ಕೋಲಾರ

ಪುರಸಭಾ ಕಚೇರಿಗೆ ನುಗ್ಗಿ ಸದಸ್ಯನ ದಾಂದಲೆ

Published On :

ಶಿಡ್ಲಘಟ್ಟ: ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಪುರಸಭಾ ಸದಸ್ಯ ಕಚೇರಿಗೆ ನುಗ್ಗಿ ದಾಂದಲೆ ನಡೆಸಿ ಪುರಸಭಾ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ದೂರು ನೀಡಲು ಮುಂದಾಗಿದ್ದ ಘಟನೆ ನಡೆಯಿತು.
ವಾರ್ಡಗೆ ಸರಿಯಾಗಿ ಕುಡಿವ ನೀರು ಪೂರೈಕೆಯಾಗುತ್ತಿಲ್ಲ, ಅನೇಕ ಬಾರಿ ಮನವಿಗಳನ್ನು ಕೊಟ್ಟಿದ್ದರೂ ಪುರಸಭೆಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಏಕಾಏಕಿ ಪುರಸಭೆಯ ಮುಖ್ಯಾಧಿಕಾರಿ ಕೊಠಡಿಗೆ ನುಗ್ಗಿದ ಪುರಸಭಾ ಸದಸ್ಯ ಹಾಗೂ ಕೆಲವು ಮಂದಿ ಮುಖ್ಯಾಧಿಕಾರಿಯ ಕುರ್ಚಿಯ ಮುಂದಿನ ಗಾಜನ್ನು ಹೊಡೆದು ಹಾಕಿ, ಅದೇ ಗಾಜಿನ ಚೂರನ್ನು ತೆಗೆದುಕೊಂಡು ಸಿಬ್ಬಂದಿ ಮೇಲೆ ಹಲ್ಲೆನಡೆಸಲು ಮುಂದಾದರೂ ಪಕ್ಕದಲ್ಲೆ ಇದ್ದ ಎಂಜಿನಿಯರ್ ಪ್ರಸಾದ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಪುರಸಭೆ ಸಿಬ್ಬಂದಿ ನೇರವಾಗಿ ಪಟ್ಟಣದ ಪುರಠಾಣೆಗೆ ದೂರು ನೀಡಲು ಆಗಮಿಸುತ್ತಿದ್ದಂತೆ ಜಮಾಯಿಸಿದ ಜನತೆಯಿಂದಾಗಿ ಠಾಣೆಯ ಮುಂದೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಇನ್ನುಳಿದ ಕೆಲವು ಮಂದಿ ಪುರಸಭಾ ಸದಸ್ಯರು ಜಮಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾದರೂ, ಠಾಣೆಯ ಹೊರಗೆ ಜಮಾಯಿಸಿದ್ದ ಪುರಸಭಾ ಸದಸ್ಯನ ಬೆಂಬಲಿಗರ ಗೊಂದಲದಿಂದಾಗಿ ಸಭಾಂಗಣದಲ್ಲಿ ಘಟನೆಯ ಬಗ್ಗೆ ವಿಚಾರಣೆ ಮಾಡಲು ತೀಮರ್ನಿಸಿ ಪುರಸಭೆಗೆ ಬರುತ್ತಿದ್ದಂತೆ ಅಲ್ಲಿಯೂ ಜಮಾಯಿಸಿದ ಸದಸ್ಯನ ಬೆಂಬಲಿಗರು ಪುರಸಭೆ ಅಧಿಕಾರಿಗಳ ವಿರುಧ್ದ ದಿಕ್ಕಾರಗಳನ್ನು ಕೂಗಲು ಮುಂದಾಗಿ ರಸ್ತೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.
ಒಂದು ಹಂತದಲ್ಲಿ ಅಧಿಕಾರಿಗಳು ಹಾಗೂ ಪುರಸಭೆಯ ಸದಸ್ಯರ ನಡುವೆಯೆ ಇದ್ದ ಗಲಾಟೆ ಜಾತಿ ಸಂಘರ್ಷಕ್ಕೆ ತಿರುಗಿತು. ಪುರಸಭೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಸದಸ್ಯ ಜಬೀವುಲ್ಲಾ ಬೆಂಬಲಿಗರು ಪುರಸಭೆಯ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧವಾಗಿ ಘೋಷಣೆಗಳನ್ನು ಕೂಗುವ ಭರದಲ್ಲಿ ಪುರಸಭೆಯ ಅಧಿಕಾರಿಗಳಿಗೆ ಅಲ್ಪಸಂಖ್ಯಾತರನ್ನು ಕಂಡರೆ ಆಗುವುದಿಲ್ಲವೆಂದು ಘೋಷಣೆ ಕೂಗಿದಾಗ ಪಕ್ಕದಲ್ಲೆ ಇದ್ದ ಮತ್ತೊಬ್ಬ ಸದಸ್ಯ ಕೇಶವಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡು ಬಂದಿರುವ ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬದಲಾಗಿ ಜಾತಿ ರಾಜಕೀಯವನ್ನು ಮಾಡಬೇಡಿ, ಇದು ಒಳ್ಳೆಯ ಬೆಳವಣಿಗೆಯಲ್ಲವೆಂದರು.
ಕೊನೆಗೆ ಪುರಸಭೆಯ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಸದಸ್ಯರು, ನೌಕರರು ಮಧ್ಯೆ ಸಂಧಾನ ಸಭೆಯನ್ನು ನಡೆಸಿ ಇಂತಹ ಅಚಾತುರ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು, ವಾರ್ಡನಲ್ಲಿರುವ ಸಮಸ್ಯೆಗಳನ್ನು ಈಡೇರಿಸಲು ಮುಖ್ಯಾಧಿಕಾರಿ ಒಪ್ಪಿಕೊಂಡ ನಂತರ ಪರಿಸ್ಥಿತಿ ತಿಳಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.