ಕೋಲಾರ

ಅಪೂರ್ಣ ಕಟ್ಟಡದಲ್ಲಿ ಪಾಠ ಕೇಳುವ ದುಸ್ಥಿತಿ

Published On :

ಬಂಗಾರಪೇಟೆ: ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುವಷ್ಟು ಒತ್ತು ಬೇರೆ ಕ್ಷೇತ್ರಕ್ಕೆ ಕೊಡುತ್ತಿಲ್ಲ. ಆದರೆ ತಾಲೂಕಿನ ಸರ್ಕಾರಿ ಶಾಲೆಯ ಸ್ಥಿತಿನೋಡಿದರೆ ಸರ್ಕಾರ ನೀಡುವ ಹಣ ಎಲ್ಲಿ ಪೋಲಾಗುತ್ತಿದೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ತಾಲೂಕಿನ ಮಾಗೊಂದಿ ಪಂಚಾಯ್ತಿ ಕೇಂದ್ರದಲ್ಲಿರುವ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಕೊಠಡಿಗಳ ಕೊರತೆಯಿಂದ ಪ್ರತಿದಿನ ಮಕ್ಕಳು ಅರ್ಧಕ್ಕೆ ನಿಂತಿರುವ ಕೊಠಡಿಯಲ್ಲೆ ಕುಳಿತು ಪಾಠಗಳನ್ನು ಕೇಳುವಂತಾಗಿದೆ.ಪೋಷಕರು ಈ ಶಾಲೆಯನ್ನು ನೋಡಿದರೆ ಸರ್ಕಾರಿ ಶಾಲೆಗಳ ಸಹವಾಸವೇ ಬೇಡ ಎನ್ನುವುದರಲ್ಲಿ ಸಂಶಯವಿಲ್ಲ. ಶಾಲೆಯಲ್ಲಿ 1,150 ಮಕ್ಕಳಿದ್ದಾರೆ ಇವರಿಗೆ ಕೇವಲ 7ಕೊಠಡಿಗಳು ಮಾತ್ರ ಇದ್ದು, ಇಷ್ಟು ಮಕ್ಕಳನ್ನು ಪ್ರತ್ಯೇಕವಾಗಿ ಪಾಠ ಮಾಡಲು ಶಿಕ್ಷಕರಿಂದ ಸಾಧ್ಯವಾಗುತ್ತಿಲ್ಲ. ಹಿಂದೆ ಶಾಸಕರಾಗಿದ್ದ ಎಂ. ನಾರಾಯಣಸ್ವಾಮಿ ಶಾಸಕರ ನಿಧಿಯಿಂದ ಕೊಠಡಿಗಳ ಕೊರತೆ ನೀಗಿಸಲು 1.5ಲಕ್ಷದಲ್ಲಿ ಒಂದು ಕೊಠಡಿ ನಿರ್ಮಾಣಕ್ಕೆ ತಮ್ಮ ಆಪ್ತರಾಗಿದ್ದ ಮಾಗೊಂದಿ ಶ್ರೀನಿವಾಸನಾಯ್ಡು ಅವರಿಗೆ ಗುತ್ತಿಗೆ ನೀಡಿದ್ದರು, ನಂತರ ಎಂ. ನಾರಾಯಣಸ್ವಾಮಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಮತ್ತೆ ಉಪ ಚುನಾವಣೆಯಲ್ಲಿ ಗೆದ್ದರೂ ಅವರ ಆಪ್ತ ಶ್ರೀನಿವಾಸನಾಯ್ಡು ನಾರಾಯಣಸ್ವಾಮಿರನ್ನು ಹಿಂಬಾಲಿಸದ ಕಾರಣ ಕೊಠಡಿ ನಿರ್ಮಾಣಕ್ಕೆ ಅನುದಾನ ಮೊಟಕುಗೊಳಿಸಿದ್ದರು. ಅಂದಿನಿಂದ ಕೊಠಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ.  ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ, ತಾಪಂ ಉಪಾಧ್ಯಕ್ಷ ಸಂಪಂಗಿರೆಡ್ಡಿ ಸ್ವಗ್ರಾಮವಾಗಿದ್ದರೂ ಗಮನ ಹರಿಸುತ್ತಿಲ್ಲ, ಇನ್ನಾದರು ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗಮನ ನೀಡಲಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.