ಕೋಲಾರ

ಕುವೆಂಪು ಬದುಕು-ಬರಹ ವಿಚಾರ ಸಂಕಿರಣ

Published On :

ಮಾಲೂರು: ರಾಜ್ಯ ಸರ್ಕಾರ ನಾಡಗೀತೆ ಸಾಲುಗಳ ಬಗ್ಗೆ ಗಟ್ಟಿಯಾದ ನಿಲವು ಹೊಂದುವ ಮೂಲಕ ರಾಷ್ಟ್ರ ಕವಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕು ಎಂದು ಲೇಖಕ ರಾಜಕುಮಾರ್ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಸಾಪ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಅಂಗವಾಗಿ ಪಟ್ಟಣ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುವೆಂಪು ಬದುಕು-ಬರಹ ವಿಚಾರ ಸಂಕಿರಣದಲ್ಲಿ ಉಪಾನ್ಯಾಸ ನೀಡಿ, ಹತ್ತು ವರ್ಷಗಳ ಹಿಂದೆ ಕುವೆಂಪು ಅವರ ಜೈ ಭಾರತ ಜನನಿಯ ತನುಜತೆ ಗೀತೆಯನ್ನು ನಾಡಗೀತೆ ಎಂದು ಒಪ್ಪಿ ಆದೇಶಿಸಿತ್ತು. 7 ನಿಮಿಷಗಳ ನಾಡಗೀತೆಯ 44 ಸಾಲುಗಳಲ್ಲಿ ಯಾವ ಸಾಲುಗಳ ಇರಬೇಕು ಎಂಬುದರ ಬಗ್ಗೆ ಡಾ.ಜಿ.ಎಸ್. ಶಿವರುದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ಇದುವರೆಗೂ ನಾಡಗೀತೆಯ ಸಾಲಿನ ಮಿತಿಗೆ, ಧಾಟಿಗೆ  ಹಾಗೂ ರಾಗಕ್ಕೆ ರಾಜ್ಯ ಸರ್ಕಾರ ಸ್ವಷ್ಟ ನಿಲುವನ್ನು ಪ್ರಕಟಸಿಲ್ಲ. ಇದರಿಂದ ರಾಜ್ಯದ ಎಲ್ಲ ಕಾರ್ಯಕ್ರಮಗಳಲ್ಲಿ ತಮಗೆ ಇಷ್ಟ ಬಂದ ರೀತಿಯ ರಾಗದಲ್ಲಿ ಹಾಡುತ್ತಿದ್ದಾರೆ.ನಾಡಗೀತೆಗೆ ತನ್ನದೇ ಆದ ಗೌರವ ಇರುವುದರಿಂದ ರಾಜ್ಯ ಸರ್ಕಾರ ತಕ್ಷಣ ನಾಡಗೀತೆ ಬಗ್ಗೆ ಸ್ವಷ್ಟ ನಿಲವು ಪ್ರಕಟಿಸಿ ರಾಷ್ಟ್ರ ಕವಿಗೆ ಗೌರವ ನೀಡಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಮಾಜಿ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ವಿಶ್ವದ ದೊಡ್ಡ ಚಿಂತಕರಾಗಿದ್ದ ಕುವೆಂಪು ಅವರು ಸಮನ್ವಯ ಕವಿಗಳಾಗಿದ್ದರು ಎಂದರು. ಬಾಪೂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ. ಹನುಮಂತಯ್ಯ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂ. ಚಂದ್ರಪ್ಪ, ಜ.ಮು. ಚಂದ್ರ, ರಾಮಕೃಷ್ಣಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರವೀಂದ್ರ, ಕಲಾವಿದ ಸ್ವಾಮಿ, ಗಾಯಕ ಗುಲ್ಜಾರ್, ದಯಾನಂದ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.