ಜಾಗ ಗುರ್ತಿಸಲು 10 ದಿನಗಳ ಗಡುವು
ಮಾಲೂರು: ಪುರಸಭೆಯಲ್ಲಿ ಹಣ ಕಟ್ಟಿರುವವರಿಗೆ ನಿವೇಶನ ವಿತರಿಸಲು ನೂತನವಾಗಿ ರಚಿಸಲಾಗಿರುವ ಪುರಸಭೆ ಸದಸ್ಯರ ಸಮಿತಿ ಮುಂದಿನ 10 ದಿನಗಳಲ್ಲಿ ನಿವೇಶನಕ್ಕಾಗಿ ಜಮೀನು ಗುರ್ತಿಸುವ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಶಾಸಕ ಕೆ.ಎಸ್. ಮಂಜುನಾಥ್ ಹೇಳಿದರು.
ಅವರು ಸೋಮವಾರ ಇಲ್ಲಿನ ಪುರಸಭೆಯಲ್ಲಿ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರ ಸಭೆ ನಡೆಸಿದ ನಂತರ ಪತ್ರಕರ್ತರೊಡನೆ ಮಾತನಾಡುತ್ತ ಪಟ್ಟಣದ ಸುತ್ತಮುತ್ತಲೂ ಜಮೀನಿನ ಬೆಲೆ ಬಹಳ ಹೆಚ್ಚಾಗಿರುವುದರಿಂದ ಹೊಸೂರು ರಸ್ತೆಯ ಸೀತಾನಾಯಕನಹಳ್ಳಿ ಬಳಿ ಆಶ್ರಯ ನಿವೇಶನಕ್ಕೆ ಜಮೀನನ್ನು ಗುರ್ತಿಸಲಾಗಿದ್ದು,ಒಂದು ವೇಳೆ ಸಮಿತಿ ಒಪ್ಪಿದಲ್ಲಿ ಮುಂದಿನ ವಾರವೇ ಜಮೀನನ್ನು ಕ್ರಯ ಮಾಡಲಾಗುವುದು ಎಂದರು.ಪಟ್ಟಣದಲ್ಲಿ ಕುಡಿವ ನೀರಿಗಾಗಿ 20 ಕೊಳವೆಬಾವಿ ಕೊರೆಸಲು ಅನುಮತಿ ನೀಡಲಾಗಿದೆ ಎಂದ ಶಾಸಕರು ಒಳ ಚರಂಡಿ ಕೊಳಚೆ ನೀರಿನ ಪ್ಲಾಂಟ್ ಗಾಗಿ ಕೆರೆ ಬಳಿಯ ಜಮೀನು ಖರೀದಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಪ್ಲಾಂಟ್ನ್ನು ಶೀಘ್ರವಾಗಿ ನಿರ್ಮಿಸಲಾಗುವುದು ಎಂದರು. ಪಟ್ಟಣದ ಬಹುತೇಕ ರಸ್ತೆಗಳಿಗೆ ಡಾಂಬರೀಕರಣವಾಗಬೇಕಾಗಿದ್ದು, ಪಟ್ಟಣದ ಜನತೆ ಕೊಡಲೇ ಒಳ ಚರಂಡಿಗೆ ಪೈಪ್ ಅಳವಡಿಸುವ ಕಾಮಗಾರಿಗೆ ಸಹಕಾರ ನೀಡಬೇಕಾಗಿ ವಿನಂತಿಸಿದರು.
ರಾಜ್ಯ ಸರ್ಕಾರ ಪೈಪ್ ಅಳವಡಿಕೆಗೆ 2,25 ಕೋಟಿ ರು. ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದು, ಯೋಜನೆಯ ಹಣ ಬಂದ ತಕ್ಷಣ ಈಗ ಕಾಮಗಾರಿಗೆ ವಿನಿಯೋಗಿಸಿದವರಿಗೆ ಹಣ ಪಾಪಸು ನೀಡುವುದಾಗಿ ತಿಳಿಸಿದ ಶಾಸಕರು ಕಾಮಗಾರಿಗಾಗಿ ನೀಡಿರುವ ಹಣದ ರಸೀದಿಯನ್ನು ಜೋಪಾನವಾಗಿ ಇಟ್ಟುಕೊಂಡಿರುವುದು ಅವಶ್ಯ ಎಂದರು.ತಾಲೂಕು ಆಡಳಿತದಲ್ಲಿ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಮಾಲೂರು ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ 3 ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಸರ್ಕಾರಿ ಕ:ಕೇರಿಗಳಲ್ಲಿ ಸಿಸಿ ಟಿವಿಯನ್ನು ಅಳವಡಿಸಲಾಗಿದೆ ಎಂದ ಶಾಸಕರು ಸಾರ್ವಜನಿಕರಿಂದ ದೂರು ಬಂದ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದರು. ರಾಜ್ಯ ಸರ್ಕಾರ ಪುರಸಭೆ ಚುನಾವಣೆ ನಡೆದು 10 ತಿಂಗಳಾದರೂ ಸದಸ್ಯರಿಗೆ ಅಧಿಕಾರ ನೀಡದಿರುವುದು ಪ್ರಜಾಪ್ರಭುತ್ವದ ಅಣಕ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

