ಸಾಂಕ್ರಾಮಿಕ ರೋಗ ಭೀತಿ: ನಿವಾಸಿಗಳ ಆತಂಕ
ಗುಡಿಬಂಡೆ: ಪಟ್ಟಣದ 1ನೇ ವಾರ್ಡ್ನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶೌಚಾಲಯದ ಗುಂಡಿಯಿಂದ ಹೊರಬರುತ್ತಿರುವ ಕಲುಷಿತ ನೀರಿನಿಂದ ಅಕ್ಕಪಕ್ಕದ ಜನತೆ ದುರ್ವಾಸನೆಯ ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ವಾಸ ಮಾಡುತ್ತಿದ್ದಾರೆಂದು ವಾರ್ಡ್ ಸದಸ್ಯ ರಾಜಣ್ಣ ತಿಳಿಸಿದ್ದಾರೆ.
ಈಗಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯು ಮೆಟ್ರಿಕ್ಪೂರ್ವಬಾಲಕಿಯರ ಹಾಸ್ಟೆಲ್ ಕಟ್ಟಡವಾಗಿದ್ದು, ಸದರಿ ವಸತಿ ಶಾಲೆಗೆ ಸ್ವಂತ ಕಟ್ಟಡವಿಲ್ಲದ ಕಾರಣ ಈ ಹಾಸ್ಟೆಲ್ನ್ನು ಬಳಸಿಕೊಳ್ಳುತ್ತಿದ್ದಾರೆ. ವಸತಿ ಶಾಲೆಯಲ್ಲಿನ ಸುಮಾರು 150 ಮಕ್ಕಳು ಹಾಸ್ಟೆಲ್ನಲ್ಲಿರುವ ಸ್ನಾನದ ಕೊಣೆಗಳು ಹಾಗೂ ಶೌಚಾಲಯಗಳನ್ನು ಬಳಸುತ್ತಿದ್ದು, ಇವುಗಳಿಂದ ಬರುವ ಕಲುಷಿತ ನೀರು ಹಾಗೂ ದುರ್ವಾಸನೆ ಅಕ್ಕಪಕ್ಕದ ನಿವಾಸಿಗಳನ್ನು ಸಾಂಕ್ರಾಮಿಕ ರೋಗಗಳಿಗೆ ಈಡುಮಾಡುವ ಭೀತಿ ಒದಗಿದೆ. ಶೌಚಾಲಯ ಹಾಗೂ ಸ್ನಾನದ ಕೋಣೆಗಳಿಂದ ಬರುವ ಕಲುಷಿತ ನೀರನ್ನು ವಸತಿ ನಿಲಯದಲ್ಲಿ ಪಕ್ಕದಲ್ಲಿ ನಿರ್ಮಿಸಿರುವ ಗುಂಡಿಯೊಂದಕ್ಕೆ ಸೇರುವಂತೆ ಏರ್ಪಾಡು ಮಾಡಲಾಗಿದೆ. ಸದರಿ ಗುಂಡಿಯನ್ನು ಬಂಡೆಯೊಂದರ ಮೇಲೆ ನಿರ್ಮಿಸಲಾಗಿದ್ದು, ನೀರು ಇಂಗಲು ಆಸ್ಪದವಿಲ್ಲದಂತಾಗಿ ಸಮಸ್ಯೆ ಉದ್ಭವಿಸಿದೆ.
ವಸತಿ ಶಾಲೆಯ ಮುಂಭಾಗದಲ್ಲಿ ಸಾಕಷ್ಟು ಸ್ಥಳ ಇದ್ದು, ಅಲ್ಲಿ ಇಂಗು ಗುಂಡಿಯನ್ನು ನಿರ್ಮಿಸಲು ಅವಕಾಶವಿದೆ ಆದರೆ ಇದರ ಬಗ್ಗೆ ಗಮನಹರಿಸದೇ ಅವೈಜ್ಞಾನಿಕವಾಗಿ ಶೌಚಾಲಯದ ಗುಂಡಿ ನಿರ್ಮಿಸಿರುವುದು ನಿವಾಸಿಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ವಸತಿ ನಿಲಯದ ಮುಖ್ಯಸ್ಥರು ಸೇರಿ ಪ.ಪಂ. ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮೌಖಿಕವಾಗಿ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಹಾಗೂ ವಾರ್ಡ್ ಸದಸ್ಯ ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

