಶ್ ಗೌಡ, ಹುಳಬಳ್ಳಿ ಜಗದೀಶ್, ವೆಂಕಟಪ್ಪ, ಚಿಕ್ಕತಿರುಪತಿ ಸಿದ್ದಾರೆಡ್ಡಿ, ಟಿ.ಎಂ. ರಾಮಪ್ರಸಾದ್, ಮಾಸ್ತೆನಹಳ್ಳಿ ನಂಜುಂಡಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.