ಕೋಲಾರ

ರಾಜ್ಯ ಮಟ್ಟಕ್ಕೆ ಬೇಗೂರು ಶಾಲೆ

Published On :

ಸೂಲಿಬೆಲೆ: ಇಲ್ಲಿಗೆ ಸಮೀಪದ ಬೇಗೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಭಾಗವಹಿಸಿ ಪ್ರಥಮ ಬಹುಮಾನಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಿಆರ್ಪಿ ಹರೀಶ್ ತಿಳಿಸಿದ್ದಾರೆ.ಡಿ.27 ರಂದು ದೊಡ್ಡಬಳ್ಳಾಪುರದ ಸರ್ಕಾರಿ ಜೂನಿಯಾರ್ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಕಾರ್ಯಕ್ರಮವನ್ನು ನಡೆಸಲಾಯಿತು.ಇದರಲ್ಲಿ ಪಾಲ್ಗೊಂಡಿದ್ದ ಬೇಗೂರು ಸರ್ಕಾರಿ ಪ್ರೌಢಶಾಲೆಯ ಕುಮಾರಿ ಮಹಾಲಕ್ಷ್ಮಿ ಮತ್ತು ತಂಡದವರು  ಜನಪದ ಕಾರ್ಯಕ್ರಮದ ಡೊಳ್ಳು ಕುಣಿತ ನೃತ್ಯದಲ್ಲಿ ಉತ್ತಮ ಪ್ರದರ್ಶನದ ಮೂಲಕ ಪ್ರಥಮ ಬಹುಮಾನಗಳಿಸಿ ರಾಜ್ಯ ಮಟ್ಟಕ್ಕೆ  ಆಯ್ಕೆಯಾಗಿದ್ದಾರೆ.
ಬಮೂಲ್ ಹೊಸವರ್ಷದ ಕೊಡುಗೆ
ದೊಡ್ಡಬಳ್ಳಾಪುರ: ಬಮೂಲ್ ತನ್ನ ರೈತರು ಮತ್ತು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳಿಗೆ ಹೊಸವರ್ಷ ಮತ್ತು ಸಂಕ್ರಾಂತಿ ಉಡುಗೊರೆಯಾಗಿ ಪ್ರತಿ ಲೀಟರ್ ಹಾಲಿನ ಖರೀದಿಗೆ 2 ರು. ಹೆಚ್ಚಳ ಮಾಡುವ ನಿರ್ಧಾರ ಮಾಡಿದೆ ಎಂದು ಬಮೂಲ್ ನಿರ್ದೇಶಕ ಎನ್. ಹನುಮಂತೇಗೌಡ ತಿಳಿಸಿದರು. ಇಲ್ಲಿನ ಹಾಲು ಶೀಥಲ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊಸ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು, ಸರ್ಕಾರ ಪ್ರತಿ ಲೀಟರ್ ಹಾಲಿಗೆ ಕೊಡುವ ಸಬ್ಸಿಡಿ ಸೇರಿದಂತೆ ರೈತರಿಗೆ ಲೀಟರ್ ಹಾಲಿಗೆ 27 ರು. ಸಿಗಲಿದೆ ಎಂದ ಅವರು, ಇದರೊಟ್ಟಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿರುವವರಿಗೂ ಪ್ರೋತ್ಸಾಹ ಧನ ಹೆಚ್ಚುವರಿಯಾಗಿ ನೀಡುವ ನಿರ್ಧಾರ ಮಾಡಲಾಗಿದೆ. ಪ್ರತಿ ಲೀಟರ್ ಹಾಲಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ 30 ಪೈಸೆ ಹೆಚ್ಚುವರಿಯಾಗಿ ನೀಡುತ್ತಿದೆ. ಇದರಲ್ಲಿ ಸಂಘಕ್ಕೆ 15 ಪೈಸೆ ಮತ್ತು ಕಾರ್ಯದರ್ಶಿಗೆ 15 ಪೈಸೆ ಪ್ರತಿ ಲೀಟರ್ಗೆ ಸಂದಾಯವಾಗಲಿದೆ. ಅಲ್ಲದೆ ಸಂಘದ ನೌಕರರು ಮತ್ತು ಇತರ ವೆಚ್ಚಗಳಿಗೆ ನೆರವು ನೀಡಬೇಕೆಂಬ ಬೇಡಿಕೆಗೆ ಇದರಿಂದ ಸ್ಪಂದನೆ ಸಿಕ್ಕಂತಾಗಿದೆ. ರೈತರು ಗುಣಮಟ್ಟದ ಹಾಲು ನೀಡುವ ಮೂಲಕ ಬಮೂಲ್ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ವಿವರಿಸಿದರು.
'ಸದಸ್ಯತ್ವ ಹೆಚ್ಚಿಸಿದ ಕೀರ್ತಿ ನಮ್ಮದು'
ಕನಕಪುರ: ಕೆಲವೇ ಸಾವಿರಗಳಷ್ಟಿದ್ದ ಒಕ್ಕಲಿಗರ ಸಂಘದ ಸದಸ್ಯತ್ವವನ್ನು ಎರಡೂಕಾಲು ಲಕ್ಷಕ್ಕೇರಿಸಿದ ಕೀರ್ತಿ, ಶ್ರಮಗಳು ತಮ್ಮ ಅವಧಿಯಲ್ಲಿ ನಡೆದಿವೆ ಎಂದು ಒಕ್ಕಲಿಗರ ಸಂಘದ ನೂತನ ಸದಸ್ಯತ್ವ ಸಮಿತಿ ಅಧ್ಯಕ್ಷ ಎ.ಪ್ರಸಾದ್ ಹೇಳಿದ್ದಾರೆ. ಅವರು ಕನಕಪುರದ ಎಸ್.ಬಿ.ಕಲ್ಯಾಣ ಮಂಟಪದಲ್ಲಿ ಸ್ವಚ್ಛ ಪಾರದರ್ಶಕ ಆಡಳಿತದ ನೇತಾರ ಪ್ರೊ.ಎಂ.ನಾಗರಾಜ್ ನೇತೃತ್ವದ ತಂಡದ ಪರವಾಗಿ ಮತಯಾಚನೆ ನಡೆಸಿ ಮಾತನಾಡುತ್ತಿದ್ದರು.  ವಿಪ  ಮಾಜಿ ಸದಸ್ಯ ಎಸ್.ರವಿ ಅಧ್ಯಕ್ಷತೆ ವಹಿಸಿದ್ದರು. ಅಭ್ಯರ್ಥಿ ಸೂರನಹಳ್ಳಿ ಜಯರಾಮೇಗೌಡ ಮಾತನಾಡಿ, ಪಸರಿಸುವ ಕ್ರಿಯಾಶೀಲ ತಂಡವನ್ನು ಪ್ರಜ್ಞಾವಂತ ಮತದಾರರು ಆರಿಸಬೇಕಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.