ಸುದ್ದಿ ಸಂಕ್ಷೇಪ
ಪದಾಧಿಕಾರಿಗಳ ಆಯ್ಕೆ
ಮಾಲೂರು: ಜಯ ಕರ್ನಾಟಕದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೆ. ದಿನೇಶ್ಗೌಡ ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್ ಪಟ್ಟಣದ ಅರಳೇರಿ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಧ್ವಜ ನೀಡುವ ಮೂಲಕ ಅಧ್ಯಕ್ಷರ ಹೆಸರನ್ನು ಘೋಷಿಸಿದರು. ಆಯ್ಕೆಯಾದ ಇತರೆ ಪದಾಧಿಕಾರಿಗಳು ಕಾರ್ಯಾಧ್ಯಕ್ಷ- ಸುಮಂತ್, ಪ್ರಧಾನ ಕಾರ್ಯದರ್ಶಿ- ಕಡತೂರು ಗಜೇಂದ್ರ, ಉಪಾಧ್ಯಕ್ಷ- ಮಂಜುನಾಥ್, ರಘು, ಟೇಕಲ್ ಕೃಷ್ಣಮೂರ್ತಿ, ಲಕ್ಕೂರು ರಾಮಮೂರ್ತಿ, ಪುಟ್ಟಣ್ಣ. ಸಂಘಟನಾ ಕಾರ್ಯದರ್ಶಿಗಳು- ವೆಂಕಟೇಶ್, ಚೌರಮಂಗಲ ನಾಗರಾಜ್, ರವಿ, ಕುಡಿಯನೂರು ಲಘುಮೇಶ್, ಕೃಷ್ಣಪ್ಪ, ಪ್ರಶಾಂತ್ಗೌಡ. ಕಾರ್ಯಕಾರಿ ಸಮಿತಿ- ಅಲಂಬಾಡಿ ಮಲ್ಲೇಶ್, ಅಗ್ರಹಾರ ನಾರಾಯಣಸ್ವಾಮಿ, ಜಗದೇನಹಳ್ಳಿ ವೆಂಕಟೇಶ್, ರೇಲ್ವೇ ನಾಗೇಶ್. ನಗರಾಧ್ಯಕ್ಷ- ಮಂಜುನಾಥ್, ಕಾರ್ಯದರ್ಶಿ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಸಂದೀಪ್.
ಹಸು ತಿವಿದು ಮಹಿಳೆ ಸಾವು
ಬಾಗೇಪಲ್ಲಿ: ಹಸುವೊಂದು ತಿವಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗೂಳೂರು ಹೋಬಳಿ ಗೊರ್ತಪಲ್ಲಿ ಗ್ರಾ.ಪಂ ವ್ಯಾಪ್ತಿಯ ದೊನ್ನಗೊಂಡ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ಲಕ್ಷ್ಮೀದೇವಮ್ಮ(50) ಮೃತಪಟ್ಟಿರುವ ದುರ್ದೈವಿ. ಮಧ್ಯಾಹ್ನ 2 ಗಂಟೆಯಲ್ಲಿ ಹೊಲದಲ್ಲಿ ಮೇಯುತ್ತಿದ್ದ ಹಸು ಏಕಾಏಕಿಯಾಗಿ ಓಡಿಬಂದು ಮಹಿಳೆಗೆ ತಿವಿದಿದೆ. ತಕ್ಷಣ ಸಂಬಂಧಿಕರು ಹಾಗೂ ಗ್ರಾಮಸ್ಥರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಲಕ್ಷ್ಮೀ ದೇವಮ್ಮ ಮೃತಪಟ್ಟಿದ್ದಾಳೆ. ಬಾಗೇಪಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಷ ಕುಡಿದು ಗೃಹಿಣಿ ಆತ್ಮಹತ್ಯೆ
ಬಾಗೇಪಲ್ಲಿ: ಕುಟುಂಬ ಕಲಹದಿಂದ ಬೇಸತ್ತು ಗೃಹಿಣಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನಂಜಿರೆಡ್ಡಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಂಜಿರೆಡ್ಡಿಪಲ್ಲಿ ಗ್ರಾಮದ ನಾಗರಾಜ್ ಪತ್ನಿ ಶಾರದಮ್ಮ (34) ಎಂದು ಗುರುತಿಸಲಾಗಿದೆ. ಗಂಡ ಕುಡಿದು ಬಂದು ಪ್ರತಿದಿನ ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಾಂಬಾರಿನಲ್ಲಿ ವಿಷ ಬೆರೆಸಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜಮೀನೊಂದರಲ್ಲಿ ಬರುತ್ತಿದ್ದ ಕೆಟ್ಟ ವಾಸನೆ ಜಾಡು ಹಿಡಿದು ಹೋಗಿ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಘಟನೆಯ ಸ್ಥಳಕ್ಕೆ ಬಾಗೇಪಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ವಸಂತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಚಿನ್ನಾಭರಣ ಕಳವು
ಟೇಕಲ್: ಬನಹಳ್ಳಿಯ ಮನೆಯೊಂದರ ಹೊಗೆ ಗೂಡಿನಿಂದ ಕೆಳಗಿಳಿದ ಕಳ್ಳರು ಸುಮಾರು 3 ಲಕ್ಷ ರುಪಾಯಿ ಒಡವೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ಬೆಳಕಿಗೆ ಬಂದಿದೆ. ಬನಹಳ್ಳಿಯ ಕೆಂಪಣ್ಣ ಎಂಬವರ ಮನೆಯ ಬಿರುವಿನಲ್ಲಿದ್ದ ಒಂದು ನೆಕ್ಲೆಸ್, ಒಂದು ಚಿನ್ನದ ಹಾರ ಕಳುವಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಬಂದು ತನಿಖೆ ನಡೆಸಿದ್ದು ಕೋಲಾರ ಡಿವೈಎಸ್ಪಿ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಸ್ತಿ ಪಿಎಸ್ಐ ಸಿದ್ದಪ್ಪ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

