ಕೋಲಾರ

ರಸಋಷಿಗೆ ಅನಂತ ನಮನ

Published On :

ಕ.ಪ್ರ.ವಾರ್ತೆ     ಕೋಲಾರ     ಡಿ.29
ಶ್ರೀ ರಾಮಾಯಣ ದರ್ಶನ ಕುರಿತ ಮಹಾಕಾವ್ಯ ರಚನೆಕಾರ ಡಾ. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು)ರವರ 109ನೇ ಜಯಂತಿಯನ್ನು ವಿವಿಧ ಸಂಘಟನೆಗಳಿಂದ ಭಾನುವಾರ ನಗರದಲ್ಲಿ ಸರಳವಾಗಿ ಆಚರಿಸಲಾಯಿತು.
ನಗರದ ಅಂತರಗಂಗೆ ರಸ್ತೆಯಲ್ಲಿನ ಕುವೆಂಪು ಪಾರ್ಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮೀಣಣ್ಶೆಟ್ಟಿ ಬಣದಿಂದ ಸರಳವಾಗಿ ಕಾರ್ಯಕ್ರಮ ಏರ್ಪಡಿಸಿ, ಕುವೆಂಪು ಪುತ್ಥಳಿಗೆ ಪುಷ್ಪಾರ್ಚನೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯವರೇ ಆದ ಪ್ರಸ್ತುತ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗುಪ್ತಚರ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಬ್ದುಲ್ ರೆಹಮಾನ್ ಅವರು ಕುವೆಂಪು ರಚಿಸಿರುವ ಓ ನನ್ನ ಚೇತನ, ಆಗು ನೀ ಅನಿಕೇತನ..ಭಾವಗೀತೆಯನ್ನು ಹಾಡಿ ರಾಷ್ಟ್ರಕವಿಗೆ ಗಾಯನ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಮುಖಂಡರಾದ ಎ.ಪರಮೇಶ್, ಚಂಬೆ ರಾಜೇಶ್, ನಗರಸಭೆ ಸದಸ್ಯರಾದ ಮಂಜುನಾಥ್, ಮಾಜಿ ಸದಸ್ಯ ಕೀಲುಕೋಟೆ ಕೃಷ್ಣಪ್ಪ,ಪರ್ವೇಜ್, ಪತ್ರಕರ್ತ ಕೆ.ಎಸ್. ಗಣೇಶ್ ಮುಂತಾದವರಿದ್ದರು.
ಪುಷ್ಪಾರ್ಚನೆ: ನಂತರ ಜಯ ಕರ್ನಾಟಕ ಸಂಘಟನೆಯಿಂದ ಇದೇ ಕುವೆಂಪು ಪಾರ್ಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಕುವೆಂಪು ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
ಇದಕ್ಕೂ ಮುಂಚೆ ನಗರದ ಡೂಮ್ಲೈಟ್ ವೃತ್ತದಲ್ಲಿ ಕುವೆಂಪು ಭಾವಚಿತ್ರ ಅನಾವರಣ ಮಾಡಿ ನಮನ ಸಲ್ಲಿಸಲಾಯಿತಲ್ಲದೆ, ಜನರಿಗೆ ಸಿಹಿ ಹಂಚಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್, ಮುಖಂಡರಾದ ಕೀಲುಕೋಟೆ ಆಂಜನಪ್ಪ, ಮೊಹಮದ್ ಆಲಿ, ಬಿ.ವಿ. ಶಿವಕುಮಾರ್, ಬಿ. ರಾಂಸಿಂಗ್, ಕೆ.ಎಂ. ಗೋವಿಂದರಾಜು ಇದ್ದರು.
ಸಿರಿಗನ್ನಡ ವೇದಿಕೆಯಿಂದ ನುಡಿ ನಮನ: ಸಿರಿಗನ್ನಡ ವೇದಿಕೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ನಾರಾಯಣಪ್ಪನವರು ಕುವೆಂಪುರವರ ವಿಚಾರ ಧಾರೆಗಳನ್ನು ತಿಳಿಸಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಾ. ಮೌನಿ, ದೇವರಾಜ್ ಅರಪ್, ಹಣಬೆ ನಾಪೇಗೌಡ, ಅಲಿಫ್ ಸಾಬ್, ಸುಬ್ರರಾಯಪ್ಪ, ರವೀಂದ್ರಸಿಂಗ್, ಡ್ಯಾನಿಡ್ ಕೃಷ್ಣಮೂರ್ತಿ, ಶರಣಪ್ಪ ಗಬ್ಬೂರು, ಮಹೇಶರಾವ್ ಕದಂ, ಅರಿನಾಗನಹಳ್ಳಿ ಅಮರನಾಥ ಅವರು ಕುವೆಂಪು ಬರೆದ ಸ್ವರಚಿತ ಕವನಗಳನ್ನು ವಾಚಿಸಿದರು, ಪೋಸ್ಟ್ ನಾರಾಯಣಸ್ವಾಮಿ, ಪಿ. ನಾರಾಯಣಪ್ಪ, ಸಿ. ಯಲ್ಲಪ್ಪ, ಕರಡ ರಾಮಚಂದ್ರಪ್ಪ ಗಾಯನ ಗಮನ ಸೆಳೆಯಿತು. ಪ್ರಾದೇಶಿಕ ಸಾರಿಗೆ ಇಲಾಖೆಯ ತಾಂತ್ರಿಕ ಅಧಿಕಾರಿ ಶಿವಕುಮಾರ್ ಇದ್ದರು. ಅಲೀಫ್ ಸಾಬ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.