ಸರಳ ಸಾಮೂಹಿಕ ವಿವಾಹಕ್ಕೆ ಆದ್ಯತೆ ಅವಶ್ಯಕ
ಚಿಂತಾಮಣಿ: ಆಡಂಬರ ಮದುವೆಗಳಿಗೆ ಜನರು ಮಾರು ಹೋಗದೆ ಸರಳ ಸಾಮೂಹಿಕ ವಿವಾಹಗಳಲ್ಲಿ ಪಾಲ್ಗೊಂಡು ಸಮಾಜ ಸುಧಾರಣೆಗೆ ಮುಂದಾಗಬೇಕೆಂದು ಸಮಾಜ ಸೇವಕ ಹಾಗೂ ಉದ್ಯಮಿ ಎಸ್.ವಿ.ನರೇಶ್ಕುಮಾರ್ ಕರೆ ನೀಡಿದರು.
ತಾಲೂಕಿನ ಮುರುಗಮಲೆ ಶ್ರೀ ಮುಕ್ತೀಶ್ವರ ಬೆಟ್ಟದ ಶ್ರೀರಾಮ ಸೌರಭ ಕಲ್ಯಾಣ ಮಂಟಪದಲ್ಲಿ ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಉಚಿತ ಸಾಮೂಹಿಕ ವಿವಾಹಗಳ ರೂಪುರೇಷೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ತಾಲೂಕು ವ್ಯಾಪ್ತಿಯಲ್ಲಿ ಅಲ್ಪ ಮಳೆಯಿಂದ ಜನರು ಸಂಕಷ್ಠದಲ್ಲಿದ್ದಾರೆ. ಆದ್ದರಿಂದ ಜನರು ಸಾಲ ಸೋಲ ಮಾಡಿ ಆಡಂಬರ ಮದುವೆಯಿಂದ ಸಂಕಷ್ಟಕ್ಕೆ ಸಿಲುಕದೆ ಸಾಧ್ಯವಾದಷ್ಟೂ ಸರಳ ವಿವಾಹಕ್ಕೆ ಮುಂದಾಗಬೇಕೆಂದರು.
ಫೆ.24ರಂದು ದಾವಣಗೆರೆ ಜಿಲ್ಲೆ ರಾಜೇನಹಳ್ಳಿಯ ಮಹರ್ಷಿ ವಾಲ್ಮೀಕಿ ಪೀಠಾಧಿಪತಿಗಳಾದ ಶ್ರೀ ವಾಲ್ಮೀಕಿ ನಂದಪುರಿ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಮುರುಗಮಲೆ ಗ್ರಾಮದಲ್ಲಿ ನೂರೊಂದು ಉಚಿತ ಸಾಮೂಹಿಕ ವಿವಾಹ ಮಾಡಲು ತೀರ್ಮಾನಿಸಲಾಗಿದೆ. ಗ್ರಾಮದ ಎಲ್ಲ ವರ್ಗದ ಹಾಗೂ ಸಂಘಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು. ತಾಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ಎಲ್ಲ ವರ್ಗದ ಜನರು ಈ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳುವ ವಧುವರರಿಗೆ ಉಚಿತ ವಸ್ತ್ರ, ಕಾಲುಂಗರ, ಮಾಂಗಲ್ಯ ಮತ್ತು ಪಾತ್ರೆ ಸಾಮಾನುಗಳನ್ನು ವಿತರಿಸಲಾಗುವುದು. ವಿವಾಹಕ್ಕೆ ಬರುವ ವಧುವರರ ಕಡೆಯ ಪ್ರತಿಯೊಬ್ಬರಿಗೂ ಊಟದ ವ್ಯವವ್ಥೆ ಮಾಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ತಾಲೂಕು ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಚನ್ನರಾಯಪ್ಪ ಮಾತನಾಡಿ, ಉಚಿತ ಸಾಮೂಹಿಕ ವಿವಾಹ ಯಾವುದೇ ಜಾತಿ ಮತಕ್ಕೆ ಸೀಮಿತವಾಗಿಲ್ಲದೆ ಕಾನೂನು ವಯೋವುತಿ ಪ್ರಕಾರ ನಡೆಯಲಿವೆ. ಇದು ಯಾವುದೇ ರಾಜಕೀಯ ದುರುದ್ದೇಶವಿಲ್ಲದೆ ಜಾತ್ಯಾತೀತವಾಗಿ ನಡೆಯುವ ಕಾರ್ಯಕ್ರಮ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಕೌನ್ಸೆಲರ್ ವೆಂಕಟೇಶ್, ಕೆ.ಎಂ.ನಾಗರಾಜ್, ಆಂಜಪ್ಪ, ಶಿವಣ್ಣ, ರಾಜಣ್ಣ, ಮುನಿರಾಜು, ಗಂಡ್ರಗಾನಹಳ್ಳಿ ಸೀನಪ್ಪ, ನಾರಮಾಕಲಹಳ್ಳಿ ರಾಮಚಂದ್ರಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

