ಕೋಲಾರ

ಉತ್ತಮ ತರಬೇತಿಯಿಂದ ಉದ್ಯೋಗಾವಕಾಶ

Published On :

ಚಿಕ್ಕಬಳ್ಳಾಪುರ; ಉತ್ತಮ ತರಬೇತಿಯಿಂದ ಕೌಶಲ್ಯವನ್ನು ಗಳಿಸಿದವರಿಗೆ ಹೆಚ್ಚಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದು ಗೇಲ್ ಮಾನವ ಸಂಪನ್ಮೂಲ ಸಂಸ್ಥೆಯ ಅಧಿಕಾರಿ ಪತ್ರಿ ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದಲ್ಲಿರುವ ಗೈಲ್-ಲೇಬರ್ನೆಟ್ ಉದ್ಯೋಗ ಉನ್ನತಿ ಕೇಂದ್ರದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತರಬೇತಿಯನ್ನು ಪಡೆದವರಿಗೆ ಎನ್.ಎಸ್.ಡಿ.ಸಿ. ಪ್ರಮಾಣ ಪತ್ರವನ್ನು  ಮತ್ತು ಗೋದ್ರೇಜ್ ಕಂಪನಿಯಿಂದ ಕಿಟ್ ಅನ್ನು ವಿತರಿಸಿ ಅವರು ಮಾತನಾಡಿದರು.  ನಿರುದ್ಯೋಗಿಗಳು ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ವೃತ್ತಿಪರ ತರಬೇತಿ ಶಿಬಿರಗಳು ಹೆಚ್ಚಿಗೆ ಅನುಕೂಲವಾಗಿದ್ದು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ನಗರಸಭೆ ಸದ್ಯಸ್ಯೆ ಜಯಮ್ಮ ಮಾತನಾಡಿ, ವೃತ್ತಿಪರ ತರಬೇತಿಗಳ ಬಗ್ಗೆ ಒಬ್ಬರಿಂದ ಒಬ್ಬರಿಗೆ ಮಾಹಿತಿಯನ್ನು ತಲುಪಬೇಕು. ಈ ಮೂಲಕ ಹೆಚ್ಚಿನ ಜನರಿಗೆ ತರಬೇತಿ ನೀಡಬೇಕು.ಮಹಿಳೆಯರನ್ನು ಮುಖ್ಯವಾಹಿನಿಗೆ ತರಬೇಕು ಎಂದು ತಿಳಿಸಿದರು. ಕೇಂದ್ರದ ಸಂಯೋಜಕಿ ಚಂದ್ರಾವತಿ ಮಾತನಾಡಿ,ಬ್ಯೂಟಿಷಿಯನ್, ಸ್ಪೋಕನ್ ಇಂಗ್ಲಿಷ್, ಕೌಶಲ್ಯಗಳ ಎರಡು ತಿಂಗಳ  ತರಬೇತಿಯಲ್ಲಿ ತಲಾ 40 ಮಂದಿ ಭಾಗವಹಿಸಿದ್ದು ಉಚಿತ ಕೆಲಸದ ಮಾಹಿತಿಯನ್ನು 398 ಅಭ್ಯರ್ಥಿಗಳು ಪಡೆದಿದ್ದಾರೆ. ಮುಂದಿನ 2 ತಿಂಗಳು ನಡೆಯಲಿರುವ ತರಬೇತಿ ಶಿಬಿರಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು 7 ನೇ ತರಗತಿ ಮೇಲ್ಪಟ್ಟು ವ್ಯಾಸಂಗ ಮಾಡಿದಂತಹ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಜಿ.ಆರ್. ನಾರಾಯಣಸ್ವಾಮಿ, ಪುನೀತ್, ಶಿವರಾಜ್ಸೇನ್ ಖಾನ್, ನಿರ್ಮಲ, ಅಪ್ರೀನ್, ನರಸಿಂಹಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.